Redmi Note 11T 5G: ಭಾರತದಲ್ಲಿ ಬಿಡುಗಡೆ ಆಯ್ತು ಮೊಬೈಲ್ ಪ್ರಿಯರ ನಿದ್ದೆ ಕದ್ದ ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್: ಬೆಲೆ, ವಿಶೇಷತೆ ಇಲ್ಲಿದೆ | Redmi Note 11T 5G Xiaomi sub brand Redmi launched new affordable smartphone Redmi Note 11T 5G in India


Redmi Note 11T 5G: ಭಾರತದಲ್ಲಿ ಬಿಡುಗಡೆ ಆಯ್ತು ಮೊಬೈಲ್ ಪ್ರಿಯರ ನಿದ್ದೆ ಕದ್ದ ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್: ಬೆಲೆ, ವಿಶೇಷತೆ ಇಲ್ಲಿದೆ

Redmi Note 11T 5G

ಮೊಬೈಲ್ (Mobile) ಪ್ರಿಯರು ಕಳೆದೊಂದು ತಿಂಗಳುಗಳಿಂದ ಕಾದು ಕುಳಿತಿದ್ದ ಸ್ಮಾರ್ಟ್​ಫೋನ್ (Smartphone) ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಶವೋಮಿ ಕಂಪೆನಿಯ ಬಹುನಿರೀಕ್ಷಿತ ರೆಡ್ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್​ಫೋನ್ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅನಾವರಣಗೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದಿಷ್ಟೆ ಅಲ್ಲದೆ ಆಕರ್ಷಕ ಕ್ಯಾಮೆರಾ (Camera) ಬೊಂಬಾಟ್ ಬ್ಯಾಟರಿ ಲೈಫ್, ಕೇವಲ ಒಂದೇ ಗಂಟೆಯಲ್ಲಿ 0-100% ಫುಲ್ ಚಾರ್ಜ್ ಸೇರಿದಂತೆ ಬಂಪರ್ ಫೀಚರ್ಸ್​ನಿಂದ ಕೂಡಿದೆ. ಹಾಗಾದ್ರೆ ಈ ಸ್ಮಾರ್ಟ್​ಫೋನಿನ ಬೆಲೆ ಎಷ್ಟು?, ಯಾವಾಗ ಸೇಲ್ ಆರಂಭ? ಇತರೆ ವಿಶೇಷತೆಗಳು ಏನು ಎಂಬುದನ್ನು ನೋಡೋಣ.

ಇಂದು ಬಿಡುಗಡೆ ಆಗಿರುವ ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್ ಡಿಸೈನ್ ಥೇಟ್ ನೋಟ್ 11 ಮಾದರಿಯಲ್ಲೇ ಇದೆ. ಇದು ರೆಡ್ಮಿ ನೋಟ್ 10T ಬಳಿಕ ಬಿಡುಗಡೆ ಆಗಿರುವ ಎರಡನೇ 5G ಸ್ಮಾರ್ಟ್​ಫೋನ್ ಎಂಬುದು ವಿಶೇಷ. 90Hzನ ಡಿಸ್​ ಪ್ಲೇ ಹೊಂದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಸ್ಮಾರ್ಟ್​ಫೋನ್ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಾಗಲಿದೆ. 6GB RAM ಮತ್ತು 64GB ವೇರಿಯಂಟ್ ದರವು ಕೇವಲ 16,999 ರೂ. ಗೆ ಮಾರಾಟ ಆಗುತ್ತಿದೆ. 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 17,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM ಮತ್ತು 128GB ಸ್ಟೋರೆಜ್ ಆಯ್ಕೆಗೆ 19,999 ರೂ. ಬೆಲೆ ಇದೆ. ಡಿಸೆಂಬರ್ 7 ರಿಂದ ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್ ಖರೀದಿಗೆ ಸಿಗಲಿದೆ. ಅಮೆಜಾನ್​ನಲ್ಲೂ ಸೇಲ್ ಕಾಣಲಿದೆ.

 

ಏನು ವಿಶೇಷತೆ?:

ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ LCD ಡಿಸ್‌ಪ್ಲೇ ಪಡೆದಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಸೈಡ್​ ಫಿಂಗ್ ಪ್ರಿಂಟ್ ಸೆನ್ಸಾರ್​ನಿಂದ ಕೂಡಿದ್ದು ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್‌ ವೇಗವನ್ನು ಹೊಂದಿದೆ. ಅಲ್ಲದೆ ಆಂಡ್ರಾಯ್ಡ್‌ 11 ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.

ಇನ್ನೂ ಈ ಸ್ಮಾರ್ಟ್​ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್​ನ ಆಲ್ಟ್ರಾ ವೈಡ್ ಆ್ಯಂಗಲ್ ಮತ್ತು ಸೆಲ್ಫಿ ಕ್ಯಾಮೆರಾ 16 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ.

ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ 33W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದು ಕೇವಲ ಒಂದೇ ಗಂಟೆಯಲ್ಲಿ 0-100% ಫುಲ್ ಚಾರ್ಜ್ ಆಗುತ್ತದೆ.

Google Play Best Apps 2021: ಈ ವರ್ಷದ ಬೆಸ್ಟ್​​ ಆ್ಯಪ್ಸ್​​​, ಗೇಮ್ಸ್​ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ

(Redmi Note 11T 5G Xiaomi sub-brand Redmi launched new affordable smartphone Redmi Note 11T 5G in India)

TV9 Kannada


Leave a Reply

Your email address will not be published. Required fields are marked *