Relationship Tips: ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ನಿಮ್ಮನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರೆ ಈ ಕಾರಣಗಳಿರಬಹುದು – Relationship Tips: Why does your love partner suddenly start ignoring you? Could be these reasons


ಸಂಗಾತಿ ನಿಮ್ಮನ್ನು ಕಾಳಜಿಯಿಂದ ನೋಡಿಕೊಳ್ಳಬೇಕು, ಕಷ್ಟ ಸುಖಗಳನ್ನು ಹಂಚಿಕೊಳ್ಳಬೇಕು, ಸದಾ ನಿಮ್ಮೊಂದಿಗಿರಬೇಕು ಎಂಬುದು ನಿಮ್ಮ ಆಸೆಯಾಗಿರುತ್ತದೆ.

ಸಂಗಾತಿ ನಿಮ್ಮನ್ನು ಕಾಳಜಿಯಿಂದ ನೋಡಿಕೊಳ್ಳಬೇಕು, ಕಷ್ಟ ಸುಖಗಳನ್ನು ಹಂಚಿಕೊಳ್ಳಬೇಕು, ಸದಾ ನಿಮ್ಮೊಂದಿಗಿರಬೇಕು ಎಂಬುದು ನಿಮ್ಮ ಆಸೆಯಾಗಿರುತ್ತದೆ. ಯಾವತ್ತೋ ಒಂದು ದಿನ ಅವರ ಮನಸ್ಥಿತಿ ಸರಿ ಇಲ್ಲದಿದ್ದಾಗ ಅಥವಾ ಕಚೇರಿಯ ತಲೆಬಿಸಿಯಿಂದಾಗಿ ನಿಮ್ಮನ್ನು ನಿರ್ಲಕ್ಷಿಸಿದರೆ ಅದರಿಂದ ಯಾವುದೇ ತೊಂದರೆ ಇಲ್ಲ.

ಆದರೆ ನಿಮ್ಮನ್ನು ದೂರವಿಡುವಷ್ಟು ನಿರ್ಲಕ್ಷಿಸಿದರೆ ಮಾತ್ರ ನೀವು ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸಂಗಾತಿಯು ನಿಮ್ಮನ್ನು ಹಠಾತ್ತನೆ ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ, ಅದರ ಬಗ್ಗೆ ಚಿಂತೆ ಮಾಡುವುದು ಸಹಜ. ಇದರ ಹಿಂದಿನ ಕಾರಣ ಏನಿರಬಹುದು ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದು ಎಲ್ಲರಲ್ಲಿ ಕಾಡುವ ಪ್ರಶ್ನೆಯಾಗಿರುತ್ತದೆ.

ದಂಪತಿಗಳ ನಡುವೆ ಸೌಮ್ಯವಾದ ಜಗಳಗಳು ಸಾಮಾನ್ಯವಾಗಿದೆ. ನೀವು ಕೂಡ ಹೆಚ್ಚು ಜಗಳವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.

ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತೀರಿ

ನೀವು ಪ್ರೀತಿಯಲ್ಲಿರುವಾಗ ನಿಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ನೀವು ಇಷ್ಟಪಡುತ್ತೀರಿ, ಆದರೆ ಎಲ್ಲಾ ಸಮಯದಲ್ಲೂ ಇದು ಒಳ್ಳೆಯದಲ್ಲ ಏಕೆಂದರೆ ನಿಮ್ಮ ಸಂಗಾತಿಯು ಕಿರಿಕಿರಿಗೊಳ್ಳಬಹುದು. ಅವರಿಗೂ ಕೂಡ ಅವರದ್ದೇ ಆದ ಸಮಯ ಬೇಕು, ನಿಮ್ಮ ಕಿರಿಕಿರಿ ಹೆಚ್ಚಾದಾಗ ಅವರು ನಿಮ್ಮನ್ನು ನಿರ್ಲಕ್ಷಿಸಲು ಆರಂಭಿಸುತ್ತಾರೆ.

ಬೇರೊಬ್ಬರೊಂದಿಗೆ ಪ್ರೀತಿ
ನಿಮ್ಮ ಸಂಗಾತಿ ಬಹಳಷ್ಟು ನಿಮ್ಮನ್ನು ಕಡೆಗಣಿಸುತ್ತಿದ್ದರೆ, ಆ ವ್ಯಕ್ತಿ ಬೇರೊಬ್ಬರೊಂದಿಗೆ ಸಂಬಂಧವನ್ನು ಹೊಂದಿರುವ ಸಾಧ್ಯತೆಯಿದೆ. ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾದಾಗ, ಮಾತು ಕೂಡ ಕಡಿಮೆಯಾಗುತ್ತದೆ, ಬೇರೊಬ್ಬರ ಜತೆಗೆ ಹೆಚ್ಚು ಸಮಯವನ್ನು ಕಳೆಯಲು ಆರಂಭಿಸುತ್ತಾರೆ.

ಒಂದೊಮ್ಮೆ ತಾನು ಹೀಗಿದ್ದರಾದರೂ ನೀವು ಸರಿಯಾಗುತ್ತೀರಿ ಎನ್ನುವ ಭಾವನೆಯೂ ಇರಬಹುದು
ನೀವು ಅವರಿಗೆ ತುಂಬಾ ಕಿರಿಕಿರಿ ಮಾಡುತ್ತಿದ್ದರೆ, ಪ್ರತಿ ದಿನ ಒಂದಲ್ಲಾ ಒಂದು ಕಡೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದರೆ, ಆ ಕಿರಿಕಿರಿಯಿಂದಲೂ ಅವರು ಈ ರೀತಿ ನಡೆದುಕೊಳ್ಳುತ್ತಿರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.