Reliance Industries O2C: ಪ್ರಸ್ತಾವಿತ O2C ಮಾರಾಟ ಮರು ಮೌಲ್ಯಮಾಪನಕ್ಕೆ ರಿಲಯನ್ಸ್, ಸೌದಿ ಅರಾಮ್ಕೊ ನಿರ್ಧಾರ​ | Reliance Industries Limited And Saudi Aramco Decided To Re Evaluate O2C Sale


Reliance Industries O2C: ಪ್ರಸ್ತಾವಿತ O2C ಮಾರಾಟ ಮರು ಮೌಲ್ಯಮಾಪನಕ್ಕೆ ರಿಲಯನ್ಸ್, ಸೌದಿ ಅರಾಮ್ಕೊ ನಿರ್ಧಾರ​

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಹೇಳಿರುವ ಪ್ರಕಾರ, ತೈಲ-ರಾಸಾಯನಿಕಗಳ (Oil 2 Chemical) ವ್ಯವಹಾರವನ್ನು ಪ್ರತ್ಯೇಕ ಘಟಕವನ್ನಾಗಿ ಮಾಡುವ ಸಲುವಾಗಿ ಅಗತ್ಯವಾದ ಅನುಮೋದನೆಗಳನ್ನು ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿದೆ. ರಿಲಯನ್ಸ್​ನಿಂದ O2C ವ್ಯವಹಾರವನ್ನು ಪ್ರತ್ಯೇಕಿಸಲು NCLTಯೊಂದಿಗೆ ಸದ್ಯಕ್ಕೆ ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಕಂಪೆನಿಯು ನವೆಂಬರ್ 19ರಂದು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ. ಬದಲಾದ ಸನ್ನಿವೇಶದ ಹಿನ್ನೆಲೆಯಲ್ಲಿ O2C ವ್ಯವಹಾರದಲ್ಲಿನ ಉದ್ದೇಶಿತ ಹೂಡಿಕೆಯನ್ನು ಮರು ಮೌಲ್ಯಮಾಪನ ಮಾಡುವುದು ಎರಡೂ ಪಾರ್ಟಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಸೌದಿ ಅರಾಮ್ಕೊದೊಂದಿಗೆ ಪರಸ್ಪರ ನಿರ್ಧರಿಸಿರುವುದಾಗಿ ರಿಲಯನ್ಸ್ ಹೇಳಿದೆ. O2C ವ್ಯವಹಾರದಿಂದ ಹೊರಗುಳಿಯುವುದರಿಂದ ಸೌದಿ ಅರಾಮ್ಕೊಗೆ ಹೊಸ ಕಂಪೆನಿಯಲ್ಲಿ ಪಾಲನ್ನು ಮಾರಾಟ ಮಾಡಲು ದಾರಿ ಮಾಡಿಕೊಟ್ಟಿದೆ.

ರಿಲಯನ್ಸ್ ಬಿಡುಗಡೆ ಮಾಡಿದ ಹೇಳಿಕೆ ಹೀಗಿದೆ: “ರಿಲಯನ್ಸ್‌ನ ವ್ಯಾಪಾರ ಪೋರ್ಟ್‌ಫೋಲಿಯೊದ ವಿಕಸನದ ಸ್ವರೂಪದಿಂದಾಗಿ, ಬದಲಾದ ಸಂದರ್ಭದ ಹಿನ್ನೆಲೆಯಲ್ಲಿ O2C ವ್ಯವಹಾರದಲ್ಲಿನ ಉದ್ದೇಶಿತ ಹೂಡಿಕೆಯನ್ನು ಮರು ಮೌಲ್ಯಮಾಪನ ಮಾಡುವುದು ಎರಡೂ ಪಾರ್ಟಿಗಳಿಗೆ ಪ್ರಯೋಜನಕಾರಿ ಎಂದು ರಿಲಯನ್ಸ್ ಮತ್ತು ಸೌದಿ ಅರಾಮ್ಕೊ ಪರಸ್ಪರ ನಿರ್ಧರಿಸಿವೆ. ಪರಿಣಾಮವಾಗಿ, ರಿಲಯನ್ಸ್​ನಿಂದ O2C ವ್ಯವಹಾರವನ್ನು ಪ್ರತ್ಯೇಕಿಸಲು NCLTಯೊಂದಿಗೆ ಸದ್ಯಕ್ಕೆ ಅರ್ಜಿಯನ್ನು ಹಿಂಪಡೆಯಲಾಗುತ್ತಿದೆ.”

ಭಾರತದಲ್ಲಿ ಖಾಸಗಿ ವಲಯದಲ್ಲಿ ಹೂಡಿಕೆಗಾಗಿ ಸೌದಿ ಅರಾಮ್ಕೊದ ಆದ್ಯತೆಯ ಪಾಲುದಾರನಾಗಿ ಮುಂದುವರಿಯುವುದಾಗಿ ರಿಲಯನ್ಸ್ ಹೇಳಿದ್ದು, ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಂಪೆನಿ ಮತ್ತು ಸೌದಿ ಅರೇಬಿಯಾದಲ್ಲಿ ಹೂಡಿಕೆಗಾಗಿ ಅದರ ರಾಸಾಯನಿಕ ಉತ್ಪಾದನಾ ಶಾಖೆ SABICನೊಂದಿಗೆ ಸಹಕರಿಸುತ್ತದೆ. ವಿಶ್ವದ ಅತಿದೊಡ್ಡ ಸಂಸ್ಕರಣಾ ಸಮುಚ್ಚಯದ ನಿರ್ವಹಣೆ ಮಾಡುತ್ತಿರುವ ರಿಲಯನ್ಸ್, ವಿಶ್ವದ ಅಗ್ರ ತೈಲ ರಫ್ತುದಾರರಾದ ಸೌದಿ ಅರಾಮ್ಕೊದೊಂದಿಗೆ 2019ರ ಆಗಸ್ಟ್​ನಲ್ಲಿ 15 ಶತಕೋಟಿ ಡಾಲರ್ ಒಪ್ಪಂದವನ್ನು ಘೋಷಿಸಿತು. O2C ವ್ಯವಹಾರದಲ್ಲಿ ಶೇ 20ರಷ್ಟು ಪಾಲನ್ನು ಮಾರಾಟ ಮಾಡುವ ಅರಾಮ್ಕೊ ಜೊತೆಗಿನ ಒಪ್ಪಂದವು 2020ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ವಿಳಂಬವಾಯಿತು.

ಇದನ್ನೂ ಓದಿ: Saudi Aramco: ಸೌದಿ ರಾಜಕುಮಾರನ ಕನಸು ನನಸು ಮಾಡಿದ ಅರಾಮ್ಕೊ; ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್​ಗೆ

TV9 Kannada


Leave a Reply

Your email address will not be published. Required fields are marked *