Republic Day 2023: Check out these Statewise Tableau during the Republic Day parade; check details in (language name) | Republic Day 2023 Tableau: ಪಥಸಂಚಲನದಲ್ಲಿ ದೇಶದ ಸಂಸ್ಕೃತಿ ಅನಾವರಣ, ಒಟ್ಟು 23 ಟ್ಯಾಬ್ಲೊಗಳ ಪ್ರದರ್ಶನ


ರಾಜ್ಯ ,ಕೇಂದ್ರಾಡಳಿತ ಪ್ರದೇಶಗಳ 17 ಟ್ಯಾಬ್ಲೋಗಳು ಹಾಗೂ ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೊಗಳು ಪ್ರದರ್ಶನಗೊಳ್ಳುತ್ತಿವೆ. ವಿಶೇಷವಾಗಿ ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ತನ್ನ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಿದೆ.

Republic Day 2023 Tableau: ಪಥಸಂಚಲನದಲ್ಲಿ ದೇಶದ ಸಂಸ್ಕೃತಿ ಅನಾವರಣ, ಒಟ್ಟು 23 ಟ್ಯಾಬ್ಲೊಗಳ ಪ್ರದರ್ಶನ

2023ರ ಕರ್ನಾಟಕದ ಸ್ತಬ್ಧ ಚಿತ್ರ

ದೆಹಲಿ: ದೇಶದಾದ್ಯಂತ 74ನೇ ಗಣರಾಜ್ಯೋತ್ಸವ ಸಂಭ್ರಮ(Republic Day 2023) ಮನೆ ಮಾಡಿದೆ. ಗಣರಾಜೋತ್ಸವ ಪರೇಡ್‍ಗೆ ದೆಹಲಿಯ ಕರ್ತವ್ಯ ಪಥ್ ಸಿದ್ಧವಾಗಿದೆ. ವಿಶೇಷವಾಗಿ ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ತನ್ನ ಸ್ತಬ್ಧ ಚಿತ್ರ ಪ್ರದರ್ಶನ(Tableau) ಮಾಡಲಿದೆ. ಪಥಸಂಚಲನದಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಅನಾವರಣಗೊಳ್ಳಲಿದೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ 23 ಟ್ಯಾಬ್ಲೊಗಳ ಪ್ರದರ್ಶನಗೊಳ್ಳಲಿವೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಗಣತಂತ್ರ ದಿನದಲ್ಲಿ ‘ಟ್ಯಾಬ್ಲೊ’ ವೈಭವ!

ರಾಜ್ಯ ,ಕೇಂದ್ರಾಡಳಿತ ಪ್ರದೇಶಗಳ 17 ಟ್ಯಾಬ್ಲೋಗಳು ಹಾಗೂ ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೊಗಳು ಪ್ರದರ್ಶನಗೊಳ್ಳುತ್ತಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ,
ಜಮ್ಮು,ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹದಿನೇಳು ರಾಜ್ಯಗಳು ಭಾಗಿಯಾಗಲಿದ್ದಾವೆ.

ತಾಜಾ ಸುದ್ದಿ

ರಾಜ್ಯ ,ಕೇಂದ್ರಾಡಳಿತ ಪ್ರದೇಶಗಳ 17 ಟ್ಯಾಬ್ಲೋಗಳ ವಿವರ

 1. ಆಂಧ್ರಪ್ರದೇಶ -ಪ್ರಬಲ ತೀರ್ಥಂ ಥೀಮ್​
 2. ಅಸ್ಸಾಂ -ವೀರರ ಭೂಮಿ, ಆಧ್ಯಾತ್ಮಿಕತೆ ಸಂದೇಶದ ಥೀಮ್​
 3. ಕೇಂದ್ರಾಡಳಿತ ಪ್ರದೇಶ ಲಡಾಕ್‌ -ಲಡಾಕ್​ನ ಪ್ರವಾಸೋದ್ಯಮ & ಸಂಯೋಜಿತ ಸಂಸ್ಕೃತಿ ಹಾಗೂ ಲಡಾಕ್​ನ ಪ್ರವಾಸೋದ್ಯಮದ ಕುರಿತ ವಿಶೇಷ ಟ್ಯಾಬ್ಲೊ
 4. ಉತ್ತರಾಖಂಡ್ – ‘ಮಾನಸಖಂಡ’ ಥೀಮ್​
 5. ತ್ರಿಪುರ -ಪ್ರವಾಸೋದ್ಯಮ, ಸಾವಯವ ಕೃಷಿ ಟ್ಯಾಬ್ಲೊ
 6. ಗುಜರಾತ್​ -‘ಕ್ಲೀನ್​ ಗ್ರೀನ್​ ಎನರ್ಜಿ ಸಮರ್ಥ ಗುಜರಾತ್’​
 7. ಜಾರ್ಖಂಡ್​ -ದಿಯೋಘರ್​ನಲ್ಲಿರುವ ಪ್ರಖ್ಯಾತ ದೇಗುಲದ ಟ್ಯಾಬ್ಲೊ, ಬಾಬಾಧಾಮ್​ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನ
 8. ಅರುಣಾಚಲ ಪ್ರದೇಶ -‘ಪ್ರವಾಸೋದ್ಯಮದ ನಿರೀಕ್ಷೆಗಳು’ ಥೀಮ್​
 9. ಜಮ್ಮು-ಕಾಶ್ಮೀರ -‘ನಯಾ ಜಮ್ಮು ಮತ್ತು ಕಾಶ್ಮೀರ’ ಥೀಮ್‌ನ ಟ್ಯಾಬ್ಲೊ
 10. ಕೇರಳ – ‘ನಾರಿ ಶಕ್ತಿ’ ಥೀಮ್​ ಟ್ಯಾಬ್ಲೊ
 11. ಕೋಲ್ಕತ್ತಾ -ದುರ್ಗಾ ಪೂಜೆ, ದುರ್ಗಾ ಪೂಜೆಯ ವಿಶೇಷತೆಯೆ ಬಗ್ಗೆ ಸ್ತಬ್ಧಚಿತ್ರ
 12. ಮಹಾರಾಷ್ಟ್ರ -ಶಕ್ತಿಪೀಠಗಳ ಕುರಿತ ಸ್ತಬ್ಧಚಿತ್ರ. ‘ಮೂರೂವರೆ ಶಕ್ತಿಪೀಠಗಳು & ಶ್ರೀಶಕ್ತಿ ಜಾಗರ್’
 13. ತಮಿಳುನಾಡು -‘ಮಹಿಳಾ ಸಬಲೀಕರಣ & ಸಂಸ್ಕೃತಿ’ ಹೆಸರಿನ ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ
 14. ಕರ್ನಾಟಕ -‘ನಾರಿ ಶಕ್ತಿ’ ಎಂಬ ಕಲ್ಪನೆಯ ವಿಷಯದ ಸ್ತಬ್ಧಚಿತ್ರ
 15. ಹರಿಯಾಣ – ‘ಅಂತಾರಾಷ್ಟ್ರೀಯ ಗೀತ ಮಹೋತ್ಸವ’, ದಾದ್ರಾ ನಗರ್‌ಹವೇಲಿ ಮತ್ತು ದಮನ್​ & ದಿಯು
 16. ಕೇಂದ್ರಾಡಳಿತ ಪ್ರದೇಶ -ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆ ಅನಾವರಣಗೊಳ್ಳಲಿದೆ
 17. ಉತ್ತರ ಪ್ರದೇಶ -‘ಅಯೋಧ್ಯೆ ದೀಪೋತ್ಸವ’ ಹೆಸರಿನ ಅಯೋಧ್ಯೆ ಕುರಿತ ಟ್ಯಾಬ್ಲೊ

ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೊ ಭಾಗಿ

 1. ಕೇಂದ್ರದ ಕೃಷಿ ಸಂಶೋಧನಾ ಸಚಿವಾಲಯದಿಂದ ‘ಅಂತಾರಾಷ್ಟ್ರೀಯ ಮಿಲೆಟ್ಸ್​ ವರ್ಷ-2023’ ಥೀಮ್​ ಟ್ಯಾಬ್ಲೊ
 2. ಗಿರಿಜನರ ಸಮಸ್ಯೆಗಳ ಸಚಿವಾಲಯದಿಂದ ಏಕಲವ್ಯ ಮಾಡೆಲ್​ ರೆಸಿಡೆನ್ಸಿಯಲ್​ ಸ್ಕೂಲ್ ಸ್ತಬ್ಧಚಿತ್ರ
 3. ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋದಿಂದ ‘ನಶಾ ಮುಕ್ತ ಗುರಿ ನಮ್ಮ ಭಾರತ’ ಎಂಬ ಸಂದೇಶ
 4. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಿಂದ ‘ನಾರಿಶಕ್ತಿ’ ಥೀಮ್​ವುಳ್ಳ ಟ್ಯಾಬ್ಲೊ ಪ್ರದರ್ಶನ. ಭಾರತೀಯ ವಾಯುಸೇನೆ. ಯುದ್ಧ ವಿಮಾನ, ಸೇನೆಯಲ್ಲಿ ಮಹಿಳೆಯರ ಕರ್ತವ್ಯ ಕುರಿತ ಸ್ತಬ್ಧಚಿತ್ರ ಪ್ರದರ್ಶನ.
 5. ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ‘ಜೈವಿಕ ವೈವಿಧ್ಯತೆಯ ಸಂರಕ್ಷಣೆ’ ಕುರಿತ ಸ್ತಬ್ಧಚಿತ್ರ
 6. ಸಂಸ್ಕೃತಿ ಸಚಿವಾಲಯದಿಂದ ಪಶ್ಚಿಮ ಬಂಗಾಳ, ಕೇರಳ ಸಂಸ್ಕೃತಿಯ ಅನಾವರಣ. ಪಶ್ಚಿಮ ಬಂಗಾಳದ ಪುಡುದಿಯಾ, ಚಾವು ನೃತ್ಯ ಹಾಗೂ ಕೇರಳದ ವಿವಿಧ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ.

  ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *