ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ಸದಾ ಕೃತಜ್ಞರಾಗಿರಬೇಕು. ಅವರು ಅದಕ್ಕೆ ಅಂತಿಮ ರೂಪ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದಿದ್ದಾರೆ ಮುರ್ಮು

ದ್ರೌಪದಿ ಮುರ್ಮು
ದೆಹಲಿ: ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು 74ನೇ ಗಣರಾಜ್ಯೋತ್ಸವದ (Republic Day) ಮುನ್ನಾದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರ ಭಾಷಣವನ್ನು ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನದ ಎಲ್ಲಾ ಚಾನಲ್ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ನಾವು ಗಣರಾಜ್ಯೋತ್ಸವವನ್ನು ಆಚರಿಸಿದಾಗ, ನಾವು ಸಾಧಿಸಿದ್ದನ್ನು ಒಟ್ಟಾಗಿ ರಾಷ್ಟ್ರವಾಗಿ ಆಚರಿಸುತ್ತೇವೆ ಎಂದು ಮುರ್ಮು ಭಾಷಣ ಆರಂಭಿದ್ದಾರೆ. ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ಸದಾ ಕೃತಜ್ಞರಾಗಿರಬೇಕು. ಅವರು ಅದಕ್ಕೆ ಅಂತಿಮ ರೂಪ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದಿದ್ದಾರೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)
ತಾಜಾ ಸುದ್ದಿ
ತಾಜಾ ಸುದ್ದಿ