Retail Inflation: ಡಿಸೆಂಬರ್ ಚಿಲ್ಲರೆ ಹಣದುಬ್ಬರ ದರ ಶೇ 5.59, ನವೆಂಬರ್ ಐಐಪಿ ಶೇ 1.4 ಬೆಳವಣಿಗೆ | Consumer Price Based Index Retail Inflation For December At 5.59 Percent And IIP 1.4 Percent Growth For November Month


Retail Inflation: ಡಿಸೆಂಬರ್ ಚಿಲ್ಲರೆ ಹಣದುಬ್ಬರ ದರ ಶೇ 5.59, ನವೆಂಬರ್ ಐಐಪಿ ಶೇ 1.4 ಬೆಳವಣಿಗೆ

ಸಾಂದರ್ಭಿಕ ಚಿತ್ರ

ಭಾರತದ ಚಿಲ್ಲರೆ ಹಣದುಬ್ಬರವು (Retail Inflation) ನವೆಂಬರ್‌ನಲ್ಲಿ ಶೇ 4.91ರಷ್ಟು ಇದ್ದದ್ದು ಅಲ್ಲಿಂದ ಡಿಸೆಂಬರ್‌ನಲ್ಲಿ ಶೇ 5.59ಕ್ಕೆ ತೀವ್ರವಾಗಿ ಏರಿದ್ದು, ಉತ್ಪಾದನಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಈ ಏರಿಕೆಯಾಗಿದೆ ಎಂದು ಸರ್ಕಾರವು ಬುಧವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತೋರಿಸಿವೆ. ಗ್ರಾಹಕ ಬೆಲೆ ಸೂಚ್ಯಂಕದಿಂದ (CPI) ಅಳೆಯಲಾದ ಹಣದುಬ್ಬರವು ವರ್ಷದ ಹಿಂದಿನ ಅವಧಿಯಲ್ಲಿ ಶೇ 4.59 ಇತ್ತು. ಆಹಾರ ಹಣದುಬ್ಬರವು ನವೆಂಬರ್‌ನಲ್ಲಿ ಶೇ 1.87ರಿಂದ ಡಿಸೆಂಬರ್‌ನಲ್ಲಿ ಶೇ 4.05ಕ್ಕೆ ಏರಿದೆ. ರಾಯಿಟರ್ಸ್ ಸಮೀಕ್ಷೆಯ ಪ್ರಕಾರ ವಿಶ್ಲೇಷಕರು ವಾರ್ಷಿಕ ಹಣದುಬ್ಬರವನ್ನು ಶೇ 5.8 ಎಂದು ಊಹಿಸಿದ್ದರು. ಹಣದುಬ್ಬರ ತೀವ್ರವಾಗಿ ಹೆಚ್ಚಿದ್ದರೂ ಇದು ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾದ (RBI) ಶೇ 2ರಿಂದ ಶೇ 6ರ ಗುರಿಯ ವ್ಯಾಪ್ತಿಯಲ್ಲಿದೆ.

“ಇಂದಿನ CPIನಿಂದ ಆಹಾರದ ಬೆಲೆಗಳಲ್ಲಿನ ಆಯಾ ಋತುವಿನ ಕುಸಿತವು ಅಂತಿಮವಾಗಿ ಕಾರ್ಯರೂಪಕ್ಕೆ ಬರಲು ಪ್ರಾರಂಭಿಸಿದೆ ಎಂದು ಸೂಚಿಸುತ್ತದೆ. ಪ್ರತಿಕೂಲವಾದ ಮೂಲ ಮತ್ತು ಒಮಿಕ್ರಾನ್ ಕಾರಣದಿಂದಾಗಿ ಮುಂದುವರಿದ ಪೂರೈಕೆ ಅಡ್ಡಿ- ಅಡಚಣೆಗಳ ಮಧ್ಯೆ ಗರಿಷ್ಠದ ಕೋರ್ ಹಣದುಬ್ಬರವು ಮುಂದಿನ ಎರಡು ತಿಂಗಳಲ್ಲಿ ಶೀರ್ಷಿಕೆ ​​ಮುದ್ರಣವನ್ನು ಶೇ 5ರಷ್ಟು ಹೆಚ್ಚಿಸಲಿದೆ,” ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಈ ಮಧ್ಯೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ನವೆಂಬರ್ ತಿಂಗಳ ಕೈಗಾರಿಕಾ ಉತ್ಪಾದನೆಯು ಕಳೆದ ವರ್ಷ ಇದೇ ತಿಂಗಳಿನಲ್ಲಿ (-)1.6ಕ್ಕೆ ಹೋಲಿಸಿದರೆ ಶೇ 1.4ರಷ್ಟು ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ IIP ಶೇ 3.2 ಏರಿಕೆಯಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಶೇ 5.4ರಷ್ಟು ಕುಗ್ಗಿದ್ದನ್ನು ಹೋಲಿಸಿದರೆ ಗಣಿಗಾರಿಕೆ ವಲಯವು ನವೆಂಬರ್‌ನಲ್ಲಿ ಶೇ 5ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಉತ್ಪಾದನಾ ವಲಯದ ಬೆಳವಣಿಗೆಯು ನವೆಂಬರ್‌ನಲ್ಲಿ ಶೇ 0.9ರಷ್ಟು ದುರ್ಬಲವಾಗಿತ್ತು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 1.6ರ ಬೆಳವಣಿಗೆ ಕುಸಿತವಾಗಿತ್ತು.

TV9 Kannada


Leave a Reply

Your email address will not be published. Required fields are marked *