ಸಾಂಪ್ರದಾಯಿಕವಾಗಿ ಅಕ್ಕಿ ಪಾಯಸವನ್ನು ಹಾಲು, ಸಕ್ಕರೆ ಮತ್ತು ಕೆಲವು ಒಣ ಹಣ್ಣುಗಳೊಂದಿಗೆ ತಯಾರಿಸಲಾಗುತ್ತದೆ. ಜೊತೆಗೆ ಕೇಸರಿ, ಏಲಕ್ಕಿ, ಜಾಯಿಕಾಯಿ, ಇತ್ಯಾದಿ ಕೆಲವು ಮಸಾಲೆಗಳು ಮತ್ತು ರೋಸ್ ವಾಟರ್ ಕೂಡ ಬಳಸಲಾಗುತ್ತದೆ.

Image Credit source: Pinterest
ಭಾರತೀಯ ಸಿಹಿ ಖಾದ್ಯಗಳ ಪಟ್ಟಿಯಲ್ಲಿ ಪಾಯಸ(Kheer) ಅತ್ಯಂತ ಸುಲಭ ಹಾಗೂ ಜನಪ್ರಿಯ ಪಾಕವಾಗಿದೆ. ಇದು ಉತ್ತಮ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ. ಇದರಲ್ಲಿ ಬಳಸುವ ಧವಸ ಧಾನ್ಯಗಳು, ಹಣ್ಣು ತರಕಾರಿಗಳು ನಿಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಾಂಪ್ರದಾಯಿಕವಾಗಿ ಹಾಲು, ಸಕ್ಕರೆ ಮತ್ತು ಕೆಲವು ಒಣ ಹಣ್ಣುಗಳೊಂದಿಗೆ ತಯಾರಿಸಲಾಗುತ್ತದೆ. ಜೊತೆಗೆ ಕೇಸರಿ, ಏಲಕ್ಕಿ, ಜಾಯಿಕಾಯಿ, ಇತ್ಯಾದಿ ಕೆಲವು ಮಸಾಲೆಗಳು ಮತ್ತು ರೋಸ್ ವಾಟರ್ ಕೂಡ ಬಳಸಲಾಗುತ್ತದೆ.
ಅಕ್ಕಿ ಪಾಯಸಕ್ಕೆ ಬೇಕಾಗುವ ಸಾಮಾಗ್ರಿಗಳು:
1/4 ಕಪ್ ಅಕ್ಕಿ
1ಲೀಟರ್ ಹಾಲು
1 ಚಮಚ ಕೇಸರಿ
5 ರಿಂದ 6 ಟೇಬಲ್ ಸ್ಪೂನ್ ಸಕ್ಕರೆ
ಒಂದು ಟೀ ಚಮಚ ಏಲಕ್ಕಿ ಪುಡಿ
1 ಚಮಚ ಬಾದಾಮಿ, ಗೋಡಂಬಿ, ಪಿಸ್ತಾ
1 ಚಮಚ ರೋಸ್ ವಾಟರ್
ಅಕ್ಕಿ ಪಾಯಸ ಮಾಡುವ ವಿಧಾನ:
1/4 ಕಪ್ ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ಒಂದೆರಡು ಬಾರಿ ತೊಳೆಯಿರಿ ಮತ್ತು ನಂತರ 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಪ್ಯಾನ್ ಅಥವಾ ಕಡಾಯಿ ತೆಗೆದುಕೊಂಡು ಅದಕ್ಕೆ 1-ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ. ಕುದಿಯುತ್ತಿರುವ ಹಾಲಿನಿಂದ ಒಂದು ಚಮಚ ಹಾಲು ತೆಗೆದುಕೊಂಡು ಒಂದು ಚಿಕ್ಕ ಬೌಲ್ಗೆ ಹಾಕಿ ಮತ್ತು ಅದಕ್ಕೆ ಕೇಸರಿ ಹಾಕಿ.
ಈಗಾಗಲೇ ನೆನೆಸಿಟ್ಟ ಅಕ್ಕಿಯಿಂದ ನೀರನ್ನು ತೆಗೆದು ಕುದಿಯುತ್ತಿರುವ ಹಾಲಿಗೆ ಹಾಕಿ. ಇದನ್ನು ಮಧ್ಯಮ ಹುರಿಯಲ್ಲಿಟ್ಟು ಕೈಯಾಡಿಸುತ್ತಾ ಇರಿ. ಇಲ್ಲದಿದ್ದರೆ ಇದು ಪಾತ್ರೆಯ ತಳ ಹಿಡಿಯುವ ಸಾಧ್ಯತೆ ಹೆಚ್ಚಿದೆ.