Rishabh Pant: ರಿಷಭ್ ಪಂತ್​ಗೆ 1 ಕೋಟಿ 63 ಲಕ್ಷ ರೂ. ವಂಚಿಸಿದ ಕ್ರಿಕೆಟಿಗ..! | Rishabh Pant falls victim to Haryana’s arrested cricketer Mrinank Singh


2021 ರ ಜನವರಿಯಲ್ಲಿ ಐಷಾರಾಮಿ ವಾಚ್‌ಗಳು, ಬ್ಯಾಗ್‌ಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿರುವುದಾಗಿ ಮೃಣಾಕ್ ಸಿಂಗ್,  ಪಂತ್ ಮತ್ತು ಮ್ಯಾನೇಜರ್ ಸೋಲಂಕಿಗೆ ತಿಳಿಸಿದ್ದನು.

ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಅವರಿಗೆ ಹರಿಯಾಣದ ಕ್ರಿಕೆಟಿಗ ಮೃಣಾಕ್ ಸಿಂಗ್ 1.63 ಕೋಟಿಗೂ ಅಧಿಕ ಮೊತ್ತ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಈ ಹಿಂದೆಯೇ ಪಂತ್ ಅವರ ಮ್ಯಾನೇಜರ್ ಪುನೀತ್ ಸೋಲಂಕಿ ಮೃಣಾಕ್ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದರು. ಇದೀಗ ಬೇರೊಂದು ಪ್ರಕರಣದಲ್ಲಿ ಮೃಣಾಕ್​ರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ರಿಷಭ್ ಪಂತ್ ವಂಚನೆಗೊಳಗಾಗಿರುವ ಮಾಹಿತಿ ಹೊರಬಿದ್ದಿದೆ.

ಉದ್ಯಮಿಯೊಬ್ಬರಿಗೆ ಅಗ್ಗದ ದರದಲ್ಲಿ ದುಬಾರಿ ವಾಚ್ ಮತ್ತು ಮೊಬೈಲ್ ಫೋನ್ ಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಮೃಣಾಕ್ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ಹರಿಯಾಣ ಕ್ರಿಕೆಟಿಗನಿಂದ ರಿಷಬ್ ಪಂತ್ ಕೂಡ ಹೊಸ ಹೋಗಿರುವ ವಿಚಾರ ಗೊತ್ತಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಚೆಕ್ ಬೌನ್ಸ್ ಮೂಲಕ ರಿಷಭ್ ಪಂತ್ ಅವರಿಗೆ 1 ಕೋಟಿ 63 ಲಕ್ಷ ರೂಪಾಯಿ ಮೃಣಾಕ್ ಸಿಂಗ್ ವಂಚಿಸಿದ್ದಾರೆ ಎಂದು ಪಂತ್ ಅವರ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.

ನಗರ ಮೂಲದ ಉದ್ಯಮಿಯೊಬ್ಬರಿಗೆ 6 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಜುಹು ಪೊಲೀಸರು ಈ ತಿಂಗಳ ಆರಂಭದಲ್ಲಿ ಮೃಣಾಕ್ ಅವರನ್ನು ಬಂಧಿಸಿದ್ದರು. ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಟಿಂಗ್ ಸಿರೀಸ್‌ನಿಂದ ವಾಚ್ ಖರೀದಿಸಲು ಪಂತ್ ಬಯಸಿದ್ದು, ವಾಚ್‌ಗಾಗಿ 36,25,120 ರೂ, ಇದಲ್ಲದೇ ರಿಚರ್ಡ್ ಮಿಲ್ಲೆ ಅವರ ವಾಚ್‌ಗಾಗಿ 62,60,000 ರೂ. ನಂಬಿಸಿದ್ದ. ಹೀಗೆ ಅಗ್ಗದ ಬೆಲೆಯಲ್ಲಿ ಐಷಾರಾಮಿ ಕೈಗಡಿಯಾರಗಳನ್ನು ಖರೀದಿಸಬಹುದು ಎಂದು ಮೃಣಾಕ್ ರಿಷಬ್ ಪಂತ್ ಮತ್ತು ಅವರ ಮ್ಯಾನೇಜರ್ ಸೋಲಂಕಿಯನ್ನು ವಂಚಿಸಿದ್ದರು.

ರಿಷಭ್ ಪಂತ್ ಅವರ ದೂರಿನಲ್ಲಿ, “2021 ರ ಜನವರಿಯಲ್ಲಿ ಐಷಾರಾಮಿ ವಾಚ್‌ಗಳು, ಬ್ಯಾಗ್‌ಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿರುವುದಾಗಿ ಮೃಣಾಕ್ ಸಿಂಗ್,  ಪಂತ್ ಮತ್ತು ಮ್ಯಾನೇಜರ್ ಸೋಲಂಕಿಗೆ ತಿಳಿಸಿದ್ದ. ಅಲ್ಲದೆ ಹಲವಾರು ಕ್ರಿಕೆಟಿಗರಿಗೆ ಸರಕುಗಳನ್ನು ಮಾರಾಟ ಮಾಡಿದ್ದೇನೆ ಎಂದು ನಂಬಿಸಿದ್ದ. ವಂಚಕ ಕ್ರಿಕೆಟಿಗನ ಮಾತುಗಳನ್ನು ನಂಬಿ ರಿಷಭ್ ಪಂತ್ ಆರೋಪಿಗೆ ಐಷಾರಾಮಿ ವಾಚ್ ಮತ್ತು ಕೆಲವು ಆಭರಣಗಳಿಗೆ 65,70,731 ರೂ.ಗೆ ನೀಡಿದ್ದರು. ಹೀಗೆ ಮೃಣಾಕ್ ಸಿಂಗ್, ರಿಷಭ್ ಪಂತ್​ ಅವರಿಂದ 1 ಕೋಟಿ 63 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಪಂತ್ ಅವರ ಮ್ಯಾನೇಜರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಬೇರೊಂದು ವಂಚನೆ ಪ್ರಕರಣದಿಂದಾಗಿ ಮೃಣಾಕ್ ಸಿಂಗ್ ಸಿಕ್ಕಿಬಿದ್ದಿದ್ದು, ಇದರ ಬೆನ್ನಲ್ಲೇ ರಿಷಭ್ ಪಂತ್ ಕೂಡ ಹರಿಯಾಣ ಕ್ರಿಕೆಟಿಗನ ವಂಚನೆಯ ಬಲೆಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *