RK Laxman: ಆರ್​ ಕೆ ಲಕ್ಷ್ಮಣ್ – ದಿ ಕಾಮನ್ ಮ್ಯಾನ್ ಜನ್ಮ ಶತಮಾನೋತ್ಸವ: ಬಿಪಿ ವಾಡಿಯಾ ಹಾಲ್​ನಲ್ಲಿ ಮಾಸಾಚರಣೆ | Cartoonist and illustrator of the Common Man R. K. Laxman Centenary year Celebration at B. P. Wadia Indian Institute of World Culture from Sept 30th


AN UNCOMMON MAN: ಅಕ್ಟೋಬರ್ ತಿಂಗಳುದ್ದಕ್ಕೂ ನಡೆಯುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ಶುಕ್ರವಾರ ಸಂಜೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್​ ಎಂ ಎನ್ ವೆಂಕಟಾಚಲಯ್ಯ ಅವರು ಉದ್ಘಾಟಿಸಲಿದ್ದಾರೆ.

RK Laxman: ಆರ್​ ಕೆ ಲಕ್ಷ್ಮಣ್ - ದಿ ಕಾಮನ್ ಮ್ಯಾನ್ ಜನ್ಮ ಶತಮಾನೋತ್ಸವ: ಬಿಪಿ ವಾಡಿಯಾ ಹಾಲ್​ನಲ್ಲಿ ಮಾಸಾಚರಣೆ

ಆರ್​ ಕೆ ಲಕ್ಷ್ಮಣ್ – ದಿ ಕಾಮನ್ ಮ್ಯಾನ್ ಜನ್ಮ ಶತಮಾನೋತ್ಸವ: ಬಿಪಿ ವಾಡಿಯಾ ಹಾಲ್​ನಲ್ಲಿ ಮಾಸಾಚರಣೆ

ಆರ್​ ಕೆ ಲಕ್ಷ್ಮಣ್ – ದಿ ಕಾಮನ್ ಮ್ಯಾನ್ ಎಂದೇ ಜಗದ್ವಿಖ್ಯಾತರಾದ ರಾಶಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅವರು (RK Laxman) ಮೈಸೂರಿನಲ್ಲಿ 1921 ಅಕ್ಟೋಬರ್ 21ರಂದು ಜನಿಸಿದವರು. ಅಂದರೆ ಅವರಿಗೆ ಈಗ ಜನ್ಮ ಶತಮಾನೋತ್ಸವ. ಕಾಮನ್ ಮ್ಯಾನ್ ಎಂಬ ಕಾರ್ಟೂನ್ ಪಾತ್ರ ಸೃಷ್ಟಿಕರ್ತ, ಅದಕ್ಕೆ ಕೊನೆಯುಸಿರಿರುವವರಗೂ ಜೀವ ತುಂಬಿದ, ತನ್ಮೂಲಕ ಪ್ರಪಂಚದ ಆಗುಹೋಗುಗಳನ್ನು/ಅಂಕುಡೊಂಕುಗಳನ್ನು ತಮ್ಮ ಮೊನಚಾದ ಗೆರೆಗಳ ಮೂಲಕ ಚಿತ್ತಾರ ಬಿಡಿಸಿದ ಪದ್ಮವಿಭೂಷಣ ಆರ್​ ಕೆ ಲಕ್ಷ್ಮಣ್ ಅವರ ಸ್ಮರಣೆಯಲ್ಲಿ ಇಂಡಿಯನ್ ಇನ್ಸ್​​ಟಿಟ್ಯೂಟ್​ ಆಫ್​ ವರ್ಲ್ಡ್​​​ ಕಲ್ಚರ್​ ಮತ್ತು ಇಂಡಿಯನ್ ಇನ್ಸ್​​ಟಿಟ್ಯೂಟ್​ ಆಫ್​ ಕಾರ್ಟೂನಿಸ್ಟ್​​ ಸಂಸ್ಥೆಗಳು ಜಂಟಿಯಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಪಿ ವಾಡಿಯಾ ಹಾಲ್​ನಲ್ಲಿ (B. P. Wadia Indian Institute of World Culture) ಅಕ್ಟೋಬರ್ ತಿಂಗಳುದ್ದಕ್ಕೂ ಮಾಸಾಚರಣೆ ಮಾಡುತ್ತಿವೆ. AN UNCOMMON MAN Creator of the common man ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಅಕ್ಟೋಬರ್ ತಿಂಗಳುದ್ದಕ್ಕೂ ನಡೆಯುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ಶುಕ್ರವಾರ ಸಂಜೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್​ ಎಂ ಎನ್ ವೆಂಕಟಾಚಲಯ್ಯ ಅವರು ಉದ್ಘಾಟಿಸಲಿದ್ದಾರೆ. ಭಾರತದ ಲಲಿತಕಲಾ ಅಕಾಡೆಮಿ ಮಾಜಿ ಚೇರ್ಮನ್ ಚಿ ಸು ಕೃಷ್ಣಶೆಟ್ಟಿ, ಗಾನ ಕಲಾ ಭೂಷಣ ವಿದುಷಿ ವಸಂತ ಮಾಧವಿ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಪ್ರದರ್ಶನ ನಡೆಯಲಿದೆ. ಪ್ರದರ್ಶನಗಳ ವಿವರ ಕೆಳಗಿನಂತಿದೆ:

Sep. 30th to 06th Oct POLITICAL SATIRE,

Oct. 07th to 12th Oct CARICATURE,

Oct. 20th to 25th Oct UNPUBLISHED DOODLES,

Oct. 26th to 31 Oct KORAVANJI CARTOONS

ತಾಜಾ ಸುದ್ದಿ

TV9 Kannada


Leave a Reply

Your email address will not be published.