Rohit Sharma: ಕ್ಯಾಪ್ಟನ್ ಪಟ್ಟಕ್ಕೇರುವ ಮುನ್ನ ರೋಹಿತ್ ಶರ್ಮಾ ಖಾತೆಗೆ ಸೇರಿತು ಹೊಸ ದಾಖಲೆ: ಏನದು? | Rohit Sharma has become the 3rd batsman in history of T20I cricket to score 3000 runs


Rohit Sharma: ಕ್ಯಾಪ್ಟನ್ ಪಟ್ಟಕ್ಕೇರುವ ಮುನ್ನ ರೋಹಿತ್ ಶರ್ಮಾ ಖಾತೆಗೆ ಸೇರಿತು ಹೊಸ ದಾಖಲೆ: ಏನದು?

Rohit Sharma Record

ನಮೀಬಿಯಾ ವಿರುದ್ಧವೂ ದೊಡ್ಡ ಅಂತರದ ಗೆಲುವು ಕಾಣುವ ಮೂಲಕ ಬಾರತ (India vs Namibia) ತಂಡ ಟಿ20 ವಿಶ್ವಕಪ್​ನಲ್ಲಿ (T20 World Cup) ತನ್ನ ಅಭಿಯಾನ ಅಂತ್ಯಗೊಳಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ (Virat Kohli) ಕೂಡ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈಗಾಗಲೇ ಬಹುತೇಕರಿಗೆ ತಿಳಿದಿರುವಂತೆ ರೋಹಿತ್ ಶರ್ಮಾ (Rohit Sharma) ಮುಂದಿನ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಈ ಬಗ್ಗೆ ವಿರಾಟ್ ಕೊಹ್ಲಿ ಕೂಡ ಹಿಂಟ್ ಕೊಟ್ಟಿದ್ದಾರೆ. ಇದರ ನಡುವೆ ಹಿಟ್​ಮ್ಯಾನ್ ರೋಹಿತ್ (Rohit Sharma Record) ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಕೇವಲ 37 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ನೊಂದಿಗೆ 56 ರನ್ ಚಚ್ಚಿದರು. ಈ ಮೂಲಕ ನೂತನ ಮೈಲಿಗಲ್ಲು ತಲುಪಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 3000 ರನ್ ಪೂರೈಸುವ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಮತ್ತು ಮಾರ್ಟಿನ್ ಗುಪ್ಟಿಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ 95 ಪಂದ್ಯಗಳಲ್ಲಿ 52.04ರ ಸರಾಸರಿಯಲ್ಲಿ 29 ಅರ್ಧಶತಕ ಸೇರಿದಂತೆ 3227 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ 3115 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮ 3ನೇ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ, ಟಿ20 ತಂಡದ ನಾಯಕತ್ವ ತ್ಯಜಿಸಿದರು. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ನೂತನ ನಾಯಕನ ಆಯ್ಕೆ ನಡೆಯಬೇಕಿದೆ. ಈಗಾಗಲೇ ರೋಹಿತ್ ಶರ್ಮ ಹೆಸರು ಈ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ. ಸ್ವತಃ ವಿರಾಟ್ ಕೊಹ್ಲಿಯೇ ರೋಹಿತ್ ಶರ್ಮ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ. ಹಾಲಿ ಉಪನಾಯಕನಾಗಿರುವ ರೋಹಿತ್ ಶರ್ಮ ಚುಟುಕು ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ.

ಮುಂದಿನ ವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮ ತಂಡ ಮುನ್ನಡೆಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಂಡದ ನಾಯಕತ್ವದ ಗುಟ್ಟುಬಿಟ್ಟುಕೊಟ್ಟರು.

ರೋಹಿತ್ ಶರ್ಮಾ ನಾಯಕನಾಗಿ 19 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಸಾರಥ್ಯವಹಿಸಿದ್ದರು. ಇದರಲ್ಲಿ 15 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇನ್ನು 50* ಪಂದ್ಯಗಳಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ 29 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ.

India vs Namibia: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಗೆಲುವಿನ ವಿದಾಯ: ವಿರಾಟ್ ನಾಯಕತ್ವದ ಯುಗ ಅಂತ್ಯ

(Rohit Sharma has become the 3rd batsman in history of T20I cricket to score 3000 runs)

TV9 Kannada


Leave a Reply

Your email address will not be published. Required fields are marked *