Rohit Sharma: ಟಿ20 ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಕಿಂಗ್​..ಯಾಕೆ ಗೊತ್ತಾ? | Rohit Sharma: For India In T20Is


Rohit Sharma: ಶೂನ್ಯಕ್ಕೆ ಔಟಾಗಿರುವ ಕಳಪೆ ದಾಖಲೆಯನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಭರ್ಜರಿ ದಾಖಲೆಗಳು ಎಂಬುದು ವಿಶೇಷ. ಹಾಗಿದ್ರೆ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹೆಸರಿನಲ್ಲಿರುವ ದಾಖಲೆಗಳಾವುವು ಎಂದು ನೋಡೋಣ…

ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಶೂನ್ಯಕ್ಕೆ ಅತೀ ಹೆಚ್ಚು ಬಾರಿ ಔಟಾದ ಭಾರತೀಯ ಆರಂಭಿಕ ಆಟಗಾರ ಎಂಬ ಕೆಟ್ಟ ದಾಖಲೆಯೊಂದು ಹಿಟ್​ಮ್ಯಾನ್ ಪಾಲಾಯಿತು. ವಿಶೇಷ ಎಂದರೆ ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್ 5 ವಿಭಿನ್ನ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲಿ ಶೂನ್ಯಕ್ಕೆ ಔಟಾಗಿರುವ ಕಳಪೆ ದಾಖಲೆಯನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಭರ್ಜರಿ ದಾಖಲೆಗಳು ಎಂಬುದು ವಿಶೇಷ. ಹಾಗಿದ್ರೆ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹೆಸರಿನಲ್ಲಿರುವ ದಾಖಲೆಗಳಾವುವು ಎಂದು ನೋಡೋಣ..

ಅತೀ ಹೆಚ್ಚು ರನ್:

  • ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ ಹಾಗೂ ವಿಶ್ವದಲ್ಲಿಯೇ ಅತ್ಯಧಿಕ ರನ್​ಗಳಿಸಿದ ಆಟಗಾರ ಎಂಬ ದಾಖಲೆ ಹಿಟ್​​ಮ್ಯಾನ್ ಹೆಸರಿನಲ್ಲಿದೆ. ರೋಹಿತ್ ಶರ್ಮಾ 3443 ರನ್ ಕಲೆಹಾಕಿ ನಂಬರ್ 1 ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಶತಕದ ಸರದಾರ:

  • ಟೀಮ್ ಇಂಡಿಯಾ ಪರ ಅತ್ಯಧಿಕ ಟಿ20 ಶತಕ ಸಿಡಿಸಿದ್ದು ಕೂಡ ರೋಹಿತ್ ಶರ್ಮಾ. ಹಿಟ್​ಮ್ಯಾನ್ ಇದುವರೆಗೆ ಟೀಮ್ ಇಂಡಿಯಾ ಪರ 4 ಟಿ20 ಶತಕಗಳನ್ನು ಬಾರಿಸಿದ್ದಾರೆ.

ಅತ್ಯಧಿಕ ಫೋರ್:

  • ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಫೋರ್ ಬಾರಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಟೀಮ್ ಇಂಡಿಯಾ ನಾಯಕ ಇದುವರೆಗೆ 310 ಫೋರ್​ಗಳನ್ನು ಬಾರಿಸಿದ್ದಾರೆ. ಹಾಗೆಯೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಫೋರ್​ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 332 ಫೋರ್ ಬಾರಿಸಿರುವ ಐರ್ಲೆಂಡ್ ಪಾಲ್ ಸ್ಟೀರ್ಲಿಂಗ್ ಇದ್ದಾರೆ.

ಅತ್ಯಧಿಕ ಸಿಕ್ಸ್​:

  • ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿರುವ ದಾಖಲೆಯನ್ನು ರೋಹಿತ್ ಶರ್ಮಾ ಬರೆದಿದ್ದಾರೆ. ಹಿಟ್​ಮ್ಯಾನ್ ಇದುವರೆಗೆ 159 ಸಿಕ್ಸ್ ಸಿಡಿಸಿ ಟೀಮ್ ಇಂಡಿಯಾ ಪರ ಸಿಕ್ಸರ್ ಸರದಾರ ಎನಿಸಿಕೊಂಡಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ಮಾರ್ಟಿನ್ ಗಪ್ಟಿಲ್ (169) ಅತೀ ಹೆಚ್ಚು ಸಿಕ್ಸ್ ಸಿಡಿಸಿದ 2ನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸೊನ್ನೆ ಸರದಾರ:

  • ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅತ್ಯಧಿಕ ಬಾರಿ ಶೂನ್ಯಕ್ಕೆ ಔಟಾದ ಕೆಟ್ಟ ದಾಖಲೆಯೊಂದು ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್​ಮ್ಯಾನ್ ಇದುವರೆಗೆ ಭಾರತದ ಆರಂಭಿಕರಾಗಿ ಕಣಕ್ಕಿಳಿದು 6 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಅಂದರೆ ಇಲ್ಲಿ ಟೀಮ್ ಇಂಡಿಯಾ ಪರ ಸಿಕ್ಸ್, ಫೋರ್, ರನ್​, ಶತಕಗಳ ಅಂಕಿ ಅಂಶಗಳಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನವನ್ನು ಅಲಂಕರಿಸಿದ್ದು, ಈ ಮೂಲಕ ಭಾರತದ ಟಿ20 ಕ್ರಿಕೆಟ್​ನ ಕಿಂಗ್ ಎನಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *