Rohit Sharma: ನಾನೇ ನಾಯಕ…9 ವರ್ಷಗಳ ಹಿಂದಿನ ರೋಹಿತ್ ಶರ್ಮಾ ಟ್ವೀಟ್ ವೈರಲ್ | Rohit Sharma’s 9 year old tweet goes viral


Rohit Sharma: ನಾನೇ ನಾಯಕ...9 ವರ್ಷಗಳ ಹಿಂದಿನ ರೋಹಿತ್ ಶರ್ಮಾ ಟ್ವೀಟ್ ವೈರಲ್

Rohit Sharma

ನ್ಯೂಜಿಲೆಂಡ್ ವಿರುದ್ದದ (India vs New Zealand T20) ಮೊದಲ ಟಿ20 ಪಂದ್ಯದೊಂದಿಗೆ ರೋಹಿತ್ ಶರ್ಮಾ (Rohit Sharma) ಭಾರತ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ. ಆದರೆ ಇದಕ್ಕೂ ಮುನ್ನ ರೋಹಿತ್ ಶರ್ಮಾ 9 ವರ್ಷಗಳ ಹಿಂದೆ ಮಾಡಿದ ಟ್ವೀಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ಟ್ವೀಟ್ ವೈರಲ್ ಆಗಲು ಮುಖ್ಯ ಕಾರಣ ಅಂದು ಜೈಪುರದಲ್ಲಿ ನಾಯಕನಾಗಿ ನಾನು ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿರುವುದು. ಅಂದರೆ ಇದೀಗ ರೋಹಿತ್ ಶರ್ಮಾ ಅದೇ ಮೈದಾನದ ಮೂಲಕ ಭಾರತ ತಂಡದ ಕಪ್ತಾನನಾಗಿ ಹೊಸ ಇನಿಂಗ್ಸ್ ಶುರು ಮಾಡುತ್ತಿರುವುದು ವಿಶೇಷ.

2012 ರಲ್ಲಿ ಟ್ವೀಟ್ ಮಾಡಿದ್ದ ರೋಹಿತ್ ಶರ್ಮಾ, “ನಾನು ಜೈಪುರ್​ಗೆ ಬಂದಿಳಿದ್ದೇನೆ. ಅಷ್ಟೇ ಅಲ್ಲದೆ ನಾನು ತಂಡವನ್ನು ಮುನ್ನಡೆಸಲಿದ್ದೇನೆ. ಈ ಹೆಚ್ಚುವರಿ ಜವಾಬ್ದಾರಿ ನಿಭಾಯಿಸಲು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು. ಅಂದು ಮುಂಬೈ ರಣಜಿ ತಂಡದ ನಾಯಕನಾಗಿ ಪದಾರ್ಪಣೆ ಮಾಡುವಾಗ ರೋಹಿತ್ ಶರ್ಮಾ ಈ ಟ್ವೀಟ್ ಮಾಡಿದ್ದರು. ಇದೀಗ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿ ಇದೇ ಮೈದಾನದಲ್ಲಿ ಹಿಟ್​ಮ್ಯಾನ್ ಪದಾರ್ಪಣೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ 9 ವರ್ಷಗಳ ಹಳೆಯ ರೋಹಿತ್ ಶರ್ಮಾ ಅವರ ಟ್ವೀಟ್ ವೈರಲ್ ಆಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ (ನವೆಂಬರ್ 17) ಆರಂಭವಾಗಲಿದೆ. ಮೊದಲ ಟಿ20 ಜೈಪುರದಲ್ಲಿ ನಡೆಯಲಿದ್ದು, ಎರಡನೇ ಟಿ20 ನವೆಂಬರ್ 19 ರಂದು ರಾಂಚಿಯಲ್ಲಿ ಜರುಗಲಿದೆ. ಇನ್ನು ಮೂರನೇ ಟಿ20 ನವೆಂಬರ್ 21 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಸರಣಿಯ ಮೂಲಕ ಹಿಟ್​ಮ್ಯಾನ್ ಭಾರತ ಟಿ20 ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟೆಸ್ಟ್‌ ಸರಣಿಯ ಮೊದಲ ಪಂದ್ಯ ನವೆಂಬರ್​ 25 ರಿಂದ ಕಾನ್ಪುರದಲ್ಲಿ ಆರಂಭವಾಗಲಿದ್ದು, 2ನೇ ಪಂದ್ಯವು ಡಿಸೆಂಬರ್. 3 ರಿಂದ ಮುಂಬೈನಲ್ಲಿ ಶರುವಾಗಲಿದೆ. ವಿಶ್ರಾಂತಿಯ ಕಾರಣ ಈ ಎರಡು ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ.

ಭಾರತ ಟಿ20 ತಂಡ ಹೀಗಿದೆ:
ರೋಹಿತ್‌ ಶರ್ಮಾ (ನಾಯಕ), ಕೆಎಲ್‌ ರಾಹುಲ್ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌), ವೆಂಕಟೇಶ್‌ ಅಯ್ಯರ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಅವೇಶ್ ಖಾನ್‌, ಭುವನೇಶ್ವರ್‌ ಕುಮಾರ್‌, ದೀಪಕ್ ಚಹರ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(Rohit Sharma’s 9-year-old tweet goes viral)

TV9 Kannada


Leave a Reply

Your email address will not be published. Required fields are marked *