Rohit Sharma: ಭಾರತದ ಸರಣಿ ಗೆಲುವನ್ನು ವಿಶೇಷವಾಗಿ ಆಚರಿಸಿದ ರೋಹಿತ್ ಶರ್ಮಾ: ಏನು ಮಾಡಿದ್ರು ನೋಡಿ | Rohit Sharma won hearts with his heartwarming gesture to fans present after IND vs WI 4th T20I


India vs West Indies 4th T20I: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ ನಂತರ ರೋಹಿತ್ ಶರ್ಮಾ ಭಾರತದ ಅಭಿಮಾನಿಗಳಿದ್ದ ಸ್ಟೇಡಿಯಂ ಕಡೆ ತೆರಳಿದ್ದಾರೆ.

Rohit Sharma: ಭಾರತದ ಸರಣಿ ಗೆಲುವನ್ನು ವಿಶೇಷವಾಗಿ ಆಚರಿಸಿದ ರೋಹಿತ್ ಶರ್ಮಾ: ಏನು ಮಾಡಿದ್ರು ನೋಡಿ

Rohit Sharma IND vs WI 4th T20I

ಕೆರಿಬಿಯನ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಏಕದಿನ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ (Team India) ಇದೀಗ ಟಿ20 ಸರಣಿಯನ್ನು ಕೂಡ ವಶಪಡಿಸಿಕೊಂಡಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರೋಹಿತ್ ಪಡೆ 59 ರನ್​ಗಳ ಅಮೋಘ ಗೆಲುವು ಕಾಣುವ ಮೂಲಕ 3-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ. ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಒಂದುಕಡೆಯಾದರೆ, ಟೀಮ್ ಇಂಡಿಯಾ ಬೌಲರ್​ಗಳು ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಿದರು. ಮಳೆಯಿಂದಾಗಿ ಪಂದ್ಯ ಕೊಂಚ ತಡವಾಗಿ ಆರಂಭವಾದರೂ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಅದರಲ್ಲೂ ಪಂದ್ಯ ಮುಗಿದ ಬಳಿಕ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದರು.

ಟೀಮ್ ಇಂಡಿಯಾ ಜಯ ಸಾಧಿಸಿದ ನಂತರ ರೋಹಿತ್ ಶರ್ಮಾ ಭಾರತದ ಅಭಿಮಾನಿಗಳಿದ್ದ ಸ್ಟೇಡಿಯಂ ಕಡೆ ತೆರಳಿದ್ದಾರೆ. ಬ್ಯಾರಿಕೇಡ್ ಹತ್ತಿರಬಂದು ಅಲ್ಲಿದ್ದ ಭಾರತದ ಅಭಿಮಾನಿಗಳ ಕೈ ಮುಟ್ಟುತ್ತಾ ವಿಶೇಷವಾಗಿ ಗೆಲುವನ್ನು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹಿಟ್​​ಮ್ಯಾನ್ ನಡೆಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಪವರ್ ಪ್ಲೇಯಲ್ಲಿ ಮನಬಂದಂತೆ ಬ್ಯಾಟ್ ಬೀಸಿದರು. ಎಷ್ಟರ ಮಟ್ಟಿಗೆ ಎಂದರೆ 5 ಓವರ್​​ಗು ಮುನ್ನವೇ ತಂಡದ ಮೊತ್ತ 50ರ ಗಡಿ ದಾಟಿತು. ಹಿಟ್​ಮ್ಯಾನ್ ಕೇವಲ 16 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 33 ರನ್ ಚಚ್ಚಿದರೆ, ಸೂರ್ಯಕುಮಾರ್ 14 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್​ನೊಂದಿಗೆ 24 ರನ್ ಬಾರಿಸಿದರು.

ದೀಪಕ್ ಹೂಡ 19 ಎಸೆತಗಳಲ್ಲಿ 21 ರನ್​ಗಳ ಕಾಣಿಕೆ ನೀಡಿದರು. ರಿಷಭ್ ಪಂತ್ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ ಮೂಡಿಬಂತು. 31 ಎಸೆತಗಳಲ್ಲಿ 6 ಫೋರ್ ಬಾರಿಸಿ 30 ರನ್ ಗಳಿಸಿದರು. ಅಕ್ಷರ್ ಪಟೇಲ್ 8 ಎಸೆತಗಳಲ್ಲಿ ಅಜೇಯ 20 ರನ್ ಸಿಡಿಸಿದರು. ಪರಿಣಾಮ ಭಾರತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ವಿಂಡೀಸ್ ಪರ ಒಬೆಡ್ ಮೆಕಾಯ್ ಹಾಗೂ ಅಲ್ಜರಿ ಜೋಸೆಫ್ ತಲಾ 2 ವಿಕೆಟ್ ಪಡೆದರು.

TV9 Kannada


Leave a Reply

Your email address will not be published. Required fields are marked *