Rohit Sharma: ಸೋಲಿನ ನೋವಲ್ಲಿ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ | IPL 2022: Rohit Sharma Shared An Emotional Note For His Fans


Rohit Sharma: ಸೋಲಿನ ನೋವಲ್ಲಿ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

Rohit Sharma

IPL 2022: ಇಂಡಿಯನ್ ಪ್ರೀಮಿಯರ್ ಲೀಗ್​ನ 5 ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ (Mumbai Indians) ಪ್ರಸಕ್ತ ಐಪಿಎಲ್ ಸೀಸನ್​ ಗೆಲುವಿನ ಖಾತೆಯನ್ನು ತೆರೆದಿಲ್ಲ. ಭಾನುವಾರ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ 36 ರನ್‌ಗಳಿಂದ ಸೋಲನುಭವಿಸಿತು. ಈ ಸೋಲಿನೊಂದಿಗೆ ಐಪಿಎಲ್ ಪ್ಲೇಆಫ್​ ರೇಸ್​ನಿಂದ ಮುಂಬೈ ಇಂಡಿಯನ್ಸ್ ಬಹುತೇಕ ಹೊರಬಿದ್ದಂತಾಗಿದೆ. ಇದರ ಬೆನ್ನಲ್ಲೇ ಇದೀಗ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ (Rohit Sharma)  ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಇದು ಅತ್ಯಂತ ಕೆಟ್ಟ ಸೀಸನ್. ಸತತ 8 ಪಂದ್ಯಗಳಲ್ಲಿ ಸೋತ ಮೊದಲ ತಂಡ ಎಂಬ ಅಪಖ್ಯಾತಿಗೆ ಮುಂಬೈ ಒಳಗಾಗಿದೆ. ವಾಂಖೆಡೆ ಸ್ಟೇಡಿಯಂ ಮುಂಬೈ ಇಂಡಿಯನ್ಸ್‌ಗೆ ತವರು ಮೈದಾನವಾಗಿತ್ತು ಆದರೆ ಇಲ್ಲಿಯೂ ಕೂಡ ಗೆಲುವು ಸಾಧ್ಯವಾಗಿಲ್ಲ. ಹೀಗೆ ಸತತ ಸೋಲುಗಳಿಂದ ನಿರಾಸೆ ಅನುಭವಿಸಿರುವ ಅಭಿಮಾನಿಗಳನ್ನು ಹಿಟ್​ಮ್ಯಾನ್ ಸಂದೇಶದ ಸಮಾಧಾನಿಸಿದ್ದಾರೆ.

‘ಈ ಬಾರಿ ನಾವು ನಮ್ಮ ಉತ್ತಮ ಪ್ರದರ್ಶನ ನೀಡಿಲ್ಲ. ಅನೇಕರು ಇಂತಹದೊಂದು ಕೆಟ್ಟ ಅನುಭವದೊಂದಿಗೆ ಈ ಹಂತದ ಮೂಲಕ ಹೋಗಿದ್ದಾರೆ. ಆದರೆ ನಾನು ಈ ತಂಡವನ್ನು ಪ್ರೀತಿಸುತ್ತೇನೆ. ಹಾಗೆಯೇ ಇಲ್ಲಿಯವರೆಗೆ ಈ ತಂಡದ ಬಗ್ಗೆ ನಂಬಿಕೆ ಮತ್ತು ಅಚಲ ನಿಷ್ಠೆಯನ್ನು ತೋರಿದ ನಮ್ಮ ಹಿತೈಷಿಗಳನ್ನು ನಾನು ಪ್ರಶಂಸಿಸಲು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ. ಈ ಮೂಲಕ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಪ್ರಶಂಸಿದ್ದಾರೆ.

ಇದೀಗ ರೋಹಿತ್ ಶರ್ಮಾ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಮುಂದಿನ ಸೀಸನ್​ನಲ್ಲಿ ನಾವು ಕಂಬ್ಯಾಕ್ ಮಾಡಲಿದ್ದೇವೆ ಎಂದು ಪ್ರತಿಕ್ರಿಯಿಸಿ ರೋಹಿತ್ ಶರ್ಮಾರನ್ನು ಅನೇಕ ಅಭಿಮಾನಿಗಳು ಸಮಾಧಾನಪಡಿಸಿದ್ದಾರೆ.

ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡಲಿದೆ. ಏಪ್ರಿಲ್ 30 ರಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ಗೆಲುವಿನ ಖಾತೆ ತೆರೆಯಲಿದೆಯಾ ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ (MI):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.

TV9 Kannada


Leave a Reply

Your email address will not be published. Required fields are marked *