Suriya | Karthi: ರೋಲೆಕ್ಸ್ ಮತ್ತು ದಿಲ್ಲಿ ಪಾತ್ರಗಳನ್ನು ಒಟ್ಟಿಗೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ವಿರುಮಾನ್’ ಆಡಿಯೋ ರಿಲೀಸ್ ವೇದಿಕೆಯಲ್ಲಿ ಅದರ ಝಲಕ್ ಸಿಕ್ಕಿದೆ.

ಸೂರ್ಯ-ಕಾರ್ತಿ
ಕಾಲಿವುಡ್ ನಟ ಕಾರ್ತಿ (Karthi) ಅವರ ಪಾಲಿಗೆ 2022ರ ವರ್ಷ ತುಂಬ ಸ್ಪೆಷಲ್ ಆಗಿದೆ. ಈ ವರ್ಷ ತೆರೆಕಂಡು ಸೂಪರ್ ಹಿಟ್ ಆದ ‘ವಿಕ್ರಮ್’ ಸಿನಿಮಾದಲ್ಲಿ ಅವರ ಮುಖ ಕಾಣಿಸಿಲ್ಲವಾದರೂ ಪಾತ್ರದ ಎಳೆ ಬಂದುಹೋಗಿದೆ. ಈಗ ‘ವಿರುಮಾನ್’ ಸಿನಿಮಾದ ಬಿಡುಗಡೆಯನ್ನು ಕಾರ್ತಿ ಎದುರು ನೋಡುತ್ತಿದ್ದಾರೆ. ಆಗಸ್ಟ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ. ಇನ್ನು, ಸೆಪ್ಟೆಂಬರ್ 30ರಂದು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ತೆರೆಕಾಣಲಿದೆ. ಆ ಚಿತ್ರದಲ್ಲೂ ಕಾರ್ತಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇತ್ತಿಚೆಗೆಷ್ಟೇ ಈ ಚಿತ್ರದ ‘ಪೊನ್ನಿ ನದಿ..’ ಹಾಡು ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ನಡುವೆ ‘ವಿರುಮಾನ್’ (Viruman) ಚಿತ್ರದ ಆಡಿಯೋ ರಿಲೀಸ್ ಕೂಡ ಮಾಡಲಾಗಿದೆ. ಆ ಕಾರ್ಯಕ್ರಮಕ್ಕೆ ಕಾರ್ತಿ ಸಹೋದರ, ನಟ ಸೂರ್ಯ (Suriya) ಕೂಡ ಹಾಜರಿ ಹಾಕಿದ್ದಾರೆ. ಅಣ್ಣ-ತಮ್ಮನನ್ನು ಒಂದೇ ವೇದಿಕೆಯಲ್ಲಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
‘ಕೈದಿ’ ಸಿನಿಮಾದಲ್ಲಿ ನಟ ಕಾರ್ತಿ ಅವರು ದಿಲ್ಲಿ ಎಂಬ ಪಾತ್ರ ಮಾಡಿ ಜನಮನ ಗೆದ್ದಿದ್ದರು. ಅದೇ ಸಿನಿಮಾದ ಕಥೆಯ ಎಳೆ ‘ವಿಕ್ರಮ್’ ಚಿತ್ರದಲ್ಲಿ ಮುಂದುವರಿಯಿತು. ‘ವಿಕ್ರಮ್’ ಸಿನಿಮಾದಲ್ಲಿ ಸೂರ್ಯ ಮಾಡಿದ ರೋಲೆಕ್ಸ್ ಪಾತ್ರ ಭಯಂಕರವಾಗಿದೆ. ಮುಂದಿನ ಸಿನಿಮಾದಲ್ಲಿ ರೋಲೆಕ್ಸ್ ಮತ್ತು ದಿಲ್ಲಿ ಮುಖಾಮುಖಿ ಆಗಲಿದ್ದಾರೆ. ಈಗ ‘ವಿರುಮಾನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸೂರ್ಯ ಮತ್ತು ಕಾರ್ತಿ ಅವರನ್ನು ಒಟ್ಟಿಗೆ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ವಿರುಮಾನ್’ ವೇದಿಕೆಯಲ್ಲಿ ರೋಲೆಕ್ಸ್ ಮತ್ತು ದಿಲ್ಲಿ ಪಾತ್ರಗಳ ಬಗ್ಗೆ ಪ್ರಸ್ತಾಪ ಆಯಿತು. ಇಬ್ಬರು ಮುಖಾಮುಖಿ ಆದರೆ ಹೇಗಿರುತ್ತದೆ ಎಂದು ಫ್ಯಾನ್ಸ್ ಕೇಳಿದರು. ‘ಕಾಲ ಬಂದಾಗ ಅದಕ್ಕೆ ಉತ್ತರ ಸಿಗಲಿದೆ’ ಎಂದು ಸೂರ್ಯ ಹೇಳಿದರು. ‘ಮನೆಯಲ್ಲಿ ರೋಲೆಕ್ಸ್ ಮತ್ತು ದಿಲ್ಲಿ ನಡುವೆ ಬಹಳ ಫೈಟ್ಸ್ ನಡೆದಿವೆ’ ಎಂದು ಕಾರ್ತಿ ಹೇಳಿದರು. ಅದೇ ವೇದಿಕೆಯಲ್ಲಿ ಇಬ್ಬರೂ ಮುಖಾಮುಖಿ ಆಗಿ ಡೈಲಾಗ್ ಹೇಳಿಕೊಂಡರು.
“Kaalam badhil sollattum. Wait Pannuvom”
The brothers on when #Rolex and #Dilli will fight onscreen 👌🔥#VirumanAudioLaunch #Suriya #Karthi pic.twitter.com/RgNkAZRRue
— CHERTHALA SFC (@CHERTHALASFC1) August 3, 2022