Roopesh Shetty: ಏಕಾಏಕಿ ದುಬೈಗೆ ಹೊರಟ ರೂಪೇಶ್ ಶೆಟ್ಟಿ; ಫ್ಯಾನ್ಸ್​ಗೆ ‘ಬಿಗ್ ಬಾಸ್’ ವಿನ್ನರ್​ನ​ ಭೇಟಿ ಮಾಡೋ ಅವಕಾಶ | Roopesh Shetty Traveling to Dubai for CIRCUS Movie Premier Show


‘ಗಿರಿಗಿಟ್’ ಸಿನಿಮಾ ತುಳುದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಈಗ ಈ ತಂಡ ‘ಸರ್ಕ್ಸಸ್’ ಚಿತ್ರಕ್ಕಾಗಿ ಒಂದಾಗಿದೆ.

Roopesh Shetty: ಏಕಾಏಕಿ ದುಬೈಗೆ ಹೊರಟ ರೂಪೇಶ್ ಶೆಟ್ಟಿ; ಫ್ಯಾನ್ಸ್​ಗೆ ‘ಬಿಗ್ ಬಾಸ್’ ವಿನ್ನರ್​ನ​ ಭೇಟಿ ಮಾಡೋ ಅವಕಾಶ

ರೂಪೇಶ್ ಶೆಟ್ಟಿ

ನಟ ರೂಪೇಶ್ ಶೆಟ್ಟಿ (Roopesh Shetty) ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಭಾಗಿ ಆಗಿ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಈಗ ಅವರು ನೇರವಾಗಿ ದುಬೈಗೆ ಹೊರಟಿದ್ದಾರೆ. ಅಲ್ಲಿ ರೂಪೇಶ್ ಶೆಟ್ಟಿಯನ್ನು ಭೇಟಿ ಮಾಡೋ ಅವಕಾಶ ಫ್ಯಾನ್ಸ್​ಗೆ ದೊರೆಯುತ್ತಿದೆ. ಇದಕ್ಕೆಲ್ಲ ಕಾರಣ ‘ಸರ್ಕಸ್’ ಸಿನಿಮಾದ (Circus Movie) ಪ್ರೀಮಿಯರ್ ಶೋ.

‘ಗಿರಿಗಿಟ್’ ಸಿನಿಮಾ ತುಳುದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಜೊತೆಗೆ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಅರವಿಂದ್ ಬೋಲಾರ್, ನವೀನ್ ಡಿ. ಪಡಿಲ್, ಭೋಜರಾಜ್ ವಮಂಜೂರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ಈ ತಂಡ ‘ಸರ್ಕ್ಸಸ್’ ಚಿತ್ರಕ್ಕಾಗಿ ಒಂದಾಗಿದೆ. ಈ ಸಿನಿಮಾದ ಪ್ರೀಮಿಯರ್ ಶೋ ಮೇ 28ರಂದು ದುಬೈನಲ್ಲಿ ನಡೆಯುತ್ತಿದೆ. ರೂಪೇಶ್ ಶೆಟ್ಟಿ ಜೊತೆ ಕುಳಿತು ಸಿನಿಮಾ ನೋಡುವ ಅವಕಾಶ ಫ್ಯಾನ್ಸ್​ಗೆ ಇದೆ.

ಈ ಸಂಬಂಧ ಪ್ರೋಮೋ ಒಂದನ್ನು ಬಿಡಲಾಗಿದೆ. ರೂಪೇಶ್ ಶೆಟ್ಟಿ ಪಾಸ್​ಪೋರ್ಟ್​ಗಾಗಿ ಹುಡುಕಾಡುತ್ತಿರುತ್ತಾರೆ. ಆ ಸಮಯಕ್ಕೆ ಅವರಿಗೆ ಬ್ಯಾಂಕ್ ಪಾಸ್​ಬುಕ್ ಸಿಗುತ್ತದೆ! ಏನೇ ಮಾಡಿದರೂ ಪಾಸ್​ಪೋರ್ಟ್ ಸಿಗೋದಿಲ್ಲ. ಕೊನೆಗೂ ಪಾಸ್​ಪೋರ್ಟ್ ದೊರೆಯುತ್ತದೆ. ಈ ಮೂಲಕ ಅವರು ದುಬೈಗೆ ಹೊರಡೋಕೆ ರೆಡಿ ಆಗುತ್ತಾರೆ.

‘ಹೆಲ್ಲೋ ಹಬಿಬಿ, ನಾನು ದುಬೈಗೆ ಬರುತ್ತಿದ್ದೇನೆ. ‘ಗಿರಿಗಿಟ್’ ಸಿನಿಮಾ ತಂಡದ ಎರಡನೇ ಸಿನಿಮಾ ‘ಸರ್ಕಸ್’. ದುಬೈನಲ್ಲಿ ಮೆಗಾ ಪ್ರೀಮಿಯರ್ ಶೋ. ಗಿರಿಗಿಟ್ ಚಿತ್ರಕ್ಕಿಂತ ಡಬಲ್ ಎಂಟರ್​ಟೇನ್​ಮೆಂಟ್ ಸರ್ಕಸ್ ಚಿತ್ರದಲ್ಲಿದೆ. ಈಗಲೇ ಟಿಕೆಟ್ ಬುಕ್ ಮಾಡಿ’ ಎಂದು ಅವರು ಕೋರಿದ್ದಾರೆ. ಅನೇಕರು ಇದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *