Roopesh Shetty: ಬಿಗ್ ​ಬಾಸ್ ಮನೆಗೆ ಎಂಟ್ರಿಕೊಟ್ಟ ಕರಾವಳಿಯ ಸೂಪರ್ ಸ್ಟಾರ್: ಯಾರು ಗೊತ್ತಾ ಈ ರೂಪೇಶ್ ಶೆಟ್ಟಿ? | Roopesh Shetty Profile, Who is Roopesh Shetty? Bigg Boss OTT kannada Season Contestant Photos, Videos and more


Bigg Boss OTT kannada: ಈಗಾಗಲೇ ಕೆಲ ಸ್ಪರ್ಧಿಗಳ ಹೆಸರನ್ನು ಕೂಡ ಅಧಿಕೃತವಾಗಿ ರಿವೀಲ್​ ಮಾಡಲಾಗಿದ್ದು ಆರ್ಯವರ್ಧನ್​ ಗುರೂಜಿ (Aryavardhan Guruji), ಸೋನು ಶ್ರೀನಿವಾಸ್ ಗೌಡ ಅವರು ಬಿಗ್​ ಬಾಸ್ ಮನೆ ಸೇರಿದ್ದಾರೆ. ಇವರ ಜೊತೆಗೆ ಕರಾವಳಿಯ ಸೂಪರ್ ಸ್ಟಾರ್ ರೂಪೇಶ್ ಶೆಟ್ಟಿ ಹೆಸರು ಕೇಳಿಬರುತ್ತಿದೆ.

Bigg Boss OTT Kannada Season 1: ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶೇಷ ಎಂದರೆ ಈ ಬಾರಿ ಬಿಗ್ ಬಾಸ್ ಕನ್ನಡ ಓಟಿಟಿ ಯಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 6 ಅಂದರೆ ಇಂದು ಸಂಜೆ 7 ರಿಂದ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದೆ. ಇದಕ್ಕೂ ಮುನ್ನವೇ ಈ ಬಾರಿ ದೊಡ್ಮನೆಗೆ ಯಾರೆಲ್ಲ ಕಾಲಿಡುತ್ತಿದ್ದಾರೆ ಎಂಬ ಸೂಚನೆ ಸಿಕ್ಕಿದೆ. ಈಗಾಗಲೇ ಕೆಲ ಸ್ಪರ್ಧಿಗಳ ಹೆಸರನ್ನು ಕೂಡ ಅಧಿಕೃತವಾಗಿ ರಿವೀಲ್​ ಮಾಡಲಾಗಿದ್ದು ಆರ್ಯವರ್ಧನ್​ ಗುರೂಜಿ (Aryavardhan Guruji), ಸೋನು ಶ್ರೀನಿವಾಸ್ ಗೌಡ ಅವರು ಬಿಗ್​ ಬಾಸ್ ಮನೆ ಸೇರಿದ್ದಾರೆ. ಇವರ ಜೊತೆಗೆ ಕರಾವಳಿಯ ಸೂಪರ್ ಸ್ಟಾರ್ ರೂಪೇಶ್ ಶೆಟ್ಟಿ ಕೂಡ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕೋಸ್ಟಲ್​ವುಡ್​ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಮಿಂಚಿ ನಿರೂಪಕನಾಗಿ ಕೆಲಸ ಮಾಡಿರುವ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ. ಇವರು ಕನ್ನಡದಲ್ಲಿ ನಿಶಬ್ಧ 2, ಡೇಂಜರ್ ಜೋನ್, ಪಿಶಾಚಿ 2 ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ಕಾಸರಗೋಡಿನವರಾದ ರೂಪೇಶ್ ಮಂಗಳೂರಿನಲ್ಲಿರುವ ನಮ್ಮ ಟಿವಿಎಂಬ ಚಾನೆಲ್​ನಲ್ಲಿ ನಿರೂಪಕನಾಗಿ ಹೆಸರು ಮಾಡಿದ್ದಾರೆ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಸಾಕಷ್ಟು ಶ್ರಮ ಪಟ್ಟ ಇವರು ದಿಬ್ಬಣ ಎಂಬ ತುಳು ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದರು. 2015 ರಲ್ಲಿ ಡೇಂಜರ್ ಜ಼ೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ನಂತರ ಐಸ್ ಕ್ರೀಮ್, ಪಿಶಾಚಿ 2 , ನಿಶಬ್ಧ 2 ಮತ್ತು ಸ್ಮೈಲ್ ಪ್ಲೀಜ್ ಎಂಬ ಕನ್ನಡ ಚಲನಚಿತ್ರಗಳಲ್ಲೂ ಕಾಣಿಸಿಕೊಂಡರು.

2018 ರಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ ತುಳುವಿನಲ್ಲಿ ಬಿಡುಗಡೆ ಆದ ಅಮ್ಮೆರ್ ಪೊಲೀಸ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರ 2019 ರಲ್ಲಿ ನಿರ್ದೇಶನಕ್ಕೂ ಇಳಿದು ನಟಿಸಿದ ಗಿರ್ಗಿಟ್ (ತುಳು ಸಿನಿಮಾ) ಸಿನಿಮಾ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿತ್ತು. ತುಳು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಇದಾಯಿತು. ಇತ್ತೀಚೆಗಷ್ಟೆ ಕನ್ನಡದಲ್ಲೂ ಸುಮಂತ್ ಹಾಗೂ ಭಾವನಾ ಜೊತೆ ಗೋವಿಂದ ಗೋವಿಂದ ಎಂಬ ಚಿತ್ರದಲ್ಲಿ ನಟಿಸಿದ್ದರು. ಹೀಗೆ ತೆರೆ ಹಿಂದೆ ಕಷ್ಟ ಪಟ್ಟು, ಬಣ್ಣದ ಪರದೆ ಮೇಲೆ ಕಾಣಿಸಿಕೊಳ್ಳುವ ಮಹೋತ್ತರ ಕನಸು ಹೊತ್ತು, ಕಷ್ಟದ ದಿನಗಳನ್ನು ಅನುಭವಿಸಿ ಇಂದು ತುಳು ಭಾಷೆಯ ಸೂಪರ್ ಸ್ಟಾರ್ ಆಗಿರುವ ನಟ ರೂಪೇಶ್ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಇನ್ನು ಇದೇ ಪ್ರಥಮ ಬಾರಿಗೆ ಕನ್ನಡದ ‘ಬಿಗ್ ಬಾಸ್’ ಓಟಿಟಿ ವೇದಿಕೆಯಲ್ಲಿ ಮಾತ್ರ ಪ್ರಸಾರವಾಗಲಿದೆ. ವೂಟ್‌ನಲ್ಲಿ 24/7 ಲೈವ್ ಆಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ. ಈ ಹಿಂದಿನ ಬಿಗ್ ಬಾಸ್ ಸೀಸನ್‌ಗಳಲ್ಲಿ ದಿನಪೂರ್ತಿ ನಡೆಯುವುದನ್ನು ಒಂದು ಅಥವಾ ಒಂದುವರೆ ಗಂಟೆಯಲ್ಲಿ ತೋರಿಸಲಾಗುತ್ತಿತ್ತು. ಆದರೀಗ, ‘ಬಿಗ್ ಬಾಸ್ಕಾರ್ಯಕ್ರಮ 24/7 ಲೈವ್ ಆಗಿ ಪ್ರಸಾರವಾಗಲಿದೆ.

TV9 Kannada


Leave a Reply

Your email address will not be published. Required fields are marked *