RR IPL 2022 Retention: ಬೆನ್ ಸ್ಟೋಕ್ಸ್​ಗೆ ಗುಡ್ ಬೈ! ರಾಜಸ್ಥಾನ ಉಳಿಸಿಕೊಳ್ಳುವ ಆಟಗಾರರು ಇವರೇನಾ? | IPL 2022 Retention 4 players who could be retained by rajasthan royals

1/5

IPL 2022 ರ ಮೊದಲು, 8 ಫ್ರಾಂಚೈಸಿಗಳು ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವನ್ನು ಹೊಂದಿವೆ ಮತ್ತು ಅದರ ಗಡುವು ಮಂಗಳವಾರ ಕೊನೆಗೊಳ್ಳುತ್ತದೆ. IPL 2022 ರ ರಿಟೆನ್ಶನ್ ನಿಯಮಗಳ ಪ್ರಕಾರ, ಪ್ರತಿ ತಂಡವು ಕೇವಲ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಇದರಲ್ಲಿ 3 ಕ್ಕಿಂತ ಹೆಚ್ಚು ಭಾರತೀಯರು ಮತ್ತು 2 ಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಇರುವಂತಿಲ್ಲ. ರಾಜಸ್ಥಾನ ರಾಯಲ್ಸ್‌ನ ಕಳೆದ 3 ಸೀಸನ್‌ಗಳು ಕಳಪೆಯಾಗಿದ್ದು, ಈ ತಂಡವು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತದೆ ಮತ್ತು ಯಾವ ಆಟಗಾರರನ್ನು ಬಿಡುಗಡೆ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ರಾಜಸ್ಥಾನವು ಬೆನ್ ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡಬಹುದು ಎಂದು ನಂಬಲಾಗಿದೆ. ಯಾವ 4 ಆಟಗಾರರು ತಂಡದಲ್ಲಿ ಉಳಿಯಬಹುದು ಎಂಬ ವಿವರ ಇಲ್ಲಿದೆ

2/5

ರಾಜಸ್ಥಾನ್ ರಾಯಲ್ಸ್ ಮೊದಲು ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಳ್ಳಬಹುದು. ಈ ಆಟಗಾರ ಅಬ್ಬರದ ಬ್ಯಾಟ್ಸ್‌ಮನ್‌ ಅಲ್ಲದೆ, ಉತ್ತಮ ವಿಕೆಟ್‌ಕೀಪರ್‌ ಮತ್ತು ನಾಯಕ ಆಗಿದ್ದಾರೆ. ಆದ್ದರಿಂದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್ಮೆಂಟ್ ಖಂಡಿತವಾಗಿಯೂ ಸಂಜುವನ್ನು ಉಳಿಸಿಕೊಳ್ಳಲು ಬಯಸುತ್ತದೆ. ಸಂಜು ಸ್ಯಾಮ್ಸನ್ ಕಳೆದ ಋತುವಿನಲ್ಲಿ 40.33 ಸರಾಸರಿಯಲ್ಲಿ 484 ರನ್ ಗಳಿಸಿದ್ದರು.

3/5

ರಾಜಸ್ಥಾನ್ ರಾಯಲ್ಸ್ IPL 2022 ಗಾಗಿ ಜೋಸ್ ಬಟ್ಲರ್ ಅನ್ನು ಸಹ ಉಳಿಸಿಕೊಳ್ಳಬಹುದು. ಬಟ್ಲರ್ ಕಳೆದ ಋತುವಿನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಯಿತು, ಆದರೆ ಪ್ರಸ್ತುತ ಯುಗದಲ್ಲಿ, ಬಟ್ಲರ್‌ನಂತಹ ಯಾವುದೇ T20 ಬ್ಯಾಟ್ಸ್‌ಮನ್ ಇಲ್ಲ. ಟಿ20 ವಿಶ್ವಕಪ್‌ನಲ್ಲಿ ಬಟ್ಲರ್ ಅದ್ಭುತ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು.

4/5

ಜೋಫ್ರಾ ಆರ್ಚರ್ ರಾಜಸ್ಥಾನ್ ರಾಯಲ್ಸ್ ಉಳಿಸಿಕೊಳ್ಳಬಹುದಾದ ಮೂರನೇ ಆಟಗಾರನಾಗಬಹುದು. ಆರ್ಚರ್ ಗಾಯದ ಕಾರಣ ಕಳೆದ ಋತುವಿನಲ್ಲಿ ಆಡಲು ಸಾಧ್ಯವಾಗಲಿಲ್ಲ ಆದರೆ ಜನವರಿಯಿಂದ ಅವರು ಕ್ರಿಕೆಟ್ ಮೈದಾನಕ್ಕೆ ಮರಳಬಹುದು. ಆರ್ಚರ್ ತನ್ನ ವೇಗದ ಬೌಲಿಂಗ್​ಗೆ ಹೆಸರುವಾಸಿಯಾಗಿದ್ದಾನೆ. ರಾಜಸ್ಥಾನ್ ಖಂಡಿತವಾಗಿಯೂ ಈ ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು.

5/5

 ಯಶಸ್ವಿ ಜೈಸ್ವಾಲ್ ರಾಜಸ್ಥಾನ ಫ್ರಾಂಚೈಸಿ ಉಳಿಸಿಕೊಳ್ಳಬಹುದಾದ ನಾಲ್ಕನೇ ಆಟಗಾರನಾಗಬಹುದು. ಕಳೆದ ಋತುವಿನ ಎರಡನೇ ಸುತ್ತಿನಲ್ಲಿ ಜೈಸ್ವಾಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಜೈಸ್ವಾಲ್ ಜೊತೆಗೆ ಚೇತನ್ ಸಕರಿಯಾ ಕೂಡ ಈ ರಿಟೆನ್ಶನ್ ರೇಸ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.

TV9 Kannada

Leave a Reply

Your email address will not be published. Required fields are marked *