RR vs CSK Live Score, IPL 2022: ಐಪಿಎಲ್-2022 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಎರಡು ತಂಡಗಳು ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ.

ಐಪಿಎಲ್-2022 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಎರಡು ತಂಡಗಳು ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ. ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ರಾಜಸ್ಥಾನ ಮೂರನೇ ಸ್ಥಾನದಲ್ಲಿದ್ದು 16 ಅಂಕಗಳನ್ನು ಹೊಂದಿದೆ.
ಅವರ ಪ್ಲೇಆಫ್ ಟಿಕೆಟ್ ಬಹುತೇಕ ಖಚಿತವಾಗಿದೆ ಆದರೆ ಇನ್ನೂ ಅವರು ಈ ಪಂದ್ಯವನ್ನು ಲಘುವಾಗಿ ಪರಿಗಣಿಸುವುದಿಲ್ಲ ಏಕೆಂದರೆ ಈ ಪಂದ್ಯದಲ್ಲಿ ಗೆಲುವು ಅವರನ್ನು ನಂ.2 ಸ್ಥಾನಕ್ಕೆ ಕೊಂಡೊಯ್ಯಲ್ಲಿದೆ. ಹಾಗಾಗಿ ಈ ಪಂದ್ಯದಲ್ಲಿ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲು ರಾಜಸ್ಥಾನ ಬಯಸುತ್ತದೆ. ಮತ್ತೊಂದೆಡೆ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈಗೆ ಇದು ಈ ಋತುವಿನ ಕೊನೆಯ ಪಂದ್ಯವಾಗಿದ್ದು, ಅವರು ಈ ಪಂದ್ಯವನ್ನು ಗೆದ್ದು ವಿಜಯಶಾಲಿ ವಿದಾಯ ಹೇಳಲು ಬಯಸುತ್ತಾರೆ.