RR vs GT: 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್ ಗುಜರಾತ್​ಗೆ ಎಂಟ್ರಿ? ಎರಡೂ ತಂಡಗಳ ಸಂಭಾವ್ಯ 11 | GT vs RR Playing XI IPL Rajasthan Royals vs Gujarat Titans Team players to watch out for in IPL Match 13th april in kannada


RR vs GT: 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್ ಗುಜರಾತ್​ಗೆ ಎಂಟ್ರಿ? ಎರಡೂ ತಂಡಗಳ ಸಂಭಾವ್ಯ 11

RR vs GT

IPL – 2022 ರಲ್ಲಿ ಪಾದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ (Gujarat Titans) ಈಗಾಗಲೇ ಮೊದಲ ಸೀಸನ್‌ನಲ್ಲಿ ಪ್ರಭಾವ ಬೀರಿದೆ. ತಮ್ಮ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಈ ತಂಡ ನಾಲ್ಕನೇ ಪಂದ್ಯದಲ್ಲಿ ಮೊದಲ ಸೋಲಿನ ರುಚಿ ನೋಡಬೇಕಾಯಿತು. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್​ಗೆ ಸೋಲಿನ ರುಚಿ ತೋರಿಸಿತ್ತು. ಆದರೆ ಉಳಿದ ಪಂದ್ಯಗಳಂತೆ ಈ ಪಂದ್ಯ ಕೂಡ ರೋಚಕವಾಗಿತ್ತು, ಆದರೂ ಈ ಬಾರಿ ಗುಜರಾತ್ ಗೆಲುವಿನ ಗೆರೆ ದಾಟಲು ಸಾಧ್ಯವಾಗಲಿಲ್ಲ. ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸದ್ಯ ರಾಜಸ್ಥಾನ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಈ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸಿತ್ತು.

ಪಾಯಿಂಟ್ ಪಟ್ಟಿಯಲ್ಲಿ ಈ ಎರಡು ತಂಡಗಳ ಸ್ಥಾನವನ್ನು ನೋಡಿದರೆ, ರಾಜಸ್ಥಾನ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಂಬರ್ ಒನ್ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದ್ದು, ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಒಂದು ಸೋಲನ್ನೂ ಕಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ಎರಡು ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.

ಗುಜರಾತ್ ಬದಲಾಗಲಿದೆ
ಗುಜರಾತ್ ತಂಡ ಸದ್ಯಕ್ಕೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಉತ್ತಮವಾಗಿವೆ. ಬ್ಯಾಟಿಂಗ್‌ನಲ್ಲಿ ಆರಂಭಿಕ ಮ್ಯಾಥ್ಯೂ ವೇಡ್ ಅವರ ಫಾರ್ಮ್ ತಂಡಕ್ಕೆ ತಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಅವರ ಜಾಗ ಅಪಾಯ ಎದುರಾಗಿದ್ದು, ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಅವರ ಸ್ಥಾನದಲ್ಲಿ ರಹಮಾನುಲ್ಲಾ ಗುರ್ಬಾಜ್ ತಂಡದಲ್ಲಿ ಸ್ಥಾನ ಪಡೆಯಬಹುದು. ಗುರ್ಬಾಜ್ ಟಿ10ಯಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಡೆಲ್ಲಿ ಬುಲ್ಸ್ ಪರ ಗುರ್ಬಾಜ್, ಚೆನ್ನೈ ಬ್ರೇವ್ಸ್ ವಿರುದ್ಧ ಈ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ದರ್ಶನ್ ನಲ್ಕಂಡೆ ಅವರಿಗೂ ಅವಕಾಶ ಸಿಕ್ಕಿದೆ ಆದರೆ ಅವರು ಇಂಪ್ರೆಸ್ ಮಾಡಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾಂಡ್ಯ ಅವರನ್ನೂ ಹೊರಗಿಡಬಹುದು. ಅವರ ಜಾಗದಲ್ಲಿ ವರುಣ್ ಆರೋನ್ ಅಥವಾ ಆರ್.ಸಾಯಿ ಕಿಶೋರ್ ಅವರಿಗೆ ಅವಕಾಶ ಸಿಗಬಹುದು.

ರಾಜಸ್ಥಾನ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ
ಮತ್ತೊಂದೆಡೆ, ರಾಜಸ್ಥಾನ ತಂಡವನ್ನು ಗಮನಿಸಿದರೆ, ಕಳೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು ರಾಸಿ ವಾನ್ ಡೆರ್ ಡುಸ್ಸೆನ್ ಅವರಿಗೆ ಅವಕಾಶ ನೀಡಲಾಯಿತು. ಕಳೆದ ಪಂದ್ಯದಲ್ಲಿ, ಪಡಿಕ್ಕಲ್ ಈ ಋತುವಿನಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ರಾಜಸ್ಥಾನ ಈ ಪಂದ್ಯದಲ್ಲೂ ಅದೇ ಸಂಯೋಜನೆಯನ್ನು ಉಳಿಸಿಕೊಳ್ಳಬಹುದು.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ರಾಸಿ ವಾನ್ ಡೆರ್ ಡುಸ್ಸೆನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕುಲದೀಪ್ ಸೇನ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ದ್ ಕೃಷ್ಣ, ಯುಜ್ವೇಂದ್ರ ಚಾಹಲ್.

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ರಹಮಾನುಲ್ಲಾ ಗುರ್ಬಾಜ್, ಶುಭಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಆರ್.ಕೆ. ಸಾಯಿ ಕಿಶೋರ್

TV9 Kannada


Leave a Reply

Your email address will not be published.