RRRಗಾಗಿ “ಗಂಗೂಬಾಯಿ ಕಾಠಿಯಾವಾಡಿ” ರಿಲೀಸ್​ ಮುಂದೂಡಿದ ಬನ್ಸಾಲಿ; ಏನಂದ್ರು ರಾಜ್​ಮೌಳಿ?


ರಾಜಮೌಳಿ ಅವರ “RRR” ಚಿತ್ರಕ್ಕಾಗಿ “ಗಂಗುಭಾಯ್ ಖಾತೆವಾಡಿ ” ಚಿತ್ರದ ರಿಲೀಸ್​ ದಿನಾಂಕವನ್ನು ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಮುಂದೂಡಿದ್ದಾರೆ. ಹೌದು ರಾಜಮೌಳಿ ನಿರ್ದೆಶನದ ಪ್ಯಾನ್​ ಇಂಡಿಯನ್​ ಸಿನಿಮಾ “RRR” ಚಿತ್ರ ಮುಂದಿನ ವರ್ಷ ಜನವರಿ 7 ನೇ ತಾರೀಖು ರಿಲೀಸ್​ ಆಗಲಿದೆ.

ಆದ್ರೆ “RRR” ಚಿತ್ರದ ನಾಯಕಿ ಅಲಿಯಾ ಭಟ್​ ಮುಖ್ಯಭೂಮಿಕೆಯಲ್ಲಿ ನಟನೆಯ “ಗಂಗುಭಾಯ್ ಖಾತೆವಾಡಿ ” ಚಿತ್ರ ಜನವರಿ 6 ನೇ ತಾರೀಖು ರಿಲೀಸ್​ ಆಗಲಿದೆ ಅಂತ ಚಿತ್ರತಂಡ ಚಿತ್ರದ ರಿಲೀಸ್​ ಡೇಟ್ ಅನ್ನು ಅನೌನ್ಸ್ ಮಾಡಿತ್ತು.

ಇನ್ನು “RRR” ಚಿತ್ರಕ್ಕೆ ಆ ಚಿತ್ರದ ನಾಯಕಿ ಅಲಿಯಾ ಭಟ್​ ಅವರೇ ಪೈಪೊಟಿ ನೀಡಲಿದ್ದಾರೆ ಎಂಬ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿತ್ತು. ಆದ್ರೆ ಗಂಗುಭಾಯ್ ಖಾತೆವಾಡಿ ಚಿತ್ರದ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಿ ಫೆಬ್ರವರಿ 18 ಕ್ಕೆ ಗಂಗುಭಾಯ್ ಖಾತೆವಾಡಿ ಚಿತ್ರವನ್ನು ರಿಲೀಸ್​ ಮಾಡುವುದಾಗಿ ಹೇಳಿದ್ದಾರೆ.

ಗಂಗುಭಾಯ್ ಖಾತೆವಾಡಿ ಚಿತ್ರದ ಈ ನಿರ್ಧಾರ “RRR” ಚಿತ್ರತಂಡಕ್ಕೆ ಖುಷಿಯ ವಿಚಾರವಾಗಿದೆ. ಇನ್ನು ಈ ಬಗ್ಗೆ “RRR” ಚಿತ್ರದ ನಿರ್ದೇಶಕ ರಾಜಮೌಳಿ ಟ್ವಿಟ್​ ಮಾಡಿದ್ದು, “ಗಂಗುಭಾಯ್ ಖಾತೆವಾಡಿ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಿರುವ ಈ ನಿಮ್ಮ ನಿರ್ಧಾರವನ್ನು ನಾನ್ನು ಪ್ರಶಂಸಿಸುತ್ತೇನೆ.. ಗಂಗೂಬಾಯಿ ಖಾತೆವಾಡಿ ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ:ಪ್ರಶಾಂತ್​ ನೀಲ್​ ಮಗಳಿಗೆ ರವೀನಾ ಟಂಡನ್​ ಮಾಡಿದ ಕ್ಯೂಟ್​ ವಿಶ್​ ಹೇಗಿತ್ತು ಗೊತ್ತಾ?

News First Live Kannada


Leave a Reply

Your email address will not be published. Required fields are marked *