ರಾಜಮೌಳಿ ಹಾಗೂ ಪ್ರಭಾಸ್​​.. ಈ ಇಬ್ಬರು ಸೇರಿ ಸಿನಿಮಾ ಮಾಡಿದ್ರೆ ಅದು ಬ್ಲಾಕ್ ಬ್ಲಾಸ್ಟರ್ ಹಿಟ್ ಆಗುತ್ತೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಮತ್ತು ರಾಜಮೌಳಿ ಒಟ್ಟಾಗಿ ಸಿನಿಮಾ ಮಾಡ್ತಾರಾ? ಅನ್ನೋ ಪ್ರಶ್ನೆ ಪ್ರಶ್ನೆಯಾಗಿ ಉಳಿದಿತ್ತು. ಆದ್ರೆ ಈಗ ಮೌಳಿ ಚಿತ್ರದಲ್ಲಿ ಪ್ರಭಾಸ್ ನಟಿಸೋದು ಯಾವಾಗ ಅನ್ನೋ ಪ್ರಶ್ನೆಗೆ ಥ್ರಿಬಲ್ ಆರ್ ಅನ್ನೋ ಉತ್ತರ ಸಿಕ್ತಿದೆ.

ಯೆಸ್​​.. ರಾಜಮೌಳಿ.. ಟಾಲಿವುಡ್ ಸಿನಿ ಲೋಕದ ನಿರ್ದೇಶಕರ ನಿರ್ದೇಶಕ.. ಇವತ್ತಿಗೂ ರಾಜಮೌಳಿ ಸಿನಿ ಲೆಕ್ಕ ಪಕ್ಕಾ ಅಂದ್ರೆ ಪಕ್ಕ.. ತನ್ನ ಸಿನಿಮಾದ ದಾಖಲೆಯನ್ನ ತನ್ನ ಸಿನಿಮಾದ ಮೂಲಕವೇ ಮುರಿದು ಕೊಂಡು ಹೊಸ ದಾಖಲೆಯನ್ನ ಶೀಖರವನ್ನ ಏರೋ ರಾಜಮೌಳಿ ಡೈರೆಕ್ಷನ್ ಕರಿಯರ್​​​ನಲ್ಲಿ ಡಾರ್ಲಿಂಗ್ ಪ್ರಭಾಸ್ ಮೋಸ್ಟ್ ಲಕ್ಕಿ ಆ್ಯಕ್ಟರ್​.

ಪ್ರಭಾಸ್ ಮತ್ತು ರಾಜಮೌಳಿ ಸೇರಿದ್ರೆ ದೊಡ್ಡ ಮಟ್ಟದ ಬ್ಯಾಂಗ್ ಬ್ಯಾಂಗ್ ಮಾಡೇ ಮಾಡ್ತಾರೆ.. ಛತ್ರಪತಿ ಮತ್ತು ಬಾಹುಬಲಿ ಭಾಗ ಒಂದು ಹಾಗೂ ಭಾಗ ಎರಡು ಸಿನಿಮಾಗಳ ಮೂಲಕ ಇದು ಸಾಬೀತಾಗಿದೆ. ಈ ರಾಜಮೌಳಿ ಮತ್ತು ಪ್ರಭಾಸ್ ಸಿನಿಮಾ ಕಾಂಬಿನೇಷನ್ ಮತ್ತೆ ಸದ್ಯಕ್ಕಂತೂ ಸಿನಿಮಾ ಮಾಡಲ್ಲ ಅನ್ನೋ ಭಾವನೆ ಎಲ್ಲರಲ್ಲಿತ್ತು. ಇಬ್ಬರು ಅವರವರ ಸಿನಿಮಾಗಳಲ್ಲಿ ಬ್ಯುಸಿಯಾಗಿರೋದ್ರಿಂದ ಪ್ರಭಾಸ್ ಮತ್ತು ಮೌಳಿ ಸದ್ಯಕ್ಕೆ ಸಿನಿಮಾ ಸಿನಿಮಾ ಮಾಡಲ್ಲ ಹೇಳಿ.. ಅಂತಿದ್ರು ಸಿನಿಪಂಡಿತಾಸ್.. ಆದ್ರೆ ಈ ಮಾತು ಸದ್ಯಕ್ಕೆ ಸುಳ್ಳಾಗಿದೆ.. ಪ್ರಭಾಸ್ ಮತ್ತು ರಾಜಮೌಳಿ ಮತ್ತೊಮ್ಮೆ ಮಗದೊಮ್ಮೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋದಕ್ಕೆ ಉತ್ತರ ರಣ ರೌದ್ರ ರುಧಿರ.

ವಾರೆವ್ಹಾ ‘‘RRR’’ ಚಿತ್ರದಲ್ಲಿ ಬಾಹುಬಲಿ ಪ್ರಭಾಸ್..!
ಮತ್ತೊಮ್ಮೆ ಮಗದೊಮ್ಮೆ ಮೌಳಿ ಮತ್ತು ಪ್ರಭಾಸ್..!

ಥ್ರಿಬಲ್ ಆರ್.. ಸದ್ಯ ಥ್ರಿಬಲ್ ಆರ್ ಸಿನಿಮಾದ ಕಟ್ಟ ಕಡೆಯ ಹಂತದ ಕೆಲಸ ಕಾರ್ಯಗಳಲ್ಲಿ ರಾಜಮೌಳಿ ಆಂಡ್ ಟೀಮ್ ಶ್ರಮಿಸುತ್ತಿದೆ.. ಈ ವರ್ಷದ ಅಕ್ಟೋಬರ್ 13ನೇ ತಾರೀಖ್ ವಿಶ್ವಾದ್ಯಂತ ಥ್ರಿಬಲ್ ಆರ್ ಸಿನಿಮಾವನ್ನ ತೆರೆಕಾಣಿಸಲು ಸಜ್ಜಾಗಿದೆ.. ಈ ಟೈಮ್​ನಲ್ಲೇ ಥ್ರಿಬಲ್ ಆರ್ ತಂಡದಿಂದ ಹೊಸದೊಂದು ಇಂಟರಸ್ಟಿಂಗ್ ಸಮಾಚಾರ ಹೊರ ಬಂದಿದೆ.. ಥ್ರಿಬಲ್ ಆರ್ ಸಿನಿಮಾದಲ್ಲಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ..

ಅರೇ ಅರೇ ಅದ್ ಹೇಗೆ..? ಥ್ರಿಬಲ್ ಸಿನಿಮಾದಲ್ಲಿ ಈಗಾಗಲೇ ಜೂನಿಯರ್ ಎನ್​.ಟಿ.ಆರ್ ಹಾಗೂ ರಾಮ್ ಚರಣ್ ನಟಿಸಿದ್ದಾರೆ.. ಇವ್ರಗಳ ಜೊತೆಗೆ ಬಾಲಿವುಡ್ ಹಾಲಿವುಡ್​​ ನ ಖ್ಯಾತ ಕಲಾವಿದರ ದಂಡೇ ಬಣ್ಣ ಹಚ್ಚಿ ಕ್ಯಾಮೆರಾಗೆ ಕೈ ಮುಗಿದಿದೆ.. ಈ ಗ್ಯಾಪ್​​ನಲ್ಲಿ ಪ್ರಭಾಸ್ ಹೇಗೆ ಥ್ರಿಬಲ್ ಆರ್ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಪ್ರಶ್ನೆಗೆ ಸರಿ ಸುಂದರ ಉತ್ತರ ಇಲ್ಲಿದೆ.

RRR ಹಾಡೊಂದರಲ್ಲಿ ಡಾರ್ಲಿಂಗ್ ಪ್ರಭಾಸ್ ಡ್ಯಾನ್ಸ್
ಮೌಳಿ ಸ್ನೇಹಕ್ಕಾಗಿ RRR ಸಾಂಗ್​​ನಲ್ಲಿ ಬಾಹುಬಲಿ

ಹೌದು.. ಈಗಾಗಲೇ ಸಂಪೂರ್ಣ ಹಾಡಿನ ಚಿತ್ರೀಕರಣವನ್ನ ಮುಗಿಸಿದೆ ಥ್ರಿಬಲ್ ಆರ್ ಸಿನಿ ಪಡೆ. ಆದ್ರೆ ಪ್ರಮೋಷನ್ ವಿಚಾರದಲ್ಲಿ ರಾಜಮೌಳಿ ಅಂದ್ರೇ ರಾಜಮೌಳಿನೇ.. ಬೇರೆ ಬೇರೆ ಇಂಡಸ್ಟ್ರಿಯವರು ಕಾಪಿ ಮಾಡಬೇಕು ಹಂಗೆ ಪ್ರಮೋಷನಲ್ ಆಕ್ಟಿವಿಟಿಯನ್ನ ಮಾಡ್ತಾರೆ.. ಈ ಬಾರಿ ಸ್ನೇಹಿತರ ದಿನಕ್ಕಾಗಿ ಜೊತೆಗೆ ಥ್ರಿಬಲ್ ಆರ್ ಸಿನಿಮಾದ ಪ್ರಚಾರಕ್ಕಾಗಿ ವಿಶೇಷ ಫ್ರೆಂಡ್ಸ್​ಶಿಪ್ ಹಾಡೊಂದನ್ನ ಮೌಳಿ ಸಿನಿಗ್ಯಾಂಗ್ ಸಿದ್ಧಮಾಡುತ್ತಿದೆ. ಈ ಹಾಡಿನಲ್ಲಿ ಪ್ರಭಾಸ್ ಅಷ್ಟೇ ಅಲ್ಲ ಟಾಲಿವುಡ್​​ನ ಬೇರೆ ಬೇರೆ ಸ್ಟಾರ್ ನಟರು ಕಾಣಿಸಿಕೊಳ್ತಿದ್ದಾರೆ.

RRR ಪ್ರಚಾರದ ಸ್ನೇಹ ಗೀತೆಯಲ್ಲಿ ಟಾಲಿವುಡ್ ಸ್ಟಾರ್ಸ್
RRRನಲ್ಲಿ ಮೌಳಿ ಜೊತೆ ಕೆಲಸ ಮಾಡಿದ್ದ ಸ್ಟಾರ್ಸ್ ಡ್ಯಾನ್ಸ್

ಪ್ರಭಾಸ್ ಅಷ್ಟೆ ಅಲ್ಲ ರಾಜಮೌಳಿ ಯವರ ಈ ಹಿಂದಿನ 11 ಸಿನಿಮಾಗಳ ಸ್ಟಾರ್ ನಾಯಕ ನಟರು ಥ್ರಿಬಲ್ ಆರ್ ಸಿನಿಮಾ ಪ್ರಮೋಷನಲ್ ಸಾಂಗ್​​ನಲ್ಲಿ ಹೆಜ್ಜೆ ಹಾಕಲಿದ್ದಾರೆ. ರವಿತೇಜಾ , ನಾಣಿ ಮುಂತಾದವರು ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ. ಈ ಹಾಡನ್ನ ಎಮ್​.ಎಮ್​ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಗಸ್ಟ್ 1ನೇ ತಾರೀಖ್ ರಣ ರೌದ್ರ ರುಧಿರ ಚಿತ್ರದ ಪ್ರಮೋಷನಲ್ ಸಾಂಗ್ ಹೊರಬರಲಿದೆ.

The post RRRಗೆ ‘ಬಾಹುಬಲಿ’ ಶಕ್ತಿ.. ಹಾಡೊಂದರಲ್ಲಿ ಡಾರ್ಲಿಂಗ್ ಪ್ರಭಾಸ್ ಡ್ಯಾನ್ಸ್ appeared first on News First Kannada.

Source: newsfirstlive.com

Source link