‘RRR’​ಗೆ ಠಕ್ಕರ್​ ನೀಡುತ್ತಾ ಅಪ್ಪು ‘ಜೇಮ್ಸ್​’​..? ರಾಜಮೌಳಿಯ ಡಬಲ್​ ಡೇಟ್​ನ ಲೆಕ್ಕಾಚಾರವೇನು..?


ಸ್ಯಾಂಡಲ್​ವುಡ್​ನ ಆರಾಧ್ಯ ಧೈವ, ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್ ಅವರ ನಿಧನದಿಂದ ಕೋಟ್ಯಾಂತರ ಅಭಿಮಾನಿಗಳ ಹೃದಯಕ್ಕೆ ಸಾಕಷ್ಟು ನೋವಾಗಿದೆ. ಆ ನೋವನ್ನು ಮರೆಯಲು ಅಪ್ಪು ಅಭಿಮಾನಿಗಳು ಅವರ ಚಿತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ. ಪುನೀತ್​ ನಟನೆಯ ‘ಜೇಮ್ಸ್’ ಸಿನಿಮಾ ಯಾವಾಗ ರಿಲೀಸ್​ ಆಗುತ್ತೇ ಅಂತಾ ಕಾದು ಕುಳಿತ್ತಿದ್ದಾರೆ. ಜೇಮ್ಸ್ ಸಿನಿಮಾ ಅಪ್ಪು ಹುಟ್ಟು ಹಬ್ಬದ ದಿನ ಅಂದರೆ, ಮಾರ್ಚ್​ 17ನೇ ತಾರೀಖು ರಿಲೀಸ್​ ಆಗುತ್ತೇ ಅನ್ನೋ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಈಗ ಜೇಮ್ಸ್ ಗೆ ಠಕ್ಕರ್​ ಕೊಡಲು ಟಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ‘ಆರ್​ಆರ್​ಆರ್’ ಸಿನಿಮಾ ರೆಡಿಯಾಗಿದೆ.

ಎರಡೆರಡು ಡೇಟ್​ ಫಿಕ್ಸ್​ ಮಾಡಿದ ರಾಜಮೌಳಿ..

ಎಲ್ಲಾ ಅಂದುಕೊಂಡತೆ ಆಗಿದ್ದರೆ ಥ್ರಿಬಲ್​ ಆರ್​ ಸಿನಿಮಾ ಇದೇ ತಿಂಗಳ 7ನೇ ತಾರೀಖು ವಿಶ್ವದಾದ್ಯಂತ ಗ್ರ್ಯಾಂಡ್​ ರಿಲೀಸ್​ ಆಗಬೇಕಿತ್ತು. ಆದರೆ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ರಾಜಮೌಳಿ ಬಳಗ ಸಿನಿಮಾ ರಿಲೀಸ್​  ದಿನಾಂಕವನ್ನು ಮುಂದೂಡಿತ್ತು. ಸದ್ಯ ಕೊರೊನಾ ಕೇಸ್​ಗಳು ಕಡಿಮೆ ಆದ ಹಿನ್ನೆಲೆ, ಥ್ರಿಬಲ್​ ಆರ್ ತಮ್ಮ ನಯಾ ದಿನಾಂಕವನ್ನು ಘೋಷಣೆ ಮಾಡಿದೆ. ಮಾರ್ಚ್​ 18ನೇ ಆಥವಾ ಏಪ್ರಿಲ್​ 28ನೇ ತಾರೀಖಿನಂದು ಸಿನಿಮಾವನ್ನು ರಿಲೀಸ್​ ಮಾಡಲು ಚಿತ್ರ ತಂಡ ರೆಡಿಯಾಗಿದೆ.

ಥ್ರಿಬಲ್​ ಆರ್​ ಜೊತೆಗೆ ತೆರೆಗೆ ಅಪ್ಪಳಿಸಲಿದೆ ‘ಬಚ್ಚನ್​ ಪಾಂಡೆ’ 

ಒಂದು ಸಿನಿಮಾವನ್ನು ರಿಲೀಸ್​ ಮಾಡಲು 2 ದಿನಾಂಕ ಯಾಕೆ ಎಂದು ಫ್ಯಾನ್ಸ್​ ಕನ್ಫ್ಯೂಸ್​ ಆಗಿದ್ದರು. ಮಾರ್ಚ್​ 18ನೇ ತಾರೀಖು ರಿಲೀಸ್​ ಮಾಡಲು ಕೊರೊನಾ ಏನಾದರೂ ಮತ್ತೆ ಅಡ್ಡಗಾಲು ಹಾಕಿದರೆ, ಏಪ್ರಿಲ್​ 28 ನೇ ತಾರೀಖು ಶತಾಯ ಗತಾಯ ರಿಲೀಸ್​ ಮಾಡಲೇಬೇಕು ಎಂದು ಹಟಕ್ಕೆ ಬಿದ್ದು, ರಾಜಮೌಳಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇವರ ಈ ಯೋಚನೆಯೇನೋ ಸರಿ, ಆದರೆ ಮಾರ್ಚ್​ 17ನೇ ತಾರೀಖು ‘ಜೇಮ್ಸ್​’ ಸಿನಿಮಾ ಏನಾದ್ರೂ ರಿಲೀಸ್​ ಆಗುವುದೇ ನಿಜ ಆದರೆ, ಕರ್ನಾಟಕದಲ್ಲಿ ಥ್ರಿಬಲ್​ ಆರ್​ ಹವಾ ಕಡಿಮೆ ಆಗೋದ್ರದಲ್ಲಿ ಸಂಶಯವೇ ಇಲ್ಲ. ಇನ್ನು ಬಾಲಿವುಡ್​ನ ಕಿಲಾಡಿ  ಅಕ್ಷಯ್​ ಕುಮಾರ್​ ನಟನೆಯ ‘ಬಚ್ಚನ್​ ಪಾಂಡೆ’ ಕೂಡ ಮಾರ್ಚ್​ 18ನೇ ತಾರಿಖು ರಿಲೀಸ್​ ಮಾಡೋದಾಗಿ ಘೋಷಿಸಿದೆ. ಅದೇ ದಿನ ಥ್ರಿಬಲ್​ ಆರ್​ ರಿಲೀಸ್​ ಆದರೆ, ಬಾಲಿವುಡ್​ನಲ್ಲಿ ಕೂಡ ಹಿನ್ನಡೆ ಅನುಭವಿಸೋ ಸಾಧ್ಯತೆಗಳಿವೆ ಎನ್ನಲಾಗಿದೆ.

ಟಾಲಿವುಡ್​ನಲ್ಲೂ ಥ್ರಿಬಲ್​ ಆರ್​ಗೆ ಟಫ್​ ಕಾಂಪಿಟೇಶನ್​..

ಇನ್ನು ಒಂದು ವೇಳೆ ಏಪ್ರಿಲ್​ 28ನೇ ತಾರೀಖು ರಿಲೀಸ್​ ಆದರೆ, ಟಾಲಿವುಡ್​ನ ವಿಕ್ಟರಿ ವೆಂಕಟೇಶ್​ ಮತ್ತು ವರುಣ್​ ತೇಜ್​ ಅಭಿನಯದ ‘ಎಫ್​-3’ ಸಿನಿಮಾ ಅದೇ ದಿನ ರಿಲೀಸ್​ ಆಗುತ್ತಿದೆ. ಥ್ರಿಬಲ್​ ಆರ್​ ಮತ್ತು ‘ಎಫ್​-3’ ಸಿನಿಮಾ ಟಾಲಿವುಡ್ ಸಿನಿಮಾ ಆಗಿರುವುದರಿಂದ ಮತ್ತು ಥ್ರಿಬಲ್​ ಆರ್​ಗೆ ಅಷ್ಟಾಗಿ ಎಫೆಕ್ಟ್​ ಆಗುವುದಿಲ್ಲ ಎನ್ನಲಾಗ್ತಿದೆ. ಆದರೆ ಬಾಲಿವುಡ್​ನಲ್ಲಿ ಟೈಗರ್​ ಶ್ರಾಫ್​​ ಅಭಿನಯದ ‘ಹೀರೋಪಂತಿ-2’ ಸಿನಿಮಾ ಕೂಡ ಒಂದು ದಿನ ಲೇಟಾಗಿ ಅಂದರೆ, ಏಪ್ರಿಲ್​-29 ನೇ ತಾರೀಖು ತೆರೆಗೆ ಬರಲು ಸಜ್ಜಾಗಿದೆ. ಹೀಗಾಗಿ ಈ ಡೇಟ್​ಗೂ ಥ್ರಿಬಲ್​ ಆರ್​ಗೆ ಮತ್ತೊಂದು ಬಾಲಿವುಡ್​ ಸಿನಿಮಾ ಎದುರಾಗಿ ನಿಂತಿದೆ.

ಈ ವಿಚಾರಗಳೆಲ್ಲವೂ ರಾಜಮೌಳಿಗೆ ಗೊತ್ತಿರಬಹುದು. ಆದರೆ ಮಾರ್ಚ್​ 17ನೇ ತಾರೀಖು ಪುನೀತ್​ ರಾಜ್​ ಕುಮಾರ್​ ಹುಟ್ಟು ಹಬ್ಬ ಎಂದು ಗೊತ್ತಿಲ್ಲದೇ, 18ನೇ ತಾರೀಖು ಥ್ರಿಬಲ್​ ಆರ್​ ರಿಲೀಸ್​ ಮಾಡಿದರೆ, ಕರ್ನಾಟಕದಲ್ಲಿ ಭಾರೀ ಹೊಡೆತ ಬೀಳಲಿದೆ ಎಂಬುದು ಸಿನಿ ಪಂಡಿತರ ಮಾತು.

The post ‘RRR’​ಗೆ ಠಕ್ಕರ್​ ನೀಡುತ್ತಾ ಅಪ್ಪು ‘ಜೇಮ್ಸ್​’​..? ರಾಜಮೌಳಿಯ ಡಬಲ್​ ಡೇಟ್​ನ ಲೆಕ್ಕಾಚಾರವೇನು..? appeared first on News First Kannada.

News First Live Kannada


Leave a Reply

Your email address will not be published. Required fields are marked *