ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಥ್ರಿಬಲ್ ಆರ್’ ಚಿತ್ರದ ಹೊಸ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಜನವರಿ 7 ರಂದು ‘ಥ್ರಿಬಲ್ ಆರ್’ ಸಿನಿಮಾ ರಿಲೀಸ್ ಆಗುತ್ತಿತ್ತು. ಈ ಕಾರಣ್ಕಾಗಿ ಚಿತ್ರತಂಡ ಹಲವು ಕಡೆ ಭರ್ಜರಿ ಪ್ರಚಾರವನ್ನು ಕೂಡ ನಡೆಸಿತ್ತು.
ಆದ್ರೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾದ ಹಿನ್ನಲೆ ಹಲವು ಕಡೆ ಚಿತ್ರಮಂದಿರಗಳಲ್ಲಿ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ‘ಥ್ರಿಬಲ್ ಆರ್’ ಚಿತ್ರ ಸೇರಿದಂತೆ ಅನೇಕ ಚಿತ್ರಗಳ ರಿಲೀಸ್ ದಿನಾಂಕವನ್ನು ಚಿತ್ರತಂಡ ಮೂಂದೂಡಿತ್ತು. ಆದ್ರೆ ಇದೀಗ ಇದೀಗ ‘ಥ್ರಿಬಲ್ ಆರ್’ ಚಿತ್ರತಂಡ ಚಿತ್ರದ ಹೊಸ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿದೆ.
Pose like our RAM & BHEEM with your dearest ones 🙂 #RRRMovie pic.twitter.com/N2Hw7RVkMp
— RRR Movie (@RRRMovie) January 14, 2022
ಮಾರ್ಚ್ 18ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದ್ದು, ಆದರೆ ಒಂದೊಮ್ಮೆ ಮಾರ್ಚ್ 18ರ ವೇಳೆಗೆ ಚಿತ್ರಮಂದಿರಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡದಿದ್ದರೆ ಏಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಚಿತ್ರತಂಡ ತಿಳಿಸಿದೆ.
ಇನ್ನು RRR ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.