RRR ಸಿನಿಮಾದ ಸೂಪರ್​​ ಸೀಕ್ರೇಟ್​​ ಬಿಚ್ಚಿಟ್ಟ ರಾಮ್​​ ಚರಣ್​​ ತೇಜ್​​​


ಸದ್ಯ ಇಡೀ ಭಾರತದಲ್ಲಿ ಆ ಸಿನಿಮಾದೆ ಜಪ ತಪ.ಎಸ್.​ ಎಸ್. ರಾಜಮೌಳಿ ನಿದೇರ್ಶನದ RRR ಸಿನಿಮಾದ ಬಗ್ಗೆ ಭಾರತವಷ್ಟೇ ಅಲ್ಲ, ಇಡೀ ಪ್ರಪಂಚವೇ ಕಾದುಕುಳಿತಿದೆ.2022 ರ ಜನೇವರಿ 7 ನೇ ತಾರೀಖು RRR​ ಸಿನಿಮಾ ತೆರೆಗಪ್ಪಳಿಸಲು ಸಿದ್ಧವಾಗಿದೆ.

ಈ ನಡುವೆ RRR ಚಿತ್ರ ತಂಡದಿಂದ ಮೊತ್ತೊಂದು ರೋಚಕ ಸುದ್ದಿ ಹೊರಬಿದ್ದೆದೆ. ​ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್ ಮತ್ತು ರಾಮ್ ಚರಣ್ ಪ್ರಮುಖು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎನ್​ಟಿಆರ್ ‘ಕೊಮರಂ ಭೀಮ್’ ಪಾತ್ರದಲ್ಲಿ ಕಾಣಸಿಕೊಂಡಿದ್ದರೆ, ರಾಮ್​ ಚರಣ್​ ‘ಅಲ್ಲೂರಿ ಸೀತಾರಾಮರಾಜು’ ಪಾತ್ರದಲ್ಲಿ  ಮಿಂಚಿದ್ದಾರೆ.. ರಾಮ್​ ಚರಣ್​ RRR ಸಿನಿಮಾದಲ್ಲಿ ಮೂರು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದೆ ವಿಶೇಷ.

ಸದ್ಯ ಸಿನಿಮಾದ ಟೀಸರ್, ಹಾಡುಗಳುನ್ನ ಸೂಕ್ಷ್ಮವಾಗಿ ಗಮನಿಸಿದರೆ ಇದು ಎಲ್ಲರಿಗೂ ಅರ್ಥವಾಗುತ್ತದೆ. ಈ ವಿಚಾರವಾಗಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತಾನಾಡಿರುವ ರಾಮ್​ಚರಣ್,  RRR ಸಿನಿಮಾದಲ್ಲಿ ನನ್ನದು ಅಲ್ಲೂರಿ ಸೀತಾರಾಮರಾಜು ಪಾತ್ರ. ರಾಜಮೌಳಿ ನನಗೆ ಕಥೆ ಹೇಳಿದಾಗಲೇ ನಾನು ಮರು ಮಾತಾಡದೆ ಒಪ್ಪಿಕೊಂಡೆ. ಇನ್ನೂ ಹೆಳಬೇಕು ಎಂದರೆ ಸಿನಿಮಾದಲ್ಲಿ ನಾನು ಮೂರು ವಿಶೇಷ ಪಾತ್ರಗಳಲ್ಲಿ, ಮೂರು ಅದ್ಭುತ ಲುಕ್​ನಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನೇನು ಸಿನಿಮಾ ಥಿಯೇಟರ್​ಗೆ ಲಗ್ಗೆ ಇಡಲು ಒಂದು ತಿಂಗಳು ಮಾತ್ರ ಬಾಕಿ ಇದೆ. ಸಿನಿಮಾ ರಿಲೀಸ್​ ಆದ ಮೇಲೆ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.  ​

 

News First Live Kannada

,

Leave a Reply

Your email address will not be published. Required fields are marked *