ರಾಜಮೌಳಿಯವರು ಟಾಮ್ ಅಂಡ್ ಜೆರ್ರಿಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತ್ರಿಬಲ್ ಆರ್ ಸಿನಿಮಾ ಮಾಡಿದರೇ? ಎಂಬ ಪ್ರಶ್ನೆ ಇದೀಗಾ ಹುಟ್ಟಿಕೊಂಡಿದೆ.
ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡ ನಾಟು ನಾಟು ಹಾಡಿನಿಂದಲೇ ಆರ್ಆರ್ಆರ್ ಸಿನಿಮಾವನ್ನು ವಿಶ್ವದಾದ್ಯಂತ ಜನರು ವೀಕ್ಷಿಸಿದ್ದಾರೆ. ಆದರೆ ಇದೀಗಾ RRR ಸಿನಿಮಾದ ಬಹಳಷ್ಟು ಸೀನ್ಗಳು ಟಾಮ್ ಅಂಡ್ ಜೆರ್ರಿಗೆ ಸಾಕಷ್ಟು ಹೋಲಿಕೆಯಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನಿರ್ದೇಶಕ ರಾಜಮೌಳಿಯವರು ಟಾಮ್ ಅಂಡ್ ಜೆರ್ರಿಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತ್ರಿಬಲ್ ಆರ್ ಸಿನಿಮಾ ಮಾಡಿದರೇ? ಎಂಬ ಪ್ರಶ್ನೆ ಇದೀಗಾ ಹುಟ್ಟಿಕೊಂಡಿದೆ. ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿರುವುದು ಕೇವಲ ಒಂದು ಎಡಿಟೆಡ್ ವಿಡಿಯೋ. ಹೌದು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಟಾಮ್ ಅಂಡ್ ಜೆರ್ರಿ ಹಾಗೂ ತ್ರಿಬಲ್ ಆರ್ ಸಿನಿಮಾದ ಕೆಲವೊಂದು ಸೀನ್ಗಳು ಹೋಲಿಕೆಯಾಗುವಂತೆ ಎಡಿಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಕಷ್ಟು ಹಾಸ್ಯಸ್ಪದವಾಗಿದೆ. ಇಲ್ಲಿದೆ ನೋಡಿ ವಿಡಿಯೋ.
So RRR is copy of Tom& Jerry @ssrajamouli 🤨🤨 pic.twitter.com/HzhMAf8KA8
— phunnyRabia (@PhunnyRabia) March 12, 2023