RSS: ಆರ್​ಎಸ್​ಎಸ್​ ಮುಖಂಡನ ಕಾರಿನ ಮೇಲೆ ‘ಕಿಲ್​ ಯೂ’ ಬರಹ ಪ್ರತ್ಯಕ್ಷ! | Kill You message found in Chikmagalur RSS leader car


Chikmagalur: ನಿನ್ನೆ ರಾತ್ರಿ ಕಿಡಿಗೇಡಿಗಳ ಈ ಕುಕೃತ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಿಲ್ ಯು, ಜಿಹಾದ್ ಮತ್ತು ಅಶ್ಲೀಲ ಪದಗಳನ್ನು ಡಾ.ಶಶಿಧರ್ ಅವರ ಬ್ಲೂ ಕಲರ್ ಕಾರಿನ ಮೇಲೆ ಬಳಕೆ ಮಾಡಿದ್ದಾರೆ.

RSS: ಆರ್​ಎಸ್​ಎಸ್​ ಮುಖಂಡನ ಕಾರಿನ ಮೇಲೆ ‘ಕಿಲ್​ ಯೂ’ ಬರಹ ಪ್ರತ್ಯಕ್ಷ!

ಆರ್​ಎಸ್​ಎಸ್​ ಮುಖಂಡನ ಕಾರಿನ ಮೇಲೆ ‘ಕಿಲ್​ ಯೂ’ ಬರಹ ಪ್ರತ್ಯಕ್ಷ!

ಚಿಕ್ಕಮಗಳೂರು: ಆರ್​ಎಸ್​ಎಸ್​ ಮುಖಂಡನ ಕಾರಿನ ಮೇಲೆ ‘ಕಿಲ್​ ಯೂ’ ಬರಹ (Kill You message) ಪ್ರತ್ಯಕ್ಷವಾಗಿದೆ. ಚಿಕ್ಕಮಗಳೂರು ಜಿಲ್ಲೆ ಪಟ್ಟಣದಲ್ಲಿರುವ ಲಕ್ಷ್ಮೀಶನಗರದಲ್ಲಿ ಈ ಜಿಹಾದಿ ಬರಹ ಕಂಡುಬಂದಿದೆ. ಚಿಕ್ಕಮಗಳೂರು ಜಿಲ್ಲಾ ಸಹ ಸಂಯೋಜಕ ಡಾ. ಶಶಿಧರ್ ಕಾರಿನ ಮೇಲೆ ಈ ಬರಹ ಬರೆಯಲಾಗಿದೆ. ಡಾ.ಶಶಿಧರ್ ಅವರು RSS ಧರ್ಮ ಜಾಗರಣ ಜಿಲ್ಲಾ ಸಹ ಸಂಯೋಜಕರಾಗಿದ್ದಾರೆ (Chikmagalur RSS leader). ಡಾ. ಶಶಿಧರ್ ಅವರು ತಮ್ಮ ಮನೆಯ ಮುಂದೆ ಕಾರು (car) ನಿಲ್ಲಿಸಿದ್ದಾಗ ಕಿಡಿಗೇಡಿಗಳು ಕಾರಿನ ನಾಲ್ಕೂ ಚಕ್ರಗಳ ಗಾಳಿಯನ್ನು ತೆಗೆದು ‘ಕಿಲ್ ಯೂ’ ಎಂದು ಬರೆದಿದ್ದಾರೆ. ಸ್ಥಳಕ್ಕೆ ಕಡೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ರಾತ್ರಿ ಕಿಡಿಗೇಡಿಗಳ ಈ ಕುಕೃತ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಿಲ್ ಯು, ಜಿಹಾದ್ ಮತ್ತು ಅಶ್ಲೀಲ ಪದಗಳನ್ನು ಡಾ.ಶಶಿಧರ್ ಅವರ ಬ್ಲೂ ಕಲರ್ ಕಾರಿನ ಮೇಲೆ ಬಳಕೆ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ

ನನ್ನ ಕಾರಿನ ಮೇಲೆ ಕೆಲ ಜಿಹಾದಿಗಳು ಬೆದರಿಕೆ ಬರಹ ಬರೆದಿದ್ದಾರೆ. ಇದು ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ, ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸೂಕ್ತ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿರುವೆ ಎಂದು ಕಡೂರಿನಲ್ಲಿ ಜಿಲ್ಲಾ ಸಹ ಸಂಯೋಜಕ ಡಾ. ಶಶಿಧರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.