ಬೆಳಗಾವಿ: ದಿಢೀರ್ ಬೆಳವಣಿಗೆ ಒಂದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರ್​ಎಸ್​ಎಸ್​ ನಾಯಕರ ಮನೆಗೆ ಭೇಟಿ ನೀಡಿದ್ದಾರೆ.

ಅಥಣಿಯ ಅರವಿಂದರಾವ್ ದೇಶಪಾಂಡೆ ಮನೆಗೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ದೇಶಪಾಂಡೆ ಅವರು ಆರ್​​ಎಸ್​ಎಸ್​ ಉತ್ತರ ಪ್ರ್ಯಾಂತದ ಸಂಚಾಲಕರಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ಯಾಕಂದ್ರೆ ಈಗಾಗಲೇ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅಲ್ಲದೇ ರಾಜಕೀಯದಿಂದಲೂ ನಿವೃತ್ತಿ ಹೊಂದುತ್ತೇನೆ. ಆದರೆ ನನಗೆ ದೇವೇಂದ್ರ ಫಂಡ್ನವಿಸ್ ರಾಜಕೀಯ ಗಾಡ್ ಫಾದರ್​, ರಾಜ್ಯ ಬಿಜೆಪಿಯಲ್ಲಿ ಕೆಲವ್ರಿಂದ ನೋವಾಗಿದೆ. ಸುಮ್ಮನೆ ಬಿಡಲ್ಲ ಅಂತಾ ಹೇಳಿದ್ದಾರೆ.

The post RSS ನಾಯಕನ ಮನೆಗೆ ರಮೇಶ್ ಜಾರಕಿಹೊಳಿ ದಿಢೀರ್​ ಭೇಟಿ; ಕುತೂಹಲ ಮೂಡಿಸಿದ ನಡೆ appeared first on News First Kannada.

Source: newsfirstlive.com

Source link