RSS ಬಗ್ಗೆ HDK ಬಾಯಿತಪ್ಪಿ ಮಾತಾಡಿದ್ದಾರೆ, ಅವರ ಜೊತೆ ಮಾತನಾಡುತ್ತೇನೆ- ಬಿಎಸ್​ವೈ

ಶಿವಮೊಗ್ಗ: ಆರ್​ಎಸ್​ಎಸ್ ಕುರಿತು ಮಾತನಾಡಿರುವ ಬಗ್ಗೆ ನಾನು ಸಾರ್ವಜನಿಕವಾಗಿ ಚರ್ಚಿಸಲು ಸಿದ್ಧನಿದ್ದೇನೆ ಎಂದು ಬಹಿರಂಗ ಹೇಳಿಕೆ ನೀಡಿರುವ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಅವರೊಂದಿಗೆ ವೈಯಕ್ತಿಕವಾಗಿ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​​ವೈ ಅವರು, ಕುಮಾರಸ್ವಾಮಿ ಅವರು ಬಾಯಿತಪ್ಪಿ ಎರಡು ಮಾತನಾಡಿದ್ದಾರೆ. ಅವರಿಗೆ ಏನೋ ತಪ್ಪು ಗ್ರಹಿಕೆ ಆಗಿರಬಹುದು. ಆದ್ದರಿಂದ ವೈಯಕ್ತಿಕವಾಗಿ ನಾನೇ ಅವರೊಂದಿಗೆ ಮಾತಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: RSS ವಿರುದ್ಧ ದಿಢೀರ್ ವಾಗ್ದಾಳಿ ಏಕೆ..? ಹೆಚ್​ಡಿಕೆ ಅಸಲಿ ಪ್ಲಾನ್ ಏನು..?

ಇದೇ ವೇಳೆ ರಾಜ್ಯ ಉಪಚುನಾವಣೆಗಳ ಮೇಲೆ ಬೆಲೆ ಏರಿಕೆ ಪರಿಣಾಮ ಉಂಟು ಮಾಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್​​ವೈ, ಬೆಲೆ ಏರಿಕೆ ಯಾಕೆ ಆಗ್ತಿದೆ ಅನ್ನೋದು ಜನರಿಗೆ ಗೊತ್ತಿದೆ. ನಾನು ಬೇರೆಯವರ ಟೀಕೆಗಳ ಉತ್ತರ ಕೊಡಲು ಹೋಗೋದಿಲ್ಲ. ಈ ಕಾರಣಗಳನ್ನು ಹೇಳಿಕೊಂಡು ಜನರು ನಮಗೆ ಹಿನ್ನಡೆ ಮಾಡ್ತಾರೆ ಅಂತ ನನಗೆ ಅನಿಸುತ್ತಿಲ್ಲ. ನಿಚ್ಚಿತ್ತವಾಗಿ ನಾವು ಎರಡು ಕ್ಷೇತ್ರದಲ್ಲಿ ಗೆಲುವು ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ’ಬಿಜೆಪಿ ನಾಯಕರು ಬರ್ಲಿ.. RSS ಕುರಿತು ಚರ್ಚಿಸಲು ನಾನ್​ ರೆಡಿ’-ಹೆಚ್​.ಡಿ.ಕುಮಾರಸ್ವಾಮಿ

ಇದನ್ನೂ ಓದಿ: ನಾವು ಹಾಗೂ ನಮ್ಮ ಕುಟುಂಬ ತಪ್ಪು ಮಾಡಿಲ್ಲ -ಬಿಎಸ್​ವೈ ಹೀಗ್ಯಾಕೆ ಅಂದ್ರು..?

News First Live Kannada

Leave a comment

Your email address will not be published. Required fields are marked *