RSS ವಿರುದ್ಧ ದಿಢೀರ್ ವಾಗ್ದಾಳಿ ಏಕೆ..? ಹೆಚ್​ಡಿಕೆ ಅಸಲಿ ಪ್ಲಾನ್ ಏನು..?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್​ಎಸ್​ಎಸ್​ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಆರಂಭಿಸಿದ್ದಾರೆ. ಜೆಡಿಎಸ್​ ಪಕ್ಷ 2023 ರ ಚುನಾವಣೆವರೆಗೂ ಈ ತಂತ್ರವನ್ನು ಜೀವಂತವಾಗಿಟ್ಟುಕೊಳ್ಳುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸೇವೆ ಎಂದು ಸೋಗಲಾಡಿತನ ತೋರಿಸುವ RSS ಬೆಲೆ ಏರಿಕೆ ಬಗ್ಗೆ ಮಾತನಾಡಲಿ- HDK

ಬಿಜೆಪಿ ಬಿ ಟೀಂ ಎಂಬ ಅಪವಾದದಿಂದ ಹೊರಬರಲು ಹೆಚ್​ ಡಿ ಕುಮಾರಸ್ವಾಮಿ ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕುಮಾರಸ್ವಾಮಿ ಹೇಳಿಕೆಗೆ ಕೇಸರಿಪಡೆ ಕೆಂಡಾಮಂಡಲವಾಗಿದೆ. ನಾನು ಹೇಳಿರುವುದು ವಾಸ್ತವ, ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ 25-30 ಪರ್ಸೆಂಟ್ ಟಿಕೆಟ್ ನೀಡುವ ಘೋಷಣೆ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅಲ್ಪಸಂಖ್ಯಾತ ಮತಗಳನ್ನ ಸೆಳೆಯುವ ಲೆಕ್ಕಾಚಾರ ಜೆಡಿಎಸ್​ನದ್ದಾಗಿದ್ದು ಇದೇ ಕಾರಣಕ್ಕೆ 2023 ರ ವಿಧಾನಸಭಾ ಚುನಾವಣೆವರೆಗೂ ಈ ತಂತ್ರವನ್ನು ಜೀವಂತವಾಗಿಟ್ಟುಕೊಳ್ಳಲಿದ್ದಾರಂತೆ. ಈಗಾಗಲೇ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ 25-30 ಪರ್ಸೆಂಟ್ ಟಿಕೆಟ್ ನೀಡುವ ಘೋಷಣೆಯನ್ನ ಕುಮಾರಸ್ವಾಮಿ ಮಾಡಿದ್ದಾರೆ.

ಇದನ್ನೂ ಓದಿ: ʼಅನೈತಿಕ-ನಿರ್ಲಜ್ಜ-ನೀಚʼ ರಾಜಕಾರಣ RSSನಲ್ಲೇ ಕಲಿಸಲಾಯಿತಾ..? C.T ರವಿಗೆ HDK ಟಾಂಗ್

ಜೆಡಿಎಸ್​ಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂಬುದನ್ನ ಸಾರಿ ಹೇಳುವ ಉದ್ದೇಶ

ಮುಸ್ಲಿಂ ಸಮುದಾಯದ ಇಕ್ಬಾಲ್ ಅನ್ಸಾರಿಯನ್ನ ಮಂತ್ರಿ ಮಾಡಲು ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದರು ಎಂಬ ಆರೋಪವನ್ನ ಈ ಹಿಂದೆ ಮಾಡಿದ್ದರು. ಇದೀಗ ಆರ್‌ಎಸ್‌ಎಸ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಅಷ್ಟೇ ಏಕೆ ನವೆಂಬರ್ ತಿಂಗಳಿನಲ್ಲಿ ಮುಸ್ಲಿಂ ಸಮುದಾಯದ ಸಿಎಂ ಇಬ್ರಾಹಿಂಗೆ ಪಕ್ಷದ ಸಾರಥ್ಯ ವಹಿಸುವ ಲೆಕ್ಕಾಚಾರವೂ ಇದೆಯಂತೆ. ಈ ಮೂಲಕ ಜೆಡಿಎಸ್​ಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂಬುದನ್ನ ಸಾರಿ ಹೇಳುವ ಉದ್ದೇಶ ಹೊಂದಿದ್ದಾರಂತೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ಬಿಜೆಪಿ ಬಿಟೀಂ ಎಂಬ ಆರೋಪದಿಂದ ಜೆಡಿಎಸ್ ಗೆ ದೊಡ್ಡ ಹೊಡೆತ ಬಿದ್ದಿದ್ದು ಈ ಹೊಡೆತವನ್ನು ತಪ್ಪಿಸಿಕೊಳ್ಳಲು ಆರ್‌ಎಸ್‌ಎಸ್ ವಿರುದ್ಧದ ಅಸ್ತ್ರವನ್ನ ಜೀವಂತವಾಗಿ ಇಟ್ಟುಕೊಳ್ಳುವ ತಂತ್ರ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ನಿಜ ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ, ನಾನು ಸತ್ಯದ ಪರ’- HDK ಸಮರ್ಥನೆ

News First Live Kannada

Leave a comment

Your email address will not be published. Required fields are marked *