RSS ವಿಷಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ; ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ -ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ | Because of Siddaramaiah congress collapse in Karnataka says nalin kumar kateel


RSS ವಿಷಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ; ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ -ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

RSS ಚಡ್ಡಿ ಸುಟ್ಟು ಹಾಕುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಆರ್ಎಸ್ಎಸ್ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯಗೆ ಚಡ್ಡಿ ಪಾರ್ಸಲ್ ವಿಚಾರಕ್ಕೆ ಸಂಬಂಧಿಸಿ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕೋಡಿ: ಕಳೆದ ಬಾರಿ ಎರಡು ಬಿಜೆಪಿ ಒಂದು ಕಾಂಗ್ರೆಸ್, ಒಂದು ಜೆಡಿಎಸ್ ಪಾಲಾಗಿತ್ತು. ಈ ಬಾರಿ ನಮ್ಮ ಎಲ್ಲ ಕ್ಷೇತ್ರದಲ್ಲೂ ಬಹುಮತ ಸಾಧಿಸುತ್ತೇವೆ ಎಂದು ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.

ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯಾ ನಿಷೇಧ ಹಾಗೂ ಮತಾಂತರ ಕಾಯ್ದೆ ಜಾರಿಗೆ ತರಲು ಸಮಸ್ಯೆಯಾಯ್ತು. ಈ ಚುನಾವಣೆ ಹಗುರವಾಗಿ ತೆಗೆದುಕೊಳ್ಳಲ್ಲ. ಸವಾಲಾಗಿ ತಗೆದುಕೊಳ್ಳಬೇಕು. ಶಿಕ್ಷಕರು ಹಾಗೂ ಪದವಿಧರ ಮತದಾರರು ಇದ್ದಾರೆ. ಮೈಸೂರಿನಲ್ಲಿ ಮೊದಲ ಬಾರಿ ಬಿಜೆಪಿ ಬಂದಿದೆ. ಹುಬ್ಬಳ್ಳಿ ಒಂದು ಬಾರಿಯೂ ಬಂದಿಲ್ಲ. ಹೊರಟ್ಟಿ ಬಿಜೆಪಿಗೆ ಬಂದಿರುವುದರಿಂದ ಹುಬ್ಬಳ್ಳಿ ಕೂಡ ಈ ಬಾರಿ ಬರುತ್ತೆ. ಅಭ್ಯರ್ಥಿಗಳನ್ನು ಗೆಲ್ಲಿಸಲು ಶಾಸಕರು ಮತದಾರರ ಸಂಪರ್ಕದಲ್ಲಿ ಇರಬೇಕು. ಕಾಂಗ್ರೆಸ್ ತಂತ್ರ ಮಾಡಿದ್ದಾರೆ. ಬೋಗಸ್ ಓಟ್ ಬಗ್ಗೆ ಹೇಳುತ್ತಿದ್ದಾರೆ. ಮತದಾರರ ಮನವಲಿಸಿ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು ಎಂದು ಪ್ರಚಾರ ಸಭೆಯಲ್ಲಿ ಶಾಸಕರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಟೀಲು ಕರೆ ನೀಡಿದ್ದಾರೆ.

TV9 Kannada


Leave a Reply

Your email address will not be published.