ಬೆಂಗಳೂರು: ಆರ್.ಟಿ.ಐ ಕಾರ್ಯಕರ್ತ ವೆಂಕಟೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಕೈ ಕಾಲುಗಳನ್ನ ಕಟ್ ಮಾಡಿ ಅವರ ಸಾವಿಗೆ ಕಾರಣರಾದ ಆರೋಪದ ಹಿನ್ನೆಲೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ತಾವರೆಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಕೊನೆಗೂ ಬದುಕುಳಿಯಲಿಲ್ಲ RTI ಕಾರ್ಯಕರ್ತ.. ಕೈ ಕಾಲು ಕಟ್ ಆಗಿದ್ದ ವೆಂಕಟೇಶ್​ ಚಿಕಿತ್ಸೆ ಫಲಿಸದೇ ಸಾವು

ಪ್ರದೀಪ್ ಕುಮಾರ್ (33) ಸತೀಶ್ (20) ತೇಜಸ್ (22) ಬಂಧಿತ ಆರೋಪಿಗಳು. ಜುಲೈ 15 ರಂದು ಮಾರಕಾಸ್ತ್ರಗಳಿಂದ ವೆಂಕಟೇಶ್ ಮೇಲೆ ಆರೋಪಿಗಳು ದಾಳಿ ಮಾಡಿದ್ದರು. ದಾಳಿಯಲ್ಲಿ ವೆಂಕಟೇಶ್ ಕೈ ಮತ್ತು ಕಾಲು ಕಟ್ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜುಲೈ 17 ರಂದು ಆಸ್ಪತ್ರೆಯಲ್ಲಿ ವೆಂಕಟೇಶ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ: RTI ಕಾರ್ಯಕರ್ತನ ಕೈ, ಕಾಲು ಕಟ್ ಮಾಡಿ ಹತ್ಯೆಗೆ ಯತ್ನ; ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದೇ ತಪ್ಪಾಯ್ತಾ?

The post RTI ಕಾರ್ಯಕರ್ತನ ಕೈ ಕಾಲು ಕಟ್ ಮಾಡಿ ಹತ್ಯೆ ಮಾಡಿದ್ದ ಕೇಸ್; ಆರೋಪಿಗಳು ಕೊನೆಗೂ ಅಂದರ್ appeared first on News First Kannada.

Source: newsfirstlive.com

Source link