ಬೆಂಗಳೂರು: ಆರ್​ಟಿಐ ಕಾರ್ಯಕರ್ತ ವೆಂಕಟೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಕೋರಿ ಆರ್​ಟಿಐ ಕಾರ್ಯಕರ್ತರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ಆರ್​ಟಿಐ ಕಾರ್ಯಕರ್ತರ ಮೇಲೆ ದಿನದಿಂದ ದಿನಕ್ಕೆ ಹಲ್ಲೆಗಳು ಹೆಚ್ಚಾಗ್ತಿದ್ದು ಭ್ರಷ್ಟಾಚಾರ ವಿರುದ್ಧದ ಬಗ್ಗೆ ದನಿಯೆತ್ತಿದವರ ಹತ್ಯೆಯಾಗ್ತಿವೆ ಇತ್ತೀಚೆಗೆ  ಆರ್​ಟಿಐ ಕಾರ್ಯಕರ್ತ ವೆಂಕಟೇಶ್ ಹತ್ಯೆಯಂತ ಪ್ರಕರಣಗಳು ಮತ್ತೆ ಮರುಕಳಿಸಿದ ಹಾಗೆ ಕ್ರಮ ತೆಗೆದುಕೊಳ್ಳುವಂತೆ ಕೋರಿದೆ.

ಇದನ್ನೂ ಓದಿ: ಕೊನೆಗೂ ಬದುಕುಳಿಯಲಿಲ್ಲ RTI ಕಾರ್ಯಕರ್ತ.. ಕೈ ಕಾಲು ಕಟ್ ಆಗಿದ್ದ ವೆಂಕಟೇಶ್​ ಚಿಕಿತ್ಸೆ ಫಲಿಸದೇ ಸಾವು

ಯಾವುದೆ ಫಲಾಪೇಕ್ಷೆ ಇಲ್ಲದೆ ಸಮಾಜದ ಸುಧಾರಣೆಗಾಗಿ ಸೇವೆ ಸಲ್ಲಿಸುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಮಾಡುತ್ತಿರುವ ಪ್ರಕರಣಗಳನ್ನು ತಡೆಯಲು ಕಠಿಣವಾದ ಕಾನೂನನ್ನು ಜಾರಿಗೊಳಿಸಬೇಕು ಎಂದು ಕಾರ್ಯಕರ್ತರು ಗೃಹ ಸಚಿವ ಬಸವರಾಜ್​ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದಾರೆ.

The post RTI ಕಾರ್ಯಕರ್ತನ ಬರ್ಬರ ಕೊಲೆ; ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುವಂತೆ ಗೃಹ ಸಚಿವರಿಗೆ ಮನವಿ appeared first on News First Kannada.

Source: newsfirstlive.com

Source link