ಯಾದಗಿರಿ: ಆರ್​ಟಿಓ ಅಧಿಕಾರಿಗಳೆಂದು ಹೇಳಿಕೊಂಡು ವಾಹನ ಚಾಲಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ನಡೆದಿದೆ.

ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹಂದರಕಿ ಕ್ರಾಸ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್​​ಗಳನ್ನ ಹಾಕಿ ವಾಹನ ತಡೆಯುತ್ತಿದ್ದರು. ನಾವು ಆರ್​​ಟಿಒ ಅಧಿಕಾರಿಗಳೆಂದು ವಾಹನ ಚಾಲಕರಿಗೆ ಹೆದರಿಸಿ ಹಣವನ್ನ ವಸೂಲಿ ಮಾಡುತ್ತಿದ್ದರು.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಗುರುಮಠಕಲ್ ಪೊಲಿಸರು ಶಿವಕುಮಾರ್, ಪ್ರವೀಣ್, ಎಂಬುವವರನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ.

 

The post RTO ಅಧಿಕಾರಿಗಳೆಂದು ನಂಬಿಸಿ ಹಣ ವಸೂಲಿ -ಪುಂಡರಿಗೆ ಚಳ್ಳೆಹಣ್ಣು ತಿನ್ನಿಸಿದ ಸ್ಥಳೀಯರು appeared first on News First Kannada.

Source: newsfirstlive.com

Source link