RTPS ಬೆನ್ನಲ್ಲೇ BTPSನಲ್ಲೂ ಕಲ್ಲಿದ್ದಲು ಅಭಾವ; 2 ಘಟಕಗಳು ವಿದ್ಯುತ್​ ಉತ್ಪಾದನೆ ಸ್ಥಗಿತ

ಬಳ್ಳಾರಿ: ರಾಜ್ಯಕ್ಕೆ ಶೇ 45 ರಷ್ಟು ವಿದ್ಯುತ್ ನೀಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಕೊರತೆಯಾಗಿ ವಿದ್ಯುತ್ ಉತ್ಪಾದನೆ ಮೇಲೆ ಕರಿನೆರಳು ಬಿದ್ದ ಬೆನ್ನಲ್ಲೇ ಬಳ್ಳಾರಿಯ ಕುಡಿತಿನಿ ಬಳಿ ಇರುವ ಬಿಟಿಪಿಎಸ್ ನಲ್ಲೂ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್​ ಉತ್ಪಾದನೆಯ ಮೇಲೆ ಹೊಡೆತ ಬಿದ್ದಿದೆ.

ಮೂರು ಘಟಕಗಳನ್ನ ಹೊಂದಿರುವ ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್ ಮೂರು ಘಟಕಗಳಿಂದ ನಿತ್ಯ 1700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಮರ್ಥ್ಯ ಹೊಂದಿದೆ. ಆದರೆ ಕಲ್ಲಿದ್ದಲು ಅಭಾವದಿಂದಾಗಿ ಸದ್ಯ ಒಂದೇ ಘಟಕ ಚಾಲ್ತಿಯಲ್ಲಿದ್ದು ಎರಡು ಘಟಕ ಸ್ಥಗಿತಗೊಂಡಿವೆ ಎಂದು ಮಾಹಿತಿ ಲಭ್ಯವಾಗಿದೆ.

ಸದ್ಯ ಚಾಲ್ತಿಯಲ್ಲಿರುವ ಒಂದು ಘಟಕದಿಂದ 500 ಮೆಗಾ ವ್ಯಾಟ್ ವಿದ್ಯುತ್​ ಉತ್ಪಾದನೆಯಾಗುತ್ತಿದೆ. ಬಿಟಿಪಿಎಸ್ ನಲ್ಲಿ ಸದ್ಯ 15 ಸಾವಿರ ಟನ್ ಕಲ್ಲಿದ್ದಲು ಸ್ಟಾಕ್ ಇದೆ. ಒಂದು ಘಟಕ ನಡೆಯಲು ದಿನಕ್ಕೆ 8 ಸಾವಿರ ಟನ್ ಕಲ್ಲಿದ್ದಲು ಬೇಕು. ಸದ್ಯ ಇರುವ ಸ್ಟಾಕ್ ಗೆ ಕೇವಲ ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ. ನಾಳೆ ನಾಡಿದ್ದು ಮತ್ತೆ ಕಲ್ಲಿದ್ದಲು ಬರಬಹುದು ಅಂತ ಬಿಟಿಪಿಎಸ್ ಅಧಿಕಾರಿಗಳು ನ್ಯೂಸ್ ಫಸ್ಟ್ ಗೆ ಮಾಹಿತಿ ನೀಡಿದ್ದು ಕರುನಾಡಿಗೆ ಕಗ್ಗತ್ತಲು ಕವಿಯುವ ಆತಂಕ ಎದುರಾಗಿದೆ.

ಇದನ್ನೂ ಓದಿ:ವಿದ್ಯುತ್ ತಯಾರಿಕೆಗೆ ಕಲ್ಲಿದ್ದಲು ಕೊರತೆ.. ನಾಳೆ ರಾಜ್ಯದಲ್ಲಿ ವಿದ್ಯುತ್ ಅಭಾವ ಸಾಧ್ಯತೆ

News First Live Kannada

Leave a comment

Your email address will not be published. Required fields are marked *