Rupee Value: ಮತ್ತೆ ಕುಸಿಯುತ್ತಿರುವ ರೂಪಾಯಿ ಮೌಲ್ಯ, ಒಂದೇ ದಿನ 48 ಪೈಸೆ ಇಳಿಕೆ – Rupee Falls 48 Paise To 81.26 As Fed Warning Boosts Bruised Dollar Latest business news in Kannada


ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದ ರೂಪಾಯಿ ಮೌಲ್ಯ ಒಂದೇ ದಿನ 48 ಪೈಸೆ ಇಳಿಕೆಯಾಗಿ 81.26 ಆಯಿತು.

Rupee Value: ಮತ್ತೆ ಕುಸಿಯುತ್ತಿರುವ ರೂಪಾಯಿ ಮೌಲ್ಯ, ಒಂದೇ ದಿನ 48 ಪೈಸೆ ಇಳಿಕೆ

ಸಾಂದರ್ಭಿಕ ಚಿತ್ರ

Image Credit source: Reuters

ನವದೆಹಲಿ: ಕಳೆದ ಕೆಲವು ದಿನಗಳಿಂದ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದ ರೂಪಾಯಿ ಮೌಲ್ಯ (Rupee Value) ಮತ್ತೆ ಕುಸಿಯತೊಡಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಹಣದುಬ್ಬರ ತಡೆಯಲು ಬಡ್ಡಿ ದರ ಹೆಚ್ಚಿಸಿದ ಹಾಗೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ಡಾಲರ್ ಮೇಲೆ ಪರಿಣಾಮ ಬೀರಿದೆ. ಇದರ ಬೆನ್ನಲ್ಲೇ ರೂಪಾಯಿ ಮೌಲ್ಯದಲ್ಲಿ ಸೋಮವಾರ ತೀವ್ರ ಕುಸಿತವಾಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಒಂದೇ ದಿನ 48 ಪೈಸೆ ಇಳಿಕೆಯಾಗಿ 81.26 ಆಯಿತು.

ಶುಕ್ರವಾರದ ವಹಿವಾಟಿನ ಮುಕ್ತಾಯದ ಸಂದರ್ಭದಲ್ಲಿ ರೂಪಾಯಿ ಮೌಲ್ಯ 80.8100 ಆಗಿತ್ತು. ಸೋಮವಾರದ ವಹಿವಾಟಿನ ಆರಂಭದಲ್ಲಿ 80.5350 ಆಗಿತ್ತು. ಇಂದು 80.5125 ರಿಂದ 81.2838 ರ ಮಧ್ಯೆ ವಹಿವಾಟು ನಡೆಸಿತು. ಇದರೊಂದಿಗೆ, ಕಳೆದ ವಾರದ ರೂಪಾಯಿ ಮೌಲ್ಯ ವೃದ್ಧಿಯ ಓಟಕ್ಕೆ ತಡೆಬಿದ್ದಂತಾಯಿತು.

ಎಂಎಸ್​ಸಿಐ (ಅಮೆರಿಕದ ಈಕ್ವಿಟಿ ಕಂಪನಿ) ಹೂಡಿಕೆ ಹೊರಹರಿವು, ತೈಲ ಕಂಪನಿಗಳು ಮತ್ತು ರಕ್ಷಣಾ ಸಂಸ್ಥೆಗಳ ನಿರ್ಧಾರಗಳು ಡಾಲರ್ ಮೌಲ್ಯ ವರ್ಧನೆಗೆ ಕಾರಣವಾಯಿತು ಎಂದು ಫಿನ್​ರೆಕ್ಸ್ ಟ್ರೆಷರಿ ಅಡ್ವೈರ್ಸ್​​ನ ಖಜಾಂಚಿ ಅನಿಲ್ ಕುಮಾರ್ ಬನ್ಸಾಲಿ ಹೇಳಿದ್ದಾರೆ.

TV9 Kannada


Leave a Reply

Your email address will not be published.