S Kumar’s Textile: ಎಸ್ ಕುಮಾರ್ಸ್ ವಿರುದ್ಧ 1,245 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ | CBI Booked Textile Major S Kumars In Rs 1245 Crore Banking Fraud


S Kumar's Textile: ಎಸ್ ಕುಮಾರ್ಸ್ ವಿರುದ್ಧ 1,245 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

ಸಾಂದರ್ಭಿಕ ಚಿತ್ರ

1,245 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ವಂಚನೆ ಆರೋಪಕ್ಕಾಗಿ ಜವಳಿ ಪ್ರಮುಖ ಎಸ್ ಕುಮಾರ್ಸ್ ನೇಷನ್‌ವೈಡ್ ಲಿಮಿಟೆಡ್ (SKNL) ಮತ್ತು ಅದರ ಪ್ರವರ್ತಕರು ಹಾಗೂ ನಿರ್ದೇಶಕರು ಸೇರಿದಂತೆ 14 ಇತರರ ವಿರುದ್ಧ ಸಿಬಿಐ (CBI) ದೂರು ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಎಫ್‌ಐಆರ್ ದಾಖಲಾದ ನಂತರ ಆರೋಪಿಗಳೊಂದಿಗೆ ನಂಟು ಹೊಂದಿರುವ ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 13 ಸ್ಥಳಗಳಲ್ಲಿ ಬುಧವಾರದಂದು “ದೋಷಪೂರಿತ ದಾಖಲೆಗಳನ್ನು” ವಶಪಡಿಸಿಕೊಂಡಿದೆ ಎಂದು ಸಿಬಿಐ ವಕ್ತಾರ ಆರ್‌ಸಿ ಜೋಶಿ ತಿಳಿಸಿದ್ದಾರೆ.

ಕಂಪೆನಿಯು ಹೆಚ್ಚಿನ ಮೌಲ್ಯದ ಸೂಕ್ಷ್ಮ ಹತ್ತಿ ಬಟ್ಟೆಗಳು ಮತ್ತು ಗೃಹ ಜವಳಿಗಳನ್ನು ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಈ ಕಂಪೆನಿಯು ಐಡಿಬಿಐ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲವನ್ನು ಪಡೆದುಕೊಂಡಿದೆ.

2012ರಿಂದ 2018ರ ಅವಧಿಯಲ್ಲಿ ಬ್ಯಾಂಕ್ ಹಣವನ್ನು ದುರುಪಯೋಗಪಡಿಸಿಕೊಂಡ/ಬದಲಾವಣೆ ಮಾಡಿದ ಆರೋಪದ ಮೇಲೆ ಕಂಪೆನಿಯ ಪ್ರವರ್ತಕರು/ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇದರಿಂದಾಗಿ ಬ್ಯಾಂಕ್‌ಗಳಿಗೆ ಸುಮಾರು 1,245.15 ಕೋಟಿ ನಷ್ಟವಾಗಿದೆ ಎಂದು ಜೋಶಿ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *