ಬೆಂಗಳೂರು: ಬಿಜೆಪಿ ಪ್ರಭಾವಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣನನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಇದೇ ಪ್ರಕರಣದಲ್ಲಿ ದೇವರಾಜ್ ಅಲಿಯಾಸ್ ಕುಳ್ಳ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ.
ಯಾರು ಈ ಕುಳ್ಳ ದೇವರಾಜ್..?
ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ಎಸ್.ಆರ್.ವಿಶ್ವನಾಥ್ ಅವರ ಕಟ್ಟಾ ಬೆಂಬಲಿಗ. ವಿಶ್ವನಾಥ್ ಕೊಲೆಗೆ ಸ್ಕೆಚ್ ಹಾಕುವ ಸಂಬಂಧ ಗೋಪಾಲಕೃಷ್ಣ ಮಾತನಾಡಿದ್ದನ್ನ ವಿಡಿಯೋ ಮಾಡಿರುವ ಆರೋಪ ದೇವರಾಜ್ ಮೇಲೆ ಇದೆ. ವಿಶ್ವನಾಥ್ಗೆ ಹತ್ತಿರವಾಗಲು ಗೋಪಾಲಕೃಷ್ಣ ಬಳಿ ಹೋಗಿ ಬಿಡಿಎ ಅಧ್ಯಕ್ಷರನ್ನ ಮುಗಿಸುವ ಪ್ಲಾನ್ ಅನ್ನ ದೇವರಾಜ್ ಕೊಟ್ಟಿದ್ದ ಎಂದು ಹೇಳಲಾಗಿದೆ.
ಇದೀಗ ಗೋಪಾಲಕೃಷ್ಣ ತಾನೇ ತೋಡಿದ್ದ ಹಳ್ಳಕ್ಕೆ ಬೀಳುವ ಆತಂಕ ಎದುರಾಗಿದೆ. ಸದ್ಯ ಸಿಸಿಬಿ ಅಧಿಕಾರಿಗಳು ದೇವರಾಜ್ನನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಬಿ ತನಿಖೆಯಲ್ಲಿ ಕುಳ್ಳ ದೇವರಾಜ್, ಗೋಪಾಲಕೃಷ್ಣರನ್ನ ಪ್ರಚೋಧಿಸಿ ವಿಡಿಯೋ ಮಾಡಿರೋದು ಬೆಳಕಿಗೆ ಬಂದಿದ್ಯಂತೆ. ಇದೇ ಕಾರಣಕ್ಕೆ ಕುಳ್ಳ ದೇವರಾಜ್ನನ್ನ ವಶಕ್ಕೆ ಪಡೆದು ಗೋಪಾಲಕೃಷ್ಣ ಅವರನ್ನ ಸಿಸಿಬಿ ಅಧಿಕಾರಿಗಳು ಬಿಟ್ಟಿದ್ದಾರೆ ಎನ್ನಲಾಗಿದೆ.