SA vs ZIM: ಮೊದಲ ಓವರ್​ನಲ್ಲೇ 23 ರನ್! ಆಫ್ರಿಕಾ ಗೆಲುವಿಗೆ ಅಡ್ಡಿಯಾದ ವರುಣ; ನಿಟ್ಟುಸಿರು ಬಿಟ್ಟ ಜಿಂಬಾಬ್ವೆ – sa vs zim match report icc men t20 world cup 2022 south africa vs zimbabwe full scorecard in Kannada


T20 World Cup 2022: ಒಂದು ವೇಳೆ ಮತ್ತೆ ಪಂದ್ಯ ಆರಂಭಗೊಂಡಿದ್ದರೆ ಡಿಎಲ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವನ್ನು ಪಲಿತಾಂಶವಿಲ್ಲದೆ ಕೊನೆಗೊಳಿಸಬೇಕಾಯಿತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡವು.

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್‌ (T20 World Cup 2022) ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇದರ ನಡುವೆ ಅಪರೂಪದ ಅತಿಥಿಯಾಗಿ ಎಂಟ್ರಿಕೊಡುತ್ತಿರುವ ಮಳೆರಾಯ ಕ್ರಿಕೆಟ್ ರೋಚಕತೆಗೆ ಆಗಾಗ ಫುಲ್​ಸ್ಟಾಪ್ ಇಡುತ್ತಿದ್ದಾನೆ. ಈಗ ವರುಣರಾಯನ ಕಣ್ಣಾಮುಚ್ಚಾಲೆ ಆಟಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ (South Africa and Zimbabwe) ನಡುವಣ ಪಂದ್ಯ ಪಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಪಂದ್ಯದುದ್ದಕ್ಕೂ ಕಾಡಿದ ಮಳೆರಾಯ ಆಫ್ರಿಕಾ ಪಾಲಾಗಬೇಕಿದ್ದ ಗೆಲುವನ್ನು ಕುಸಿದುಕೊಂಡು ಜಿಂಬಾಬ್ವೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾನೆ. ಈ ಮೂಲಕ ಸೋಲಿನ ಅಂಚಿನಲ್ಲಿ ನಿಂತಿದ್ದ ಜಿಂಬಾಬ್ವೆಗೆ ಬಿಗ್ ರಿಲೀಫ್ ಸಿಕ್ಕರೆ, ದಕ್ಷಿಣ ಆಫ್ರಿಕಾ ಪಾಯಿಂಟ್ಸ್ ಹಂಚುವ ಅನಿವಾರ್ಯತೆಗೆ ಸಿಲುಕಿತು.

ಹೋಬರ್ಟ್‌ನಲ್ಲಿ ನಡೆದ ಸೂಪರ್-12 ಗುಂಪು-2 ರ ಈ ಪಂದ್ಯವು ನಿಗದಿತ ಸಮಯದಕ್ಕೆ ಪ್ರಾರಂಭವಾಗಲಿಲ್ಲ. ಹಲವು ಬಾರಿ ಮಳೆ ಸುರಿದ ಕಾರಣ ಪಂದ್ಯ ತಡವಾಗಿ ಆರಂಭವಾಯಿತ್ತಾದರೂ ಪಂದ್ಯವನ್ನು ತಲಾ 9 ಓವರ್​ಗಳಿಗೆ ನಿಗದಿಪಡಿಸಲಾಯಿತು. ಆದಾಗ್ಯೂ, ಮಳೆ ಅಡ್ಡಿಪಡಿಸುವ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆಗೆ ಇದು ಆಘಾತ ನೀಡಿತು.

ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ

ಅರ್ಹತಾ ಸುತ್ತಿನಲ್ಲಿ ಪ್ರಬಲ ಪ್ರದರ್ಶನ ನೀಡಿ ಸೂಪರ್-12 ತಲುಪಿದ್ದ ಜಿಂಬಾಬ್ವೆ, ದಕ್ಷಿಣ ಆಫ್ರಿಕಾದ ವೇಗಿಗಳ ಮುಂದೆ ಸಂಪೂರ್ಣ ಮಂಕಾಯಿತು. ಮಾರಕ ದಾಳಿ ನಡೆಸಿದ ವೇಯ್ನ್ ಪಾರ್ನೆಲ್ ಮತ್ತು ಲುಂಗಿ ಎನ್‌ಗಿಡಿ ಮೊದಲ 4 ಓವರ್​ನಲ್ಲೇ, ಜಿಂಬಾಬ್ವೆ ತಂಡದ ನಾಯಕ ಕ್ರೇಗ್ ಇರ್ವಿನ್ ಮತ್ತು ಇನ್ ಫಾರ್ಮ್ ಬ್ಯಾಟರ್ ಸಿಕಂದರ್ ರಜಾ ಸೇರಿದಂತೆ 4 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ 4 ವಿಕೆಟ್ ಕಳೆದುಕೊಂಡ ಜಿಂಬಾಬ್ವೆಯ ಸ್ಕೋರ್ ಬೋರ್ಡ್​ನಲ್ಲಿ ಕೇವಲ 19 ರನ್ ಕಾಣುತ್ತಿತ್ತು.

TV9 Kannada


Leave a Reply

Your email address will not be published.