Sachin Tendulkar: ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ‘ಫೇಕ್’ | Sachin Tendulkar Denies Picking All Time XI, Calls Report ‘Fake’


Sachin Tendulkar All-Time XI: ಸಚಿನ್ ಅವರ ಆಯ್ಕೆ ಹೆಸರಿನಲ್ಲಿ ಹರಿದಾಡಿದ್ದ ಸಾರ್ವಕಾಲಿಕ XI ಕೆಲವು ಆಶ್ಚರ್ಯಕರ ಲೋಪಗಳು ಕಂಡು ಬಂದಿತ್ತು.

ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಹೆಸರಿಸಿದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್​ನ ಪೋಸ್ಟ್ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ಪಟ್ಟಿಯಲ್ಲಿ ವಿಶ್ವದ ಖ್ಯಾತ ಕ್ರಿಕೆಟಿಗರ ಹೆಸರಿದ್ದರೂ ರಾಹುಲ್ ದ್ರಾವಿಡ್ ಅವರಂತಹ ಸರ್ವ ಶ್ರೇಷ್ಠ ಆಟಗಾರರ ಹೆಸರು ಕಾಣಿಸಿಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಾರ್ವಕಾಲಿಕ ಪ್ಲೇಯಿಂಗ್ 11 ಸುಳ್ಳು ಎಂದಿದ್ದಾರೆ ಸಚಿನ್. ನಾನು ಯಾವುದೇ ರೀತಿಯ ಪ್ಲೇಯಿಂಗ್ ಇಲೆವೆನ್​ ಅನ್ನು ಆಯ್ಕೆ ಮಾಡಿಲ್ಲ. ಇದಾಗ್ಯೂ ನನ್ನ ಹೆಸರಿನಲ್ಲಿ ಫೇಕ್ ನ್ಯೂಸ್ ಹರಿಬಿಡಲಾಗಿದೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

“ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ಅನ್ನು ನಾನು ಆಯ್ಕೆ ಮಾಡಿರುವ ಬಗ್ಗೆ ವರದಿಗಳಾಗಿವೆ. ಇದು ಸುಳ್ಳು ಮತ್ತು ಇಂತಹ ಪೋಸ್ಟ್​ಗಳನ್ನು ಕಂಡರೆ, ದಯವಿಟ್ಟು ಅದನ್ನು ಫೇಕ್ ಎಂದು ರಿಪೋರ್ಟ್ ಮಾಡಿ” ಎಂದು ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಮನವಿ ಮಾಡಿದ್ದಾರೆ.

ಸಚಿನ್ ಅವರ ಆಯ್ಕೆ ಹೆಸರಿನಲ್ಲಿ ಹರಿದಾಡಿದ್ದ ಸಾರ್ವಕಾಲಿಕ XI ಕೆಲವು ಆಶ್ಚರ್ಯಕರ ಲೋಪಗಳು ಕಂಡು ಬಂದಿತ್ತು. ಗಮನಾರ್ಹವಾಗಿ, ಸಚಿನ್ ಅವರಲ್ಲದೆ, ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಈ ಪ್ಲೇಯಿಂಗ್ 11 ಸಚಿನ್ ಅವರ ಕಣ್ಣಿಗೂ ಬಿದ್ದಿದ್ದು, ಹೀಗಾಗಿ ಅದೊಂದು ಫೇಕ್ ಪೋಸ್ಟ್ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಅಂದಹಾಗೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಹರಿದಾಡಿದ್ದ ನಕಲಿ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದ ಆಟಗಾರರ ಹೆಸರು ಹೀಗಿದೆ:
ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಜಾಕ್ವೆಸ್ ಕಾಲಿಸ್, ಸೌರವ್ ಗಂಗೂಲಿ, ಆಡಮ್ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ವಾಸಿಂ ಅಕ್ರಮ್, ಹರ್ಭಜನ್ ಸಿಂಗ್ ಮತ್ತು ಗ್ಲೆನ್ ಮೆಕ್‌ಗ್ರಾತ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *