Sachin Tendulkar Birthday: ಇಂದು ಕ್ರಿಕೆಟ್ ದೇವರ ಹುಟ್ಟುಹಬ್ಬ: ಸಚಿನ್ ತೆಂಡೂಲ್ಕರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೇ? | Sachin Tendulkar BirthDay Here is a look at books and interviews that extol Sachin iconic success


Sachin Tendulkar Birthday: ಇಂದು ಕ್ರಿಕೆಟ್ ದೇವರ ಹುಟ್ಟುಹಬ್ಬ: ಸಚಿನ್ ತೆಂಡೂಲ್ಕರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೇ?

Sachin Tendulkar Birthday

ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಆಟಗಾರ, ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ (Sachin Tendulkar) ಅವರು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಚಿನ್ ಅವರ ಫೋಟೋವನ್ನು ಹಂಚಿಕೊಂಡು ಶುಭಾಶಯ ಕೋರುತ್ತಿದ್ದಾರೆ. 24 ವರ್ಷಗಳ ಕ್ರಿಕೆಟ್ (Cricket) ವೃತ್ತಿಜೀವನದಲ್ಲಿ ಲಿಟ್ಲ್ ಮಾಸ್ಟರ್ (Little Master) ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಇದರ ಜೊತಗೆ ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೂ ಕ್ರಿಕೆಟ್ ನಂಟು ಬೆಳೆಸಿಕೊಂಡಿರುವ ಸಚಿನ್ ‘ನಿರಂತರ ಕ್ರಿಕೆಟ್ ಆಡುವುದು ನನ್ನ ಕರ್ತವ್ಯ’ ಎಂಬ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.

ಮಹಾರಾಷ್ಟ್ರದ ಮುಂಬಯಿನಲ್ಲಿ 1973ರಂದು ಜನಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ಶತಕದ ಶತಕಗಳ ಸರದಾರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಗಳನ್ನು ಬಾರಿಸಿ ದಾಖಲೆ ಮಾಡಿದ ಕ್ರಿಕೆಟ್‌ ದಂತಕತೆ. 24 ವರ್ಷಗಳ ಕಾಲ ಕ್ರಿಕೆಟ್ ಆಡಿ ಬ್ಯಾಟಿಂಗ್​​ನಲ್ಲಿ ನೂರಾರು ದಾಖಲೆ ಬರೆದ ಸಚಿನ್, ಭಾರತ ರತ್ನ ಪುರಸ್ಕೃತರೂ ಹೌದು. ಇಂದಿಗೂ ಸಚಿನ್ ಅವರು ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಖೇಲ್‌ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ ಎಂದರೆ ಅದು ಸಚಿನ್.

ತೆಂಡುಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 16 ವರ್ಷದ ಹಾಲುಗಲ್ಲದ ಹುಡುಗ ಮುಂದೊಂದು ದಿನ 22 ಗಜಗಳ ಕ್ರಿಕೆಟ್ ಪಿಚ್ ಆಳುತ್ತಾನೆ ಎಂದು ಬಹುಶಃ ಯಾರಯ ಊಹಿಸಿರಲಿಕ್ಕೆ ಸಾಧ್ಯವಿಲ್ಲ. 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಬರೋಬ್ಬರಿ 34,357 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಏಕದಿನ ಪಂದ್ಯಾಗಳಲ್ಲಿ ಅಜೇಯ 200 ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 2010ರಲ್ಲೇ ಸಚಿನ್ ಅವರು ಪಾತ್ರರಾಗಿದ್ದಾರೆ. ದ. ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 147 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಏಕದಿನ ಕ್ರಿಕೆಟ್​​ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಇವರು 18, 426 ರನ್ ಕಲೆಹಾಕಿದ್ದಾರೆ. 49 ಶತಕ ಹಾಗೂ 96 ಅರ್ಧಶತಕ ಸಿಡಿಸಿದ್ದಾರೆ. ಬೌಲಿಂಗ್​​ನಲ್ಲೂ 154 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್​​ನಲ್ಲಿ 200 ಪಂದ್ಯಗಳನ್ನಾಡಿದ್ದು, 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕ ಬಾರಿಸಿದ್ದಾರೆ.

ಸಚಿನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನೇಕ ಸಿನಿಮಾ, ಪುಸ್ತಕಗಳಿವೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಸ್ವತಃ ಸಚಿನ್ ಅವರೇ ಬರೆದಿರುವ ‘Playing It My Way: My Autobiography’ ಪುಸ್ತಕದಲ್ಲಿ ವಿಸ್ತಾರವಾಗಿ ಕ್ರಿಕೆಟ್ ದೇವರ ಬಗ್ಗೆ ನೀವು ತಿಳಿದುಕೊಳ್ಳಬಹುದು. ಹಾಗೆಯೆ ವೈಭವ್ ಪುರಂದರ್ ಬರೆದಿರುವ ‘Sachin Tendulkar: A Definitive Biography’ ಕೂಡ ಚೆನ್ನಾಗಿದೆ. ESPNcricinfo ಪ್ರಕಟಿಸಿರುವ ‘Sachin Tendulkar: The Man Cricket Loved Back’ ನಲ್ಲಿ ಅನೇಕ ಮಾಹಿತಿಗಳಿವೆ. ಖಲೀಲ್ ಎಹೆಚ್ ಅನ್ಸಾರಿ ಅವರ ‘Sachin, Born to Bat: The Journey of Cricket’s Ultimate Centurion’ ಕೂಡ ಉತ್ತಮವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಜೇಮ್ಸ್ ಎರ್ಸಿಕ್ಕಿನ್ ನಿರ್ದೇಶನದ ‘Sachin: A Billion Dreams’ ಎಂಬ ಡಾಕ್ಯುಮೆಂಟರಿಯಲ್ಲೂ ಸಚಿನ್ ಕುರಿತ ಅನೇಕ ವಿಶೇಷತೆಗಳಿವೆ.

Faf du Plessis: ಹೀನಾಯವಾಗಿ ಸೋತರೂ ಧೃತಿಗೆಡದ ಡುಪ್ಲೆಸಿಸ್: ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ?

RCB vs SRH: ಇದು ಬೌಲರ್​​ಗಳ ತಂಡ: ಸತತ ಐದನೇ ಪಂದ್ಯವನ್ನೂ ಗೆದ್ದ ಸನ್​ರೈಸರ್ಸ್​​ ಹೈದರಾಬಾದ್

TV9 Kannada


Leave a Reply

Your email address will not be published.