Sadhguru Jaggi Vasudev: ಕ್ಯಾಮೆರಾ ಆಫ್ ಮಾಡ್ರಿ; ಟಿವಿ ಸಂದರ್ಶನದಲ್ಲಿ ತಾಳ್ಮೆ ಕಳೆದುಕೊಂಡ ಸದ್ಗುರು ಜಗ್ಗಿ ವಾಸುದೇವ್ | Sadhguru Jaggi Vasudev loses cool during BBC Tamil interview, asks Reporter to switches off camera


Sadhguru Jaggi Vasudev: ಕ್ಯಾಮೆರಾ ಆಫ್ ಮಾಡ್ರಿ; ಟಿವಿ ಸಂದರ್ಶನದಲ್ಲಿ ತಾಳ್ಮೆ ಕಳೆದುಕೊಂಡ ಸದ್ಗುರು ಜಗ್ಗಿ ವಾಸುದೇವ್

ಸದ್ಗುರು ಜಗ್ಗಿ ವಾಸುದೇವ್

Image Credit source: BBC

ಬಿಬಿಸಿ ತಮಿಳು ಚಾನೆಲ್​ನ ಕೆ. ಸುಬಗುಣಂ ಇಶಾ ಫೌಂಡೇಷನ್​ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಂದರ್ಶನ ಮಾಡುವಾಗ ಅವರು ಸಿಟ್ಟಿಗೆದ್ದಿದ್ದಾರೆ. ಈ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚೆನ್ನೈ: ಸ್ವಯಂಘೋಷಿತ ದೇವಮಾನವ ಎಂದು ಕರೆಯಲ್ಪಡುವ ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ತಮಿಳಿನ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ತಾಳ್ಮೆ ಕಳೆದುಕೊಂಡು, ರಿಪೋರ್ಟರ್ ಮೇಲೆ ಕಿರುಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಜಗ್ಗಿ ವಾಸುದೇವ್ ಅವರು ತಾಳ್ಮೆಯ ಬಗ್ಗೆ ಅನೇಕ ಸಂದರ್ಭಗಳಲ್ಲಿ ಬೋಧಿಸಿದ್ದಾರೆ. ಆದರೆ, ಬಿಬಿಸಿ ತಮಿಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡು, ಮಾತನಾಡಿದ್ದಾರೆ. ಈ ಸಂದರ್ಶನದ ಮಧ್ಯದಲ್ಲಿ ಕೋಪಗೊಂಡ ಸದ್ಗುರು ಜಗ್ಗಿ ರಿಪೋರ್ಟರ್​​ಗೆ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಲು ಮನವಿ ಮಾಡಿದ್ದಾರೆ.

ಬಿಬಿಸಿ ತಮಿಳಿನ ಕೆ. ಸುಬಗುಣಂ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಂದರ್ಶನ ಮಾಡಿದಾಗ ಈ ಘಟನೆ ಸಂಭವಿಸಿದೆ. ಈ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪತ್ರಕರ್ತರ ಪ್ರಶ್ನೆಗಳಿಂದ ಜಗ್ಗಿ ಹೆಚ್ಚು ವಿಚಲಿತರಾಗಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾದ ಜಗ್ಗಿ ವಾಸುದೇವ್ ಅವರ ‘ಮಣ್ಣು ಉಳಿಸಿ ಆಂದೋಲನ’ದ ಬಗ್ಗೆ ರಿಪೋರ್ಟರ್ ಮಾತನಾಡುವುದರೊಂದಿಗೆ ಸಂದರ್ಶನ ಪ್ರಾರಂಭವಾಗುತ್ತದೆ. ಸದ್ಗುರು ಜಗ್ಗಿ ವಾಸುದೇವ್ ಅದಕ್ಕಾಗಿಯೇ ತಮ್ಮ ಬೈಕ್​ನಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ. ಆದರೂ, ತಮ್ಮ ಇಶಾ ಫೌಂಡೇಶನ್‌ಗೆ ಪರಿಸರ ಅನುಮತಿಯ ವಿವಾದದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಸದ್ಗುರು ಸಿಟ್ಟಿಗೆದ್ದಿದ್ದಾರೆ. ಕ್ಯಾಮೆರಾವನ್ನು ಆಫ್ ಮಾಡಿ, ಸಂದರ್ಶನ ನಿಲ್ಲಿಸುವಂತೆ ರಿಪೋರ್ಟರ್​​ಗೆ ಹೇಳಿದ್ದಾರೆ.

TV9 Kannada


Leave a Reply

Your email address will not be published.