Sai Pallavi: ಪಾತ್ರಕ್ಕಾಗಿ ಸಾಯಿ ಪಲ್ಲವಿ 2 ದಿನ ಉಪವಾಸ; ಇವರೇ ನಿಜವಾದ ನ್ಯಾಷನಲ್​ ಕ್ರಶ್​ ಎಂದ ಫ್ಯಾನ್ಸ್​ | Virata Parvam actress Sai Pallavi did not have food for two days says director Venu Udugula


Sai Pallavi: ಪಾತ್ರಕ್ಕಾಗಿ ಸಾಯಿ ಪಲ್ಲವಿ 2 ದಿನ ಉಪವಾಸ; ಇವರೇ ನಿಜವಾದ ನ್ಯಾಷನಲ್​ ಕ್ರಶ್​ ಎಂದ ಫ್ಯಾನ್ಸ್​

ಸಾಯಿ ಪಲ್ಲವಿ

Virata Parvam | Sai Pallavi: ಕೆಲಸದ ಮೇಲೆ ಸಾಯಿ ಪಲ್ಲವಿ ತೋರಿಸುವ ಬದ್ಧತೆ ಬಗ್ಗೆ ‘ವಿರಾಟ ಪರ್ವಂ’ ನಿರ್ದೇಶಕರು ಮಾತನಾಡಿದ್ದಾರೆ. ಈ ವಿಚಾರ ಕೇಳಿ ಎಲ್ಲರೂ ಸಾಯಿ ಪಲ್ಲವಿಗೆ ಭೇಷ್​ ಎನ್ನುತ್ತಿದ್ದಾರೆ.

ನಟಿ ಸಾಯಿ ಪಲ್ಲವಿ (Sai Pallavi) ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಇಷ್ಟಪಡುತ್ತಾರೆ. ಜನರು ಈ ಪರಿ ಪ್ರೀತಿ ತೋರಿಸಲು ಹಲವು ಕಾರಣಗಳಿವೆ. ನಿರ್ದೇಶಕರಿಗೂ ಈ ನಟಿಯನ್ನು ಕಂಡರೆ ಅಚ್ಚುಮೆಚ್ಚು. ಕೊಟ್ಟ ಪಾತ್ರಕ್ಕೆ ಸಾಯಿ ಪಲ್ಲವಿ ಅವರು ಸೂಕ್ತ ನ್ಯಾಯ ಸಲ್ಲಿಸುತ್ತಾರೆ ಎಂಬ ಭರವಸೆ ಎಲ್ಲ ನಿರ್ದೇಶಕರಿಗೂ ಮೂಡಿದೆ. ಈ ವಾರ (ಜೂನ್ 17) ‘ವಿರಾಟ ಪರ್ವಂ’ (Virata Parvam) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ನೋಡಿ ಫ್ಯಾನ್ಸ್​ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನ ರೀತಿಯೇ ಸಾಯಿ ಪಲ್ಲವಿ ಪಾತ್ರಕ್ಕೂ ಪ್ರಾಮುಖ್ಯತೆ ಸಿಕ್ಕಿದೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿದೆ. ಅಚ್ಚರಿ ಏನೆಂದರೆ ಈ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರು 2 ದಿನ ಉಪವಾಸ ಮಾಡಿದ್ದರು ಎಂದು ನಿರ್ದೇಶಕ ವೇಣು ಉಡುಗುಲ ಅವರು ಹೇಳಿದ್ದಾರೆ. ಈ ವಿಷಯ ತಿಳಿದ ಬಳಿಕ ‘ಸಾಯಿ ಪಲ್ಲವಿ ಅವರೇ ನಿಜವಾದ ನ್ಯಾಷನಲ್​ ಕ್ರಶ್​’ (National Crush) ಎನ್ನುತ್ತಿದ್ದಾರೆ ಅವರ ಫ್ಯಾನ್ಸ್​.

ಪಾತ್ರ ಯಾವ ರೀತಿ ಇರುತ್ತದೆಯೋ ಅದಕ್ಕ ತಕ್ಕಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧವಾಗಬೇಕಾಗುತ್ತದೆ. ಈ ಚಿತ್ರದಲ್ಲಿ ನಾಯಕಿಯು ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಎರಡು ದಿನ ಊಟ ಮಾಡಿರುವುದಿಲ್ಲ. ಆ ದೃಶ್ಯದಲ್ಲಿ ನಟಿಸಲು ಸಾಯಿ ಪಲ್ಲವಿ ಕೂಡ ಎರಡು ದಿನ ಊಟ ಮಾಡಿರಲಿಲ್ಲ ಎಂಬ ವಿಚಾರವನ್ನು ನಿರ್ದೇಶಕರು ಹೇಳಿದ್ದಾರೆ. ಅವರ ಈ ಬದ್ಧತೆ ಕಂಡು ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಸಿನಿಮಾದಲ್ಲಿ ಆ ದೃಶ್ಯ ಹೇಗೆ ಮೂಡಿಬಂದಿರಬಹುದು ಎಂಬುದನ್ನು ನೋಡಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

TV9 Kannada


Leave a Reply

Your email address will not be published.