Prabhas | Hombale Films: ‘ಸಲಾರ್’ ಚಿತ್ರತಂಡದ ಕಡೆಯಿಂದ ಆಗಸ್ಟ್ 15ರಂದು ಹೊಸ ಮಾಹಿತಿ ಸಿಗಲಿದೆ. ಅದೇನು ಎಂಬುದನ್ನು ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ.

ಪ್ರಭಾಸ್, ಪ್ರಶಾಂತ್ ನೀಲ್
ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ (Hombale Films) ಬ್ಯಾನರ್ ಮೂಲಕ ಹಲವು ಸಿನಿಮಾಗಳು ಮೂಡಿಬರುತ್ತಿವೆ. ಈ ಸಂಸ್ಥೆ ನಿರ್ಮಿಸುತ್ತಿರುವ ಎಲ್ಲ ಚಿತ್ರಗಳ ಮೇಲೂ ಸಖತ್ ನಿರೀಕ್ಷೆ ಇದೆ. ಅದರಲ್ಲೂ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ‘ಸಲಾರ್’ (Salaar Movie) ಸಿನಿಮಾಗಾಗಿ ಜನರು ತುದಿಗಾಲಿನಲ್ಲಿ ನಿಂತು ಕಾದಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ತಿಳಿಯಬೇಕು ಎಂದು ಸಿನಿಪ್ರಿಯರು ಕಾದಿದ್ದಾರೆ. ಅದಕ್ಕಾಗಿ ಈಗ ದಿನಾಂಕ ನಿಗದಿ ಆಗಿದೆ. ಆಗಸ್ಟ್ 15ರಂದು ಮಧ್ಯಾಹ್ನ 12.58ಕ್ಕೆ ದೊಡ್ಡ ಅನೌನ್ಸ್ಮೆಂಟ್ ಮಾಡುವುದಾಗಿ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಘೋಷಿಸಿದೆ. ಆ ಮೂಲಕ ಪ್ರಭಾಸ್ (Prabhas) ಅಭಿಮಾನಿಗಳ ವಲಯದಲ್ಲಿ ಕಾತರ ಇನ್ನಷ್ಟು ಹೆಚ್ಚಾಗುವಂತೆ ಮಾಡಲಾಗಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಭಾರಿ ಸಕ್ಸಸ್ ಬಳಿಕ ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಅವರು ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಿಗೆ ಭಾರಿ ಕುತೂಹಲ ಇದೆ. ಈಗಾಗಲೇ ಚಿತ್ರದ ಬಗ್ಗೆ ಅನೇಕ ಬಗೆಯ ಗುಸುಗುಸು ಹರಿದಾಡುತ್ತಿವೆ. ಚಿತ್ರತಂಡದ ಕಡೆಯಿಂದಲೇ ಆಗಸ್ಟ್ 15ರಂದು ಹೊಸ ಮಾಹಿತಿ ಸಿಗಲಿದೆ. ಅದೇನು ಎಂಬುದನ್ನು ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ.
ವಿಜಯ್ ಕಿರಗಂದೂರು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ಅವರು ಸಂಪೂರ್ಣ ರಗಡ್ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಹೊರಬಂದಿರುವ ಪೋಸ್ಟರ್ಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈಗ ಹೊಸ ಅಪ್ಡೇಟ್ ತಿಳಿಯುವ ಸಮಯ ಹತ್ತಿರ ಆಗಿದೆ. ಈ ಚಿತ್ರದಲ್ಲಿ ಖ್ಯಾತ ನಟಿ ಶ್ರುತಿ ಹಾಸನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬೃಹತ್ ಸೆಟ್ಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗುತ್ತಿದೆ.
𝐆𝐞𝐭 𝐫𝐞𝐚𝐝𝐲 𝐟𝐨𝐫 #𝐒𝐚𝐥𝐚𝐚𝐫. 𝐒𝐭𝐚𝐲 𝐓𝐮𝐧𝐞𝐝.#Prabhas @prashanth_neel @VKiragandur @hombalefilms @shrutihaasan @IamJagguBhai @bhuvangowda84 @RaviBasrur @shivakumarart @SalaarTheSaga pic.twitter.com/m7GFPsGo0D
— Hombale Films (@hombalefilms) August 13, 2022
ಪ್ರಭಾಸ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಬಾಹುಬಲಿ’ ಬಳಿಕ ಅವರ ನಟಿಸಿದ ‘ಸಾಹೋ’ ಮತ್ತು ‘ರಾಧೆ ಶ್ಯಾಮ್’ ಚಿತ್ರಗಳು ಸೋಲುಂಡವು. ಹಾಗಾಗಿ ಅವರು ‘ಸಲಾರ್’ ಸಿನಿಮಾ ಮೂಲಕ ಒಂದು ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಬಹುತೇಕ ತಂತ್ರಜ್ಞರು ‘ಸಲಾರ್’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದು, ಭುವನ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ.