Salman Khan Net Worth: ಸಲ್ಮಾನ್ ಖಾನ್​ ಸಂಭಾವನೆ, ಒಟ್ಟೂ ಆಸ್ತಿ ಎಷ್ಟು? ಅಬ್ಬಬ್ಬಾ ಇಷ್ಟೊಂದಾ? | Salman Khan Net worth And Salary Sallu own 2000 Plus crore Net worth


Salman Khan Net Worth: ಸಲ್ಮಾನ್ ಖಾನ್​ ಸಂಭಾವನೆ, ಒಟ್ಟೂ ಆಸ್ತಿ ಎಷ್ಟು? ಅಬ್ಬಬ್ಬಾ ಇಷ್ಟೊಂದಾ?

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಬಹಳ ಕಷ್ಟಪಟ್ಟು ಮೇಲೆ ಬಂದ ನಟ. ಆರಂಭದಲ್ಲಿ ಅವಕಾಶಗಳು ಇಲ್ಲದಾಗ ಸಲ್ಲು ದುಡ್ಡು ಕೊಟ್ಟು ಸುಳ್ಳು ಸುದ್ದಿ ಬರೆಸಿಕೊಂಡಿದ್ದರು. ಈಗ ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ.

ನಟ ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಬೇಡಿಕೆಯ ನಟ. ಸಲ್ಲು ಭಾಯ್ ಎಂದೇ ಅವರು ಫೇಮಸ್. ಅವರು ಬಾಲಿವುಡ್​ನಲ್ಲಿ (Bollywood) ದೊಡ್ಡ ಮಟ್ಟದ ಹವಾ ಇಟ್ಟಿದ್ದಾರೆ. ಅವರು ಪ್ರತಿ ಚಿತ್ರಕ್ಕೆ ಕೋಟಿಕೋಟಿ ಸಂಭಾವನೆ ಪಡೆಯುತ್ತಾರೆ. ಸಲ್ಲು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕ ಹೊರತಾಗಿಯೂ ಆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಉದಾಹರಣೆ ಸಾಕಷ್ಟಿದೆ. ಅವರಿಗೆ ಇತ್ತೀಚೆಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಆದಾಗ್ಯೂ ಅವರ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಅವರ ನೆಟ್​ವರ್ತ್​ ಎಷ್ಟಿದೆ, ಅವರು ಪ್ರತಿ ಸಿನಿಮಾಗೆ ಪಡೆವ ಸಂಭಾವನೆ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಂಭಾವನೆ

ಸಲ್ಮಾನ್ ಖಾನ್ ಬಹಳ ಕಷ್ಟಪಟ್ಟು ಮೇಲೆ ಬಂದ ನಟ. ಆರಂಭದಲ್ಲಿ ಅವಕಾಶಗಳು ಇಲ್ಲದಾಗ ಸಲ್ಲು ದುಡ್ಡು ಕೊಟ್ಟು ಸುಳ್ಳು ಸುದ್ದಿ ಬರೆಸಿಕೊಂಡಿದ್ದರು. ಈಗ ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. 2016ರ ‘ಸುಲ್ತಾನ್​’ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನುವ ವಿಚಾರ ಸುದ್ದಿ ಆಗಿತ್ತು. ನಂತರ ‘ಟೈಗರ್ ಜಿಂದಾ ಹೈ’ ಚಿತ್ರಕ್ಕಾಗಿ 130 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಂಡಿದ್ದರು.

ನೆಟ್​ವರ್ತ್​

ಸಲ್ಮಾನ್​ ಖಾನ್​ಗೆ ಸಿನಿಮಾದಿಂದ ಮಾತ್ರ ಹಣ ಬರುತ್ತಿಲ್ಲ. ಅವರು ಸಾಕಷ್ಟು ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಹಲವು ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರ ಒಟ್ಟೂ ಆಸ್ತಿ 2,225 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಇಂಡಿಯಾ.ಕಾಮ್ ವರದಿ ಪ್ರಕಟ ಮಾಡಿದೆ.

ಹಲವು ಕಡೆಗಳಲ್ಲಿ ಪ್ರಾಪರ್ಟಿ  

ಸಲ್ಮಾನ್ ಖಾನ್ ಮುಂಬೈನ ಕೆಲವು ಪ್ರತಿಷ್ಠಿತ ಪ್ರದೇಶಗಳಲ್ಲಿ ಜಾಗ ಹೊಂದಿದ್ದಾರೆ. ಬಾಂದ್ರಾದಲ್ಲಿ ದೊಡ್ಡ ಅಪಾರ್ಟ್​ಮೆಂಟ್ ಇದೆ. ಇನ್ನು ಪನ್ವೇಲ್​ನಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಇದಲ್ಲದೆ ಇನ್ನೂ ಅನೇಕ ಕಡೆಗಳಲ್ಲಿ ಸಲ್ಮಾನ್ ಪ್ರಾಪರ್ಟಿ ಹೊಂದಿದ್ದಾರೆ.

ತಿಂಗಳ ವೇತನ

ಸಲ್ಮಾನ್ ಖಾನ್ ಅವರು ಪ್ರತಿ ತಿಂಗಳು ಕೋಟಿ ಕೋಟಿ ಸಂಭಾವನೆ ಎಣಿಸುತ್ತಾರೆ. ಒಂದು ಲೆಕ್ಕಾಚಾರದ ಪ್ರಕಾರ ಅವರಿಗೆ ಪ್ರತಿ ತಿಂಗಳು 16 ಕೋಟಿ ರೂಪಾಯಿ ವೇತನ ಬರುತ್ತದೆ.

ಕೈಯಲ್ಲಿದೆ ಹಲವು ಸಿನಿಮಾ

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ‘ಟೈಗರ್ 3’ ಸಿನಿಮಾದಲ್ಲಿ ಸಲ್ಲು ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 100+ ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಶಾರುಖ್​ ನಟನೆಯ ‘ಪಠಾಣ್​’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದಕ್ಕಾಗಿ ಅವರು ಸಂಭಾವನೆ ಪಡೆದಿಲ್ಲ. ‘ಕಭಿ ಈದ್​ ಕಭಿ ದಿವಾಲಿ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.