ನಿನ್ನೆ ಬೆಳಗ್ಗೆ 11 ಗಂಟೆಗೆ ಸಲ್ಮಾನ್ ರಶ್ದಿಯನ್ನು ಪರಿಚಯಿಸುತ್ತಿದ್ದಾಗ ಆರೋಪಿ ಹದಿ ಮತರ್ ಕಪ್ಪು ಬಟ್ಟೆಯನ್ನು ಧರಿಸಿ ವೇದಿಕೆಯ ಮೇಲೆ ಹಾರಿ ಸಲ್ಮಾನ್ ರಶ್ದಿಗೆ ಹಲವು ಬಾರಿ ಇರಿದಿದ್ದಾನೆ.

ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆದ ದೃಶ್ಯ
ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ (New York) ನಗರದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿ (Salman Rushdie) ಅವರನ್ನು 24 ವರ್ಷದ ಹದಿ ಮತರ್ ಎಂಬಾತ ಕ್ರೂರವಾಗಿ ಇರಿದಿದ್ದ. ಈ ಘಟನೆಯ ವಿಡಿಯೋಗಳಲ್ಲಿ ಸಲ್ಮಾನ್ ರಶ್ದಿ ಚಾಕು ಇರಿತದಿಂದ ವೇದಿಕೆಯ ಮೇಲೆ ಹೇಗೆ ಕೆಳಗೆ ಬಿದ್ದರು ಎಂಬುದನ್ನು ನೋಡಬಹುದು. ಅದಾದ ನಂತರ ಅವರನ್ನು ಹೆಲಿಕಾಪ್ಟರ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸಲ್ಮಾನ್ ರಶ್ದಿ ಅವರ ಹೊಟ್ಟೆಗೆ ಗಂಭೀರವಾದ ಗಾಯವಾಗಿದ್ದು, ಯಕೃತ್ತಿಗೆ ಹಾನಿಯಾಗಿದೆ ಎಂದು ಸಲ್ಮಾನ್ ರಶ್ದಿಯ ಏಜೆಂಟ್ ಹೇಳಿದ್ದಾರೆ. ಅಲ್ಲದೆ, ಈ ದಾಳಿಯಿಂದ ಸಲ್ಮಾನ್ ರಶ್ದಿ ಒಂದು ಕಣ್ಣು ಕಳೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ದಾಳಿ ನಡೆದಿದ್ದು ಹೇಗೆಂಬ ಮಾಹಿತಿ ಇಲ್ಲಿದೆ:
ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಯಕ್ರಮ ಆರಂಭವಾಗುವ ವೇಳೆ ದಾಳಿ ನಡೆದಿದೆ. ಸಲ್ಮಾನ್ ರಶ್ದಿಯನ್ನು ಪರಿಚಯಿಸುತ್ತಿದ್ದಾಗ ಆರೋಪಿ ಹದಿ ಮತರ್ ಕಪ್ಪು ಬಟ್ಟೆಯನ್ನು ಧರಿಸಿ ವೇದಿಕೆಯ ಮೇಲೆ ಹಾರಿ ಸಲ್ಮಾನ್ ರಶ್ದಿಗೆ ಹಲವು ಬಾರಿ ಇರಿದಿದ್ದಾನೆ. ಆ ವೇಳೆ ಇದ್ದಕ್ಕಿದ್ದಂತೆ ನಡೆದ ದಾಳಿಯಿಂದ ಅಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಅನೇಕ ಬಾರಿ ಇರಿದಿದ್ದರಿಂದ ಸಲ್ಮಾನ್ ರಶ್ದಿ ಅವರಿಗೆ ತೀವ್ರ ಗಾಯಗಳಾಗಿವೆ. ಇದಾದ ನಂತರ ಸಲ್ಮಾನ್ ರಶ್ದಿ ಕೆಳಗೆ ಬಿದ್ದರು. ಅವರ ಕುತ್ತಿಗೆಯ ಬಲಭಾಗದಲ್ಲಿ ಇರಿಯಲಾಗಿದ್ದು, ತಕ್ಷಣ ರಕ್ತದ ಮಡುವಿನಲ್ಲಿ ಬಿದ್ದರು. ಅವರಿನ್ನೂ ಉಸಿರಾಡುತ್ತಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದರಿಂದ ತುರ್ತು ಚಿಕಿತ್ಸೆ ನೀಡಲಾಯಿತು. ಬಳಿಕ ಹೆಲಿಕಾಪ್ಟರ್ನಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.