
Image Credit source: Vijay Deverakonda/ Instagram
Kushi Movie: ಇತ್ತೀಚೆಗೆ ಸಮಂತಾ ಹೆಚ್ಚಾಗಿ ಬೋಲ್ಡ್ ಪಾತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಈ ಹಿಂದೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈರ್ವರೂ ನಟಿಸುತ್ತಿರುವ ‘ಖುಷಿ’ ಚಿತ್ರದಲ್ಲಿ ಇದು ಮುಂದುವರೆಯಲಿದೆ ಎನ್ನುತ್ತಿವೆ ವರದಿಗಳು.
ಇತ್ತೀಚೆಗೆ ಸಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಖುಷಿ’ (Kushi Movie) ಚಿತ್ರದ ಫಸ್ಟ್ ಲುಕ್ ಹಂಚಿಕೊಳ್ಳಲಾಗಿತ್ತು. ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಣವಾಗಿರುವ ಈ ರೊಮ್ಯಾಂಟಿಕ್ ಚಿತ್ರ ಈಗಾಗಲೇ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಬಂದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೌದು, ಸಮಂತಾ ಇತ್ತೀಚೆಗೆ ಬೋಲ್ಡ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ‘ಖುಷಿ’ ಚಿತ್ರದಲ್ಲೂ ಮುಂದುವರೆಯಲಿವೆ ಎನ್ನುತ್ತಿವೆ ವರದಿಗಳು. ಇತ್ತ ನಾಯಕನಟ ವಿಜಯ್ ದೇವರಕೊಂಡ ಈಗಾಗಲೇ ಹಲವು ಚಿತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಶಾಲಿನಿ ಪಾಂಡೆ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರೊಂದಿಗೆ ಅವರು ರೊಮ್ಯಾಂಟಿಕ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ‘ಖುಷಿ’ ಚಿತ್ರದಲ್ಲೂ ಮುಂದುವರೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಬಾಲಿವುಡ್ ಲೈಫ್ ವರದಿ ಮಾಡಿದ್ದು, ಸ್ಯಾಮ್ ಹಾಗೂ ವಿಜಯ್ ಜೋಡಿ ಲಿಪ್ಲಾಕ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಲಿದ್ದಾರೆ ಎಂದಿದೆ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
‘ಮಹಾನಟಿ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ವಿಜಯ್-ಸಮಂತಾ ‘ಖುಷಿ’ ಸಿನಿಮಾದ ಮೂಲಕ ಪೂರ್ಣಪ್ರಮಾಣದಲ್ಲಿ ನಾಯಕ-ನಾಯಕಿಯಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಖುಷಿ’ಯ ಫಸ್ಟ್ ಲುಕ್ ಹಂಚಿಕೊಳ್ಳಲಾಗಿತ್ತು. ಬುಧವಾರದಂದು ಚಿತ್ರದ ಟೈಟಲ್ ಟ್ರ್ಯಾಕ್ನ ತುಣುಕನ್ನು ಹಂಚಿಕೊಳ್ಳಲಾಗಿದೆ. ಟೈಟಲ್ ಟ್ರ್ಯಾಕ್ನ ಸಂಗೀತ ಎಲ್ಲರ ಮನಗೆದ್ದಿದ್ದು, ಒಂದು ಪರಿಪೂರ್ಣ ರೊಮ್ಯಾಂಟಿಕ್ ಚಿತ್ರ ಇದಾಗಿರಬಹುದು ಎಂಬ ಸೂಚನೆ ನೀಡಿದೆ.
ಖುಷಿ ಟೈಟಲ್ ಟ್ರ್ಯಾಕ್ ಟೀಸರ್ ಇಲ್ಲಿದೆ: