1/5

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6 ವರ್ಷದ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು.
2/5

ಇಂದು (ಜನವರಿ 13) ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ. ಇದು ಅವಳ ಅಭಿಮಾನಿಗಳಿಗೆ ದುಃಖ ತಂದಿದೆ.
3/5

ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಸಮನ್ವಿ. ತಾಯಿ ಅಮೃತಾ ಜತೆ ಅವರು ಈ ರಿಯಾಲಿಟಿಶೋಗೆ ಬಂದಿದ್ದರು. ಇಂದು ಬೆಂಗಳೂರಿನ (Bengaluru) ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ತೆರಳುತ್ತಿದ್ದರು.
4/5

ಈ ವೇಳೆ ಸ್ಕೂಟರ್ಗೆ ಹಿಂದಿನಿಂದ ಲಾರಿ ಬಂದು ಹೊಡೆದಿದೆ. ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
5/5

ಶೋಗೆ ಬರುವುದಕ್ಕೂ ಮೊದಲು ಮಾತನಾಡಿದ್ದ ಸಮನ್ವಿ, ‘ನನಗೆ ಅಮ್ಮ ಎಂದರೆ ತುಂಬಾನೇ ಅಚ್ಚುಮೆಚ್ಚು. ನಾನು ಅವಳನ್ನು ಜಾಸ್ತಿ ಪ್ರೀತಿ ಮಾಡುತ್ತೇನೆ. ಪಾರ್ಟಿಗೆ ಹೋಗ್ತಾರೆ. ಅಪ್ಪನ ಜತೆ ಹಣ ಶೇರ್ ಮಾಡ್ತಾರೆ. ಈ ಕಾರಣಕ್ಕೆ ನನಗೆ ಅವಳು ಹೆಚ್ಚು ಇಷ್ಟ’ ಎಂದು ಹೇಳಿಕೊಂಡಿದ್ದಳು.