
Image Credit source: Financial Express
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದ ತನಿಖೆಗಾಗಿ ವಿವಾದಾತ್ಮಕ ಅಧಿಕಾರಿ ಸಮೀರ್ ವಾಂಖೆಡೆ ಮುಂಬೈ ಎನ್ಸಿಬಿ ವಲಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಭಾರೀ ಸುದ್ದಿಯಲ್ಲಿದ್ದರು.
ಮುಂಬೈ: ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಡ್ರಗ್ಸ್ ಪತ್ತೆಯಾದ ಪ್ರಕರಣದಲ್ಲಿ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಸೇರಿದಂತೆ ಹಲವರನ್ನು ಎನ್ಸಿಬಿ ಬಂಧಿಸಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಎನ್ಸಿಬಿಯಿಂದ ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ನೀಡಲಾಗಿದೆ. ಆಗ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (NCB) ಮುಖ್ಯಸ್ಥರಾಗಿದ್ದ ಭಾರತೀಯ ಕಂದಾಯ ಸೇವಾ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ಅವರನ್ನು ಸೋಮವಾರ ಚೆನ್ನೈನಲ್ಲಿರುವ ಆದಾಯ ತೆರಿಗೆದಾರರ ನಿರ್ದೇಶನಾಲಯದ ಡಿಜಿಯನ್ನಾಗಿ ವರ್ಗಾಯಿಸಲಾಗಿದೆ.
ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಇತ್ತೀಚೆಗೆ ಚಾರ್ಜ್ ಶೀಟ್ ಸಲ್ಲಿಸಿದ ಎನ್ಸಿಬಿ, ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಡ್ರಗ್ ವಿರೋಧಿ ಸಂಸ್ಥೆ ಸ್ಥಾಪಿಸಿದ ಎಸ್ಐಟಿ ವಾಂಖೆಡೆ ನೇತೃತ್ವದ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಿಕೊಂಡಿದೆ. ಎನ್ಸಿಬಿಯಲ್ಲಿ ಅವರ ಅಧಿಕಾರಾವಧಿಯ ಅಂತ್ಯದ ನಂತರ 2008-ಬ್ಯಾಚ್ ಐಆರ್ಎಸ್ ಅಧಿಕಾರಿಯನ್ನು ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿರುವ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ)ಗೆ ವರ್ಗಾಯಿಸಲಾಯಿತು. ವಾಂಖೆಡೆ ಜೂನ್ 10ರಂದು ತಮ್ಮ ಚೆನ್ನೈ ಪೋಸ್ಟಿಂಗ್ ಅನ್ನು ಸ್ವೀಕರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.