
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಪೋಸ್ಟರ್
Akshay Kumar | Manushi Chillar: ಜೂನ್ 3ರಂದು ವಿಶ್ವಾದ್ಯಂತ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ರಿಲೀಸ್ ಆಗಲಿದ್ದು, ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯಬಹುದು ಎಂಬ ನಿರೀಕ್ಷೆ ಇದೆ. ಆದರೆ ರಿಲೀಸ್ಗೆ ಎರಡು ದಿನವಿರುವಾಗಲೇ ಚಿತ್ರತಂಡಕ್ಕೆ ಹಿನ್ನಡೆಯಾಗಿದೆ.
ಅಕ್ಷಯ್ ಕುಮಾರ್ (Akshay Kumar) ನಟನೆಯ ಬಹುನಿರೀಕ್ಷಿತ ಚಿತ್ರ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ತೆರೆಗೆ ಬರಲು ಸಿದ್ಧವಾಗಿದೆ. ಜೂನ್ 3ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದ್ದು, ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯಬಹುದು ಎಂಬ ನಿರೀಕ್ಷೆ ಇದೆ. ಆದರೆ ರಿಲೀಸ್ಗೆ ಎರಡು ದಿನವಿರುವಾಗಲೇ ಚಿತ್ರತಂಡಕ್ಕೆ ಹಿನ್ನಡೆಯಾಗಿದೆ. ವರದಿಗಳ ಪ್ರಕಾರ ಓಮನ್ ಮತ್ತು ಕುವೈತ್ನಲ್ಲಿ ‘ಸಾಮ್ರಾಟ್ ಪೃಥ್ವಿರಾಜ್‘ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಆ ದೇಶಗಳು ಈ ಚಿತ್ರವನ್ನು ಬ್ಯಾನ್ ಮಾಡಿವೆ. ಐತಿಹಾಸಿಕ ಕಥಾನಕ ಹೊಂದಿರುವ ಚಿತ್ರವನ್ನು ಬ್ಯಾನ್ ಮಾಡಿದ್ದೇಕೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಆದರೆ ಬಲ್ಲಮೂಲಗಳನ್ನು ಉಲ್ಲೇಖಿಸಿ ‘ಬಾಲಿವುಡ್ ಹಂಗಾಮಾ’ ಓಮನ್ ಮತ್ತು ಕುವೈತ್ನಲ್ಲಿ ಅಕ್ಷಯ್ ನಟನೆಯ ಚಿತ್ರ ಬ್ಯಾನ್ ಆಗಿರುವುದರ ಬಗ್ಗೆ ವರದಿ ಮಾಡಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.
ಪೃಥ್ವಿರಾಜ್ ಚೌಹಾಣ್ ಕಥಾನಕವನ್ನು ಆಧರಿಸಿ ತಯಾರಾಗಿರುವ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಮಾನುಷಿ ಚಿಲ್ಲರ್, ಸಂಜಯ್ ದತ್ ಮೊದಲಾದ ತಾರೆಯರು ಬಣ್ಣಹಚ್ಚಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸುತ್ತಿರುವ ಈ ಚಿತ್ರದ ಮೂಲಕ ಮಾನುಷಿ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.
ಈ ಮೊದಲು ಚಿತ್ರಕ್ಕೆ ‘ಪೃಥ್ವಿರಾಜ್’ ಎಂಬ ಶೀರ್ಷಿಕೆ ಇಡಲಾಗಿತ್ತು. ಕರಣಿ ಸೇನ ಸಂಘಟನೆಯು ಹೆಸರನ್ನು ಬದಲಾಯಿಸುವಂತೆ ಕೋರಿಕೊಂಡಿತ್ತು. ಹೀಗಾಗಿ ಮೇ 27ರಂದು ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲಾಗಿತ್ತು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ